/newsfirstlive-kannada/media/post_attachments/wp-content/uploads/2025/06/RAJATH_PATIDAR_IPL_TEAMS.jpg)
ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಫೈನಲ್​ನಲ್ಲಿ ಗೆಲ್ಲುವ ಮೂಲಕ ಐಪಿಎಲ್​ನ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ಲಕ್ಷಾಂತರ ಅಭಿಮಾನಿಗಳ ನಡುವೆ ಕಪ್ ಗೆದ್ದ ಆರ್​ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದೆ. 4ನೇ ಬಾರಿಗೆ ಫೈನಲ್​ ಪ್ರವೇಶಿಸಿದ್ದ ಬೆಂಗಳೂರು ತಂಡ ಟ್ರೋಫಿ ಜೊತೆ ನಗುತ್ತಿದೆ. ಇದರ ಮಧ್ಯೆ ಈ ವರೆಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಸೋತ ಟೀಮ್ ಯಾವುದು?.
2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್​ ಯಶಸ್ವಿಯಾಗಿ 18ನೇ ಸೀಸನ್​ ಅನ್ನು ಮುಗಿಸಿದೆ. ಮೊದಲ ಸೀಸನ್​ನಲ್ಲಿ ಚೆನ್ನೈ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್​ ಮೊದಲ ಟ್ರೋಫಿಗೆ ಮುತ್ತಿಟ್ಟಿತ್ತು. ಐಪಿಎಲ್​ನಲ್ಲಿ ಇದುವರೆಗೆ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಐದೈದು ಬಾರಿ ಟ್ರೋಫಿ ಪಡೆದುಕೊಂಡಿವೆ. ಇನ್ನು ಫೈನಲ್​ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಸೋತ ತಂಡ ಎಂದರೆ ಅದು ಚೆನ್ನೈ.
/newsfirstlive-kannada/media/post_attachments/wp-content/uploads/2025/05/RCB_CSK.jpg)
ಚೆನ್ನೈ ಸೂಪರ್ ಕಿಂಗ್ಸ್​ ಇದುವರೆಗೆ ಒಟ್ಟು 10 ಬಾರಿ ಫೈನಲ್​ಗೆ ತಲುಪಿದೆ. ಇದರಲ್ಲಿ ಒಂದಲ್ಲ, ಎರಡಲ್ಲ ಒಟ್ಟು 5 ಬಾರಿ ಫೈನಲ್​ ಪಂದ್ಯದಲ್ಲಿ ಸೋಲೋಪ್ಪಿಕೊಂಡಿದೆ. 5 ಬಾರಿ ಟ್ರೋಫಿಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಹೆಚ್ಚು ಬಾರಿ ಸೋತ 2ನೇ ತಂಡ ಎಂದರೆ ಅದು ಆರ್​ಸಿಬಿ. ಬೆಂಗಳೂರು ತಂಡವು ಇದುವರೆಗೆ ಒಟ್ಟು 3 ಸಲ ಫೈನಲ್​ನಲ್ಲಿ ಕಪ್​ ಅನ್ನು ಕೈಚೆಲ್ಲಿತ್ತು. ಚೆನ್ನೈ, ಹೈದ್ರಾಬಾದ್​, ಡೆಕ್ಕನ್ ಚಾರ್ಜಸ್ ವಿರುದ್ಧ ಆರ್​ಸಿಬಿ ನೆಲಕಚ್ಚಿತ್ತು.​ ಆದರೆ ಈ ಬಾರಿ 2025ರ ಸೀಸನ್​ 18ರಲ್ಲಿ ಆರ್​ಸಿಬಿ ಕಪ್​ ಗೆದ್ದಿದೆ.
ಆರ್​ಸಿಬಿ ಬಿಟ್ಟರೇ 3ನೇ ಸ್ಥಾನದಲ್ಲಿ ಸನ್​​ರೈಸರ್ಸ್ ಹೈದರಾಬಾದ್ ಒಟ್ಟು ಮೂರು ಬಾರಿ ಫೈನಲ್​ಗೆ ಎಂಟ್ರಿಕೊಟ್ಟಿದ್ದು ಇದರಲ್ಲಿ ಒಂದು ಬಾರಿ ಮಾತ್ರ ಕಪ್​ ಗೆದ್ದುಕೊಂಡಿದೆ. ಉಳಿದಂತೆ ಮುಂಬೈ, ಪಂಜಾಬ್, ಡೆಲ್ಲಿ, ಕೆಕೆಆರ್, ರಾಜಸ್ಥಾನ್, ಗುಜರಾತ್, ಫುಣೆ ವಾರಿಯರ್ಸ್​ ಒಮ್ಮೊಮ್ಮೆ ಫೈನಲ್​ನಲ್ಲಿ ಕೈಸುಟ್ಟುಕೊಂಡಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us