ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?

author-image
Gopal Kulkarni
Updated On
ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕ.. ನಂಬರ್ ಒನ್ ಯಾವುದು?
Advertisment
  • ಭಾರತದಲ್ಲಿಯೇ ಅತಿಹೆಚ್ಚು ದ್ರಾಕ್ಷಿಯನ್ನು ಉತ್ಪಾದನೆ ಮಾಡುವ ರಾಜ್ಯ ಯಾವುದು?
  • ಈ ರಾಜ್ಯದ ಒಂದು ಜಿಲ್ಲೆಗೆ ಭಾರತದ ದ್ರಾಕ್ಷಿ ಹಣ್ಣಿನ ರಾಜಧಾನಿ ಎಂದು ಹೆಸರು ಇದೆ
  • ಆ ರಾಜ್ಯ ಬಿಟ್ಟರೇ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ಎರಡನೇ ರಾಜ್ಯ ನಮ್ಮ ಕರ್ನಾಟಕ

ವಿಶ್ವದಲ್ಲಿಯೇ ಅತಿಹೆಚ್ಚು ದ್ರಾಕ್ಷಿ ಹಣ್ಣುಗಳನ್ನು ಉತ್ಪಾದನೆ ಮಾಡುವ ದೇಶ ಅಂದ್ರೆ ಅದು ಚೀನಾ ಎರಡನೇ ಸ್ಥಾನದಲ್ಲಿ ಭಾರತ ಬರುತ್ತದೆ. ವಿಶ್ವದ ಒಟ್ಟು ಶೇಕಡಾ 49 ರಷ್ಟು ದ್ರಾಕ್ಷಿ ಚೀನಾ ಉತ್ಪಾದನೆ ಮಾಡಿದರೆ, ಭಾರತ ಶೇಕಡಾ 11 ರಷ್ಟು ಉತ್ಪಾದನೆ ಮಾಡುತ್ತದೆ. ಮೂರನೇ ಸ್ಥಾನದಲ್ಲಿರುವ ಟರ್ಕಿ ಶೇಕಡಾ 7 ರಷ್ಟು ದ್ರಾಕ್ಷಿಯನ್ನು ಉತ್ಪಾದನೆ ಮಾಡುತ್ತದೆ. ಆದ್ರೆ ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿಯನ್ನು ಬೆಳೆಯುವ ರಾಜ್ಯ ಯಾವುದು ಗೊತ್ತಾ? ಕರ್ನಾಟಕ ದ್ರಾಕ್ಷಿ ಉತ್ಪಾದಿಸುವ ರಾಜ್ಯದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂಬುದು ಗೊತ್ತಾ?

ಭಾರತದಲ್ಲಿ ದ್ರಾಕ್ಷಿ ಹಣ್ಣಿನ ಕಟಾವು ಕಾರ್ಯ ಫೆಬ್ರುವರಿಯಿಂದ ಶುರುವಾಗಿ ಮಾರ್ಚ ಅಂತ್ಯದೊಳಗೆ ಮುಕ್ತಾಯವಾಗುತ್ತದೆ. ಭೀಕರ ಬೇಸಿಗೆ ಕಾಲ ಶುರುವಾಗುವುದಕ್ಕಿಂತ ಮುಂಚೆಯೇ ಈ ಒಂದು ಕಾರ್ಯ ನಡೆಯುತ್ತದೆ. ಅಂದ್ರೆ ಈಗಾಗಲೇ ದ್ರಾಕ್ಷಿ ಬೆಳೆದ ರೈತರು ಅದರ ಕಟಾವು ಕಾರ್ಯವನ್ನು ರೈತರು ಆರಂಭಿಸಿದ್ದಾರೆ. ಹಣ್ಣುಗಳಲ್ಲಿ ಅತಿಹೆಚ್ಚು ವ್ಯಾಪಾರ ಹಾಗೂ ಬೇಡಿಕೆ ಇರುವ ಹಣ್ಣುಗಳಲ್ಲಿ ದ್ರಾಕ್ಷಿ ಕೂಡ ಒಂದು. ಈಗ ಅದರ ಫಸಲನ್ನು ಕೈಗೆ ತೆಗೆದುಕೊಂಡು ಮಾರುಕಟ್ಟೆಗೆ ಕಳುಹಿಸುವ ಕಾರ್ಯ ಶುರುವಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರ ಸದಸ್ಯ ಅರೆಸ್ಟ್! ಯಾರಿದು ದೀಪರಾಜ್ ಚಂದ್ರನ್?

publive-image

ಮುತ್ತಿನಂತೆ ದುಂಡಗೆ ಚೆಂದಗೆ ಇರುವ ದ್ರಾಕ್ಷಿ ಹಣ್ಣು ನೋಡಲು ಕೂಡ ಚೆಂದ ಹಾಗೂ ಸವಿಯಲು ಕೂಡ ಪ್ರಿಯ. ದ್ರಾಕ್ಷಿಯಲ್ಲಿ ಎರಡು ಬಗೆ ಇವೆ. ಒಂದು ಹಸಿರು ದ್ರಾಕ್ಷಿ, ಇನ್ನೊಂದು ಕಪ್ಪು ದ್ರಾಕ್ಷಿ. ಸದ್ಯ ಈಗ ದ್ರಾಕ್ಷಿ ಹಣ್ಣಿನ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ದ್ರಾಕ್ಷಿಹಣ್ಣಿನ ರಾಶಿಯೇ ಕಾಣುತ್ತಿವೆ. ಖರೀದಿಯ ಭರಾಟೆಯೂ ಕೂಡ ಜೋರಾಗಿದೆ. ಆದ್ರೆ ನಿಮಗೆ ಭಾರತದಲ್ಲಿ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ರಾಜ್ಯ ಯಾವುದು. ಯಾವ ರಾಜ್ಯದಿಂದ ಅತಿಹೆಚ್ಚು ದ್ರಾಕ್ಷಿ ದೇಶ ವಿದೇಶಗಳಿಗೆ ಸರಬರಾಜು ಆಗುತ್ತೆ ಅಂತ.

publive-image

ದೇಶದಲ್ಲಿಯೇ ಅತಿಹೆಚ್ಚು ದ್ರಾಕ್ಷಿ ಬೆಳೆಯನ್ನು ಬೆಳೆಯುವ ರಾಜ್ಯ ಎಂದರೆ ಅದು ಮಹಾರಾಷ್ಟ್ರ. ದೇಶದಲ್ಲಿಯೇ ಉತ್ಪಾದನೆಯಾಗುವ ದ್ರಾಕ್ಷಿಯ ಬೆಳೆಯಲ್ಲಿ ಶೇಕಡಾ 70 ರಷ್ಟು ಬೆಳೆ ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯನ್ನು ಭಾರತದ ದ್ರಾಕ್ಷಿ ಬೆಳೆಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ದ್ರಾಕ್ಷಿ ಬೆಳೆಯನ್ನು ಬೆಳೆಯುವ ರೈತರು ನಾಸಿಕ್​ನಲ್ಲಿದ್ದಾರೆ. ನಾಸಿಕ್ ಬಿಟ್ಟರೆ, ಪುಣೆ, ಸಾಂಗಲಿ ಮತ್ತು ಸೋಲಾಪುರ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆಗಳು.

ಇದನ್ನೂ ಓದಿ:ದೇಶದ 9 ನಗರಗಳಿಗೆ ದೊಡ್ಡ ಎಚ್ಚರಿಕೆ.. ಬೆಂಗಳೂರು ಜನರಿಗೂ ಕಾದಿದೆ ಅಪಾಯ..!

ಇನ್ನು ದೇಶದಲ್ಲಿ ಅತಿಹೆಚ್ಚು ದ್ರಾಕ್ಷಿ ಉತ್ಪಾದನೆ ಮಾಡುವ ಎರಡನೇ ಸ್ಥಾನದಲ್ಲಿರುವ ರಾಜ್ಯ ನಮ್ಮ ಕರ್ನಾಟಕ. ಇಲ್ಲಿ ದೇಶದ ಸುಮಾರು ಶೇಕಡಾ 28 ರಷ್ಟು ದ್ರಾಕ್ಷಿಹಣ್ಣುಗಳ ಉತ್ಪಾದನೆಯಾಗುತ್ತದೆ ಎಂದು 2023-24ರಲ್ಲಿ ಬಿಡುಗಡೆಯಾದ ವರದಿಯಲ್ಲಿದೆ.ಮಹಾರಾಷ್ಟ್ರ ಮತ್ತು ಕರ್ನಾಟಕ ಈ ಎರಡು ರಾಜ್ಯಗಳೇ ದೇಶ ಹಾಗೂ ವಿದೇಶ ಮಾರುಕಟ್ಟೆಗೆ ಶೇಕಡಾ 89 ರಷ್ಟು ದ್ರಾಕ್ಷಿಯನ್ನು ಸರಬರಾಜು ಮಾಡುತ್ತದೆ. ಉಳಿದಂತೆ ತಮಿಳುನಾಡು, ಆಂಧ್ರಪ್ರದೇಶಗಳು ಕೂಡ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment