/newsfirstlive-kannada/media/post_attachments/wp-content/uploads/2025/03/IND_VS_SA_1.jpg)
ಇಂಡೋ-ಆಸಿಸ್ ಹೈವೋಲ್ಟೇಜ್ ಸೆಮೀಸ್ ಪಂದ್ಯ ಮುಗಿದಿದ್ದು ಆಯಿತು. ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ನೀಡಿದ್ದೂ ಆಗಿದೆ. ಇದೀಗ ಫೈನಲ್ಸ್ನಲ್ಲಿ ಟೀಮ್ ಇಂಡಿಯಾನ ಎದುರಿಸೋ ಕನಸನ್ನ 2 ತಂಡಗಳು ಕಾಣ್ತಿದೆ. ಅವೇ ನ್ಯೂಜಿಲೆಂಡ್ ಆ್ಯಂಡ್ ಸೌತ್ ಆಫ್ರಿಕಾ. 2ನೇ ಸೆಮಿಸ್ ಕದನಕ್ಕೆ ವೇದಿಕೆ ಸಜ್ಜಾಗಿದ್ದು, ಐಸಿಸಿ ಟೂರ್ನಿಯಲ್ಲಿ ಚೋಕರ್ಸ್ ಹಣೆಪಟ್ಟಿ ಹೊಂದಿರುವ ಉಭಯ ತಂಡಗಳು ಫೈನಲ್ ಟಿಕೆಟ್ಗಾಗಿ ಹೋರಾಟ ನಡೆಸಲು ಸಜ್ಜಾಗಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ಸೈಲೆಂಟ್ ಕಿಲ್ಲರ್ ನ್ಯೂಜಿಲೆಂಡ್, ಚೋಕರ್ಸ್ ಹಣೆಪಟ್ಟಿಯ ಸೌತ್ ಆಫ್ರಿಕಾ ಮುಖಾಮುಖಿ ಆಗ್ತಿವೆ. ಇವತ್ತಿನ ಸೆಮೀಸ್ ಸಮರದಲ್ಲಿ ಗೆದ್ದು ಫೈನಲ್ ತಲುಪುವ ಕನಸು ಕಾಣ್ತಿವೆ. ಈ ಇಬ್ಬರಲ್ಲಿ ಸೆಮೀಸ್ ಬ್ಯಾಟಲ್ನಲ್ಲಿ ಯಾರ್ ಫೈನಲ್ಗೆ ಹೋಗ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಚೋಕರ್ಸ್ ಪಟ್ಟಿ ಕಳಚುತ್ತಾ ಸೌತ್ ಆಫ್ರಿಕಾ..?
1998ರ ಚಾಂಪಿಯನ್ಸ್ ಟ್ರೋಫಿಯೇ ಕೊನೆ.. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಬಿಡಿ. ಕನಿಷ್ಠ ಪಕ್ಷ ಫೈನಲ್ಗೆ ಏರುವಲ್ಲೂ ವಿಫಲರಾಗಿರುವ ಸೌತ್ ಆಫ್ರಿಕಾ, ಬರೋಬ್ಬರಿ 27 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡುವ ಕನಸು ಕಾಣ್ತಿದೆ. ಐಸಿಸಿ ಇವೆಂಟ್ಗಳ ಸೆಮಿಫೈನಲ್ಗಳಲ್ಲಿ ಚೋಕರ್ಸ್ ಹಣೆಪಟ್ಟಿ ಹೊತ್ತಿರುವ ಸೌತ್ ಆಫ್ರಿಕಾ, ಆ ಹಣೆಪಟ್ಟಿ ಕಳಚೋ ಲೆಕ್ಕಾಚಾರದಲ್ಲಿದೆ.
ಸೌತ್ ಆಫ್ರಿಕಾಗೆ ಬಿಗ್ ಹಿಟ್ಟರ್ಗಳ ಸ್ಟ್ರೆಂಥ್..!
ಸೌತ್ ಆಫ್ರಿಕಾದ ಬಿಗ್ ಸ್ಟ್ರೆಂಥ್ ಬ್ಯಾಟಿಂಗ್ ಲೈನ್ಆಫ್ ಆಗಿದೆ. ರಿಯಾನ್ ರಿಕಲ್ಟನ್, ಆ್ಯಡಮ್ ಮಾರ್ಕಮ್, ರಾಸಿ ವ್ಯಾನ್ ಡೆರ್ ಡಸೆನ್, ಹೆನ್ರಿಚ್ ಕ್ಲಾಸೆನ್ರಂಥ ಬಿಗ್ ಚೇಂಜರ್ಗಳ ಬಲ ಹೊಂದಿರುವ ಆಫ್ರಿಕಾ ಲೋವರ್ ಆರ್ಡರ್ನಲ್ಲಿ ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್ರಂಥ ಮ್ಯಾಚ್ ಫಿನಿಷರ್ಗಳನ್ನ ಹೊಂದಿದೆ. ಇವರು ಕ್ರೀಸ್ ಕಚ್ಚಿ ನಿಂತರೆ, ಕಿವೀಸ್ ಖಲ್ಲಾಸ್ ಆಗೋದು ಫಿಕ್ಸ್.
ಇನ್ಕನ್ಸಿಸ್ಟೆಂಟ್ ಕಿವೀಸ್ಗೆ ಆಫ್ರಿಕನ್ ಅಗ್ನಿಪರೀಕ್ಷೆ..!
ಸೌತ್ ಆಫ್ರಿಕಾಗೆ ಹೋಲಿಸಿದ್ರೆ. ಕಿವೀಸ್ ಬ್ಯಾಟಿಂಗ್ ಕೇವಲ ಟಾಪ್ ಆರ್ಡರ್ ಮೇಲೆ ನಿಂತಿದೆ. ಟಾಮ್ ಲಾಥಮ್, ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಬಿಟ್ರೆ, ಉಳಿದವರ್ಯಾರೂ ಅಂದುಕೊಳ್ಳುವಷ್ಟು ಉತ್ತಮ ಪ್ರದರ್ಶನವನ್ನ ನೀಡಿಲ್ಲ. ಹೀಗಾಗಿ ಟೂರ್ನಿಯಲ್ಲಿ ಉತ್ತಮ ದಾಳಿ ಸಂಘಟಿಸ್ತಿರುವ ವಿಯಾನ್ ಮಲ್ಡಾರ್, ಮಾರ್ಕೋ ಯಾನ್ಸನ್, ಕಗಿಸೋ ರಬಡಾ, ಲುಂಗಿ ಎನ್ಗಿಡಿಯಂತ ಪೇಸ್ ಅಟ್ಯಾಕ್ ಎದುರಿಸೋದು ಕಿವೀಸ್ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ. ಆದ್ರೆ, ನಾಕೌಟ್ಸ್ಗಳಲ್ಲಿ ಸೈಲೆಂಟ್ ಆಗಿ ಮ್ಯಾಚ್ ಫಿನಿಷ್ ಮಾಡೋ ಕಲೆಗಾರಿಕೆ ಹೊಂದಿರುವ ಕಿವೀಸ್ನ ಯಾವುದೇ ಕಾರಣಕ್ಕೂ ಹಗುವರವಾಗಿ ಪರಿಗಣಿಸುವಂತೆ ಇಲ್ಲ.
ಇದನ್ನೂ ಓದಿ:2 ವರ್ಷ ಡೇಟಿಂಗ್, ಒಂದೇ ಸಿನಿಮಾದಲ್ಲಿ ನಟನೆ.. ಈಗ ತಮನ್ನಾ-ವಿಜಯ್ ದೂರ ದೂರ, ಕಾರಣ ಇಲ್ಲಿದೆ!
ಲಾಹೋರ್ನಲ್ಲಿ ರನ್ ಫೆಸ್ಟ್.. ಪೇಸರ್ಗಳ ಬ್ಯಾಟಲ್ ಫಿಕ್ಸ್..!
ಲಾಹೋರ್ನ ಗಡಾಫಿಯಲ್ಲಿ ಇವತ್ತು ರನ್ ಫೆಸ್ಟ್ ಗ್ಯಾರಂಟಿ. ಇದಕ್ಕೆ ಸಾಕ್ಷಿ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಅಫ್ಘಾನ್ ನಡುವಿನ ಪಂದ್ಯಗಳಾಗಿವೆ. ಯಾಕಂದ್ರೆ, ಈ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 356, 325 ರನ್ ಕೊಳ್ಳೆ ಹೊಡೆದಿದ್ದಾರೆ. ಇನ್ನು ಪೇಸರ್ಗಳಿಗೆ ಬಿಗ್ ಅಡ್ವಾಂಟೇಜ್ ಇರೋ ಈ ಪಿಚ್ನಲ್ಲಿ ವೇಗಿಗಳೇ ಮೈಲುಗೈ ಸಾಧಿಸಿದ್ದಾರೆ. ಇವತ್ತು ರನ್ ಫೆಸ್ಟ್ನ ಜೊತೆಗೆ ಕಿವೀಸ್ ಪಸೇರ್ಸ್ ವರ್ಸಸ್ ಆಫ್ರಿಕನ್ ಪೇಸರ್ಗಳ ಬ್ಯಾಟಲ್ ನಡೆಯೋದು ಕನ್ಫರ್ಮ್.
ಟೀಮ್ ಇಂಡಿಯಾಗೆ ಫೈನಲ್ ಎದುರಾಳಿ ಯಾರು..?
ಆಸ್ಟ್ರೇಲಿಯನ್ಸ್ ಎದುರು ಸೇಡು ತೀರಿಸಿಕೊಂಡಿರುವ ಟೀಮ್ ಇಂಡಿಯಾ, 2023ರ ಹಳೇ ಲೆಕ್ಕಾ ಚುಕ್ತಾ ಮಾಡಿದೆ. ಅಷ್ಟೇ ಅಲ್ಲ, ಸೋಲಿಲ್ಲದ ಸರದಾರನಾಗಿ ಫೈನಲ್ಗೆ ಎಂಟ್ರಿ ನೀಡಿದೆ. ಆದ್ರೀಗ ಫೈನಲ್ನಲ್ಲಿ ಟೀಮ್ ಇಂಡಿಯಾ ಎದುರಾಳಿಯಾಗಿ ನ್ಯೂಜಿಲೆಂಡ್ ಕಣಕ್ಕಿಳಿಯುತ್ತಾ..? ಇಲ್ಲ 27 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ಗೆ ಎಂಟ್ರಿ ಕೊಟ್ಟಿರುವ ಆಫ್ರಿಕಾ ಸೆಣಸಾಡುತ್ತಾ.? ಅನ್ನೋದಕ್ಕೆ ಇವತ್ತಿನ ಪಂದ್ಯದ ಬಳಿಕಷ್ಟೇ ಉತ್ತರ ಸಿಗಲಿದೆ. ಆ ಉತ್ತರ ಸೌತ್ ಆಫ್ರಿಕಾ ನಾ.? ನ್ಯೂಜಿಲೆಂಡ್ ಆ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ