/newsfirstlive-kannada/media/post_attachments/wp-content/uploads/2025/03/DRIVER-SALARY-2.jpg)
ಭಾರತದಲ್ಲಿ ಚಾಲಕ ವೃತ್ತಿಯನ್ನೇ ನಂಬಿಕೊಂಡು ಲಕ್ಷಾಂತರ ಚಾಲಕರು ಇದ್ದಾರೆ. ವಿಧ ವಿಧವಾದ ವಾಹನಗಳನ್ನು ಓಡಿಸುವ ಚಾಲಕರಿದ್ದಾರೆ. ಅವರಿಗೆ ತಿಂಗಳಿಗೆ ಇಂತಿಷ್ಟು ಅಂತ ಸಂಬಳ ಬರುತ್ತದೆ. ಆದ್ರೆ ನಿಮಗೆ ಗೊತ್ತಾ ಭಾರತದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಚಾಲಕರು ಯಾರು ಅಂತ?
ನಾವು ಟ್ರೈನ್ ಚಲಾಯಿಸುವವರನ್ನು ಟ್ರೈನ್ ಚಾಲಕ ಅಥವಾ ಲೋಕೋ ಪೈಲೆಟ್ ಎಂದು ಕರೆಯುತ್ತೇವೆ. ಭಾರತದಲ್ಲಿ ಅತಿಹೆಚ್ಚು ಸಂಬಳವನ್ನು ಪಡೆಯುವ ಚಾಲಕರು ಲೋಕೋ ಪೈಲೆಟ್ ಎಂದು ಹೇಳಲಾಗುತ್ತದೆ. ಲೋಕೋ ಪೈಲಟ್ ಆಗುವ ಮೊದಲು ಅವರು ಅಸಿಸ್ಟಂಟ್ ಲೋಕೋ ಪೈಲೆಟ್ ಆಗಬೇಕು. ಅದರ ಬಳಿಕ ಅನುಭವದ ಆಧಾರದ ಮೇಲೆ ಅವರಿಗೆ ಲೋಕೋ ಪೈಲೆಟ್ ಹುದ್ದೆ ದೊರೆಯುತ್ತದೆ. ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸಹಾಯಕ ಲೋಕೋ ಪೈಲೆಟ್ಗೆ 25 ರಿಂದ 35 ಸಾವಿರ ರೂಪಾಯಿಯವರೆಗೆ ಸಂಬಳ ಇರುತ್ತದೆ.
ಒಂದು ಅನುಭವಕ್ಕೆ ಬಂದು ಅವರು ಲೋಕೋ ಪೈಲೆಟ್ ಆದಮೇಲೆ ಅವರ ಸಂಬಳ ಸುಮಾರು 50 ಸಾವಿರದಿಂದ 1 ಲಕ್ಷದ ಒಳಗಡೆ ಇರುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಚಾಲಕರು ಅಂದ್ರೆ ಅದು ಲೋಕೋಪೈಲೆಟ್ಗಳೇ. ಇವರಿಗೆ ಸಿಗುವಷ್ಟು ಸಂಬಳ ಬೇರೆ ಯಾರಿಗೂ ಸಿಗುವುದಿಲ್ಲ.
ಆದ್ರೆ ಒಂದು ಹಂತಕ್ಕೆ ಟ್ರಕ್ ಡ್ರೈವರ್ಗಳ ಸ್ಯಾಲರಿಯೂ ಕೂಡ ಒಂದು ಹಂತಕ್ಕೆ ಉತ್ತಮವಾಗಿರುತ್ತದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಒಂದು ಅಧ್ಯಯನದ ಪ್ರಕಾರ ಟ್ರಕ್ ಡ್ರೈವರ್ಗಳ ಸ್ಯಾಲರಿ 30 ರಿಂದ 50 ಸಾವಿರ ರೂಪಾಯಿಗಳವರೆಗೂ ಇರುತ್ತದೆ ಎಂದು ಹೇಳಲಾಗಿದೆ. ಇವರನ್ನು ಬಿಟ್ಟರೆ ರೇಸ್ ಚಾಲಕರಿಗೆ, ಕೋಟ್ಯಾಧಿಪತಿಗಳ ಐಷಾರಾಮಿ ಕಾರುಗಳನ್ನು ಓಡಿಸುವ ಚಾಲಕರಿಗೆ ಒಂದು ಮಟ್ಟದಲ್ಲಿ ಉತ್ತಮ ಸಂಬಳ ದೊರಕುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ