/newsfirstlive-kannada/media/post_attachments/wp-content/uploads/2025/03/pomegranate-production-2.jpg)
ದಾಳಿಂಬೆ ವಿಶ್ವದಲ್ಲಿ ಅತಿಹೆಚ್ಚು ಬೇಡಿಕೆಯನ್ನು ಹೊಂದಿರುವ ಹಣ್ಣು. ಯುಎಸ್, ಕೆನಡಾ ಹಾಗೂ ಯುರೋಪ್ ರಾಷ್ಟ್ರಗಳು ಈ ಹಣ್ಣನ್ನು ಅತಿಹೆಚ್ಚು ಆಮದು ಮಾಡಿಕೊಳ್ಳುತ್ತವೆ. ವಿಶ್ವದಲ್ಲಿಯೇ ಅತಿಹೆಚ್ಚು ದಾಳಿಂಬೆಯನ್ನು ಉತ್ಪಾದಿಸುವ ನಂಬರ್ ಒನ್ ದೇಶ ಅಂದ್ರೆ ಅದು ಇರಾನ್. ಭಾರತ ಅತಿಹೆಚ್ಚು ದಾಳಿಂಬೆ ಉತ್ಪಾದನೆ ಮಾಡುವ ದೇಶಗಳಲ್ಲಿ 7ನೇ ಸ್ಥಾನದಲ್ಲಿದೆ. ಆದ್ರೆ ಭಾರತದಲ್ಲಿ ಅತಿಹೆಚ್ಚು ದಾಳಿಂಬೆ ಬೆಳೆಯುವ ರಾಜ್ಯ ಯಾವುದು ಗೊತ್ತಾ? ಕರ್ನಾಟಕ ಟಾಪ್ 10 ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
ಭಾರತದ ಬಹುತೇಕ ರಾಜ್ಯಗಳು ದಾಳಿಂಬೆ ಹಣ್ಣು ಬೆಳೆಯುವುದನ್ನು ರೂಢಿಸಿಕೊಂಡಿವೆ. ಕಾರಣ ಅದಕ್ಕಿರುವ ಬೇಡಿಕೆ. ಹರಿಯಾಣದಲ್ಲಿ ದೇಶದಲ್ಲಿನ ಪ್ರತಿಶತ 0.15 ರಷ್ಟು ದಾಳಿಂಬೆ ಫಸಲನ್ನು ಬೆಳೆಯಲಾಗುತ್ತದೆ. ಇದು ಟಾಪ್ 10 ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇನ್ನು 9ನೇ ಸ್ಥಾನದಲ್ಲಿರುವ ಛತ್ತೀಸ್ಗಢ, ದೇಶದಲ್ಲಿ ಉತ್ಪಾದನೆಯಾಗುವ ದಾಳಿಂಬೆಯಲ್ಲಿ ಶೇಕಡಾ 0.20 ರಷ್ಟು ಬೆಳೆಯನ್ನು ಬೆಳಯುತ್ತದೆ. ನೆರೆ ರಾಜ್ಯ ತಮಿಳುನಾಡು ಶೇಕಡಾ 0.20 ರಷ್ಟು ದಾಳಿಂಬೆ ಬೆಳೆದು 8ನೇ ಸ್ಥಾನದಲ್ಲಿದ್ದರೆ. ಶೇಕಡಾ 0.50 ರಷ್ಟು ದಾಳಿಂಬೆ ಉತ್ಪಾದನೆ ಮಾಡುವ ತೆಲಂಗಾಣ 7ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಇಡೀ ಭಾರತದಲ್ಲಿದೆ ಒಂದೇ ಒಂದು ಭೀಮ ಮತ್ತು ಹಿಡಂಬೆಯ ದೇವಸ್ಥಾನ.. ಏನಿದರ ವಿಶೇಷತೆಗಳು?
ಈ ರಾಜ್ಯಗಳಿಗೆ ಹೋಲಿಸಿದರೆ ಮಧ್ಯಪ್ರದೇಶದಲ್ಲಿ ದಾಳಿಂಬೆ ಫಸಲು ಚೆನ್ನಾಗಿಯೇ ಬರುತ್ತದೆ ದೇಶದ ಶೇಕಡಾ 3.20 ರಷ್ಟು ದಾಳಿಂಬೆ ಬೆಳೆ ಮಧ್ಯಪ್ರದೇಶ ಉತ್ಪಾದನೆ ಮಾಡುತ್ತಿದ್ದು. 6ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನದಲ್ಲಿ ದಾಳಿಂಬೆ ಬೆಳೆಯ ಫಸಲು ಇನ್ನೂ ಹೆಚ್ಚು ಇದೆ. ಶೇಕಡಾ 5.06ರಷ್ಟು ದಾಳಿಂಬೆ ಹಣ್ಣಿನ ಫಸಲು ತೆಗೆಯುವ ರಾಜಸ್ಥಾನ ಟಾಪ್ 10 ರಾಜ್ಯಗಳಲ್ಲಿ 5ನೇ ಸ್ಥಾನದಲ್ಲಿದೆ. ನಮ್ಮ ಮತ್ತೊಂದು ನೆರೆ ರಾಜ್ಯವಾದ ಆಂಧ್ರಪ್ರದೇಶ ಶೇಕಡಾ 22.17 ರಷ್ಟು ದಾಳಿಂಬೆ ಉತ್ಪಾದನೆ ಮಾಡುತ್ತಿದ್ದು 4ನೇ ರಾಜ್ಯವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ:ಭಾರತದಲ್ಲೇ ಇದೆ ಬೇಬಿ ತಾಜ್ ಮಹಲ್.. ಇದನ್ನು ನಿರ್ಮಿಸಿದ್ದು ಯಾರು? ಇದರ ಇತಿಹಾಸ ನಿಮಗೆ ಗೊತ್ತಾ?
ಇನ್ನು ದೇಶದಲ್ಲಿ ಅತಿಹೆಚ್ಚು ದಾಳಿಂಬೆ ಉತ್ಪಾದನೆ ಮಾಡುವ ಟಾಪ್ 3 ಸ್ಥಾನದಲ್ಲಿ ಕರ್ನಾಟಕವಿದೆ. ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರ ಈ ಮೂರು ರಾಜ್ಯಗಳು ದಾಳಿಂಬೆ ಉತ್ಪಾದನೆಯಲ್ಲಿ ದೇಶದ ಟಾಪ್ 3 ರಾಜ್ಯಗಳೆಂದು ಗುರುತಿಸಿಕೊಂಡಿವೆ.
ಅದರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಲ್ಲಿ ದೇಶದಲ್ಲಿ ಬೆಳೆಯುವ ಒಟ್ಟು ಶೇಕಡಾ 9.77 ರಷ್ಟು ದಾಳಿಂಬೆ ಉತ್ಪಾದನೆ ಮಾಡುತ್ತದೆ. ಗುಜರಾತ್ ಶೇಕಡಾ 22.17ರಷ್ಟು ದಾಳಿಂಬೆ ಬೆಳೆಯನ್ನು ಬೆಳೆಯುತ್ತಿದ್ದು 2ನೇ ಸ್ಥಾನದಲ್ಲಿದೆ. ಇನ್ನು ನಂಬರ್ ಒನ್ ಪಟ್ಟವನ್ನು ಮಹಾರಾಷ್ಟ್ರ ಪಡೆದುಕೊಂಡಿದ್ದು. ಅಲ್ಲಿ ದೇಶದ ಸುಮಾರು ಶೇಕಡಾ 50.18 ರಷ್ಟು ದಾಳಿಂಬೆ ಹಣ್ಣುಗಳ ಉತ್ಪಾದನೆಯಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ