/newsfirstlive-kannada/media/post_attachments/wp-content/uploads/2025/03/FIRST-AC-TRAIN-2.jpg)
ಭಾರತೀಯ ರೈಲ್ವೆ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದೆ. ಮೊದಲ ಬಾರಿ ಭಾರತದಲ್ಲಿ ಟ್ರೇನ್ ಓಡಿದ್ದು ಮುಂಬೈನಿಂದ ಥಾಣೆಯವರೆಗೆ. ಅದು 1853ರಲ್ಲಿ ಈ ಒಂದು ರೈಲು ಸಂಚಾರ ಮೊದಲ ಬಾರಿ ಈ ದೇಶದಲ್ಲಿ ಆಗಿತ್ತು. ಹೀಗೆ ನೂರಾರು ವರ್ಷಗಳಿಂದ ಭಾರತದ ಜನರಿಗೆ ಸಾರಿಗೆ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆ ಅನೇಕ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂತು. ಅದು ಈಗ ಸೆಮಿಸ್ಪೀಡ್ ಟ್ರೇನ್ ವಂದೇ ಭಾರತ್ವರೆಗೂ ಬಂದು ನಿಂತಿದೆ. ಆದ್ರೆ ಒಂದು ವಿಷಯ ನಿಮಗೆ ಗೊತ್ತಾ? ಭಾರತದಲ್ಲಿ ಮೊದಲ ಎಸಿ ಹೊಂದಿದ ಟ್ರೇನ್ ಎಂದು ಯಾವ ರೈಲನ್ನು ಗುರುತಿಸಲಾಗುತ್ತದೆ ಎಂದು.
ರೈಲುಗಳಲ್ಲಿ ವಿಪರೀತ ಸೆಕೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟ್ರೇನ್ನಲ್ಲಿ ಎಸಿ ಪರಿಚಯ ಮಾಡಲಾಯ್ತು. ಸೆಕೆಯಿಂದ ಪ್ರಯಾಣಿಕರನ್ನು ಮುಕ್ತಗೊಳಿಸಲು ಮೊದಲ ಬಾರಿ ಅಂದ್ರೆ ಸೆಪ್ಟಂಬರ್ 1928ರಲ್ಲಿ ರೈಲಿನಲ್ಲಿ ಎಸಿಯನ್ನು ಅಳವಡಿಸಲಾಯ್ತು. ಎಸಿ ಕಂಪಾರ್ಟ್ಮೆಂಟ್ ಎಂಬ ಬೇರೆಯದ್ದೇ ಕೋಚ್ಗಳು ಅಸ್ತಿತ್ವಕ್ಕೆ ಬಂದಿತು
ಪಂಜಾಬ್ ಮೇಲ್ ಭಾರತದ ಮೊದಲ ಎಸಿ ಟ್ರೇನ್ ಎಂದು ಐತಿಹಾಸಿಕವಾಗಿ ದಾಖಲೆಯಲ್ಲಿ ಉಳಿದಿದೆ. ಬ್ರಿಟಿಷ್ ಆಡಳಿತ ಸಮಯದಲ್ಲಿಯೇ ಈ ಒಂದು ಟ್ರೇನ್ನಲ್ಲಿ ಮೊಟ್ಟ ಮೊದಲ ಬಾರಿಗೆ ಎಸಿಯನ್ನು ಅಳವಡಿಸಲಾಯ್ತು. ಪಂಜಾಬ್ ಮೇಲ್ನ್ನು ಆರಂಭದಲ್ಲಿ ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಮುಂಬೈನಿಂದ ಹೊರಡುತ್ತಿದ್ದ ಈ ರೈಲು ಇಟಾರಸಿ, ಆಗ್ರಾ, ದೆಹಲಿ, ಲಾಹೋರ್ಗಳನ್ನು ದಾಟಿ ಪೇಶಾವರವನ್ನು ತಲುಪುತ್ತಿತ್ತು.
ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲ ರೈಲು ನಿಲ್ದಾಣ ಯಾವ ರಾಜ್ಯದಲ್ಲಿ ನಿರ್ಮಾಣವಾಗಿತ್ತು? ಅದರ ಹೆಸರು ಏನಿತ್ತು?
ಪಂಜಾಬ್ ಮೇಲ್ ರೈಲನ್ನು ಅದರ ಸೌಂದರ್ಯ ಹಾಗೂ ಸ್ವಚ್ಛತೆ ಮತ್ತು ಸೌಲಭ್ಯಗಳಿಂದಾಗಿ ಅದನ್ನು ಭಾರತದ ಮೊದಲ ಡಿಲಕ್ಸ್ ಟ್ರೇನ್ ಎಂದು ಕೂಡ ಕರೆಯಲಾಗುತ್ತಿತ್ತು. ಇದು ಬ್ರಿಟಿಷ್ ಆಡಳಿತದ ಕಾಲದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಟ್ರೇನ್ ಎಂದು ಗುರುತಿಸಲ್ಪಟ್ಟಿತ್ತು. ಆರಂಭದಲ್ಲಿ ಇದು ಕೇವಲ ಇಂಗ್ಲಿಷರು ಮಾತ್ರ ಉಪಯೋಗಿಸಲು ಮೀಸಲಾಗಿದ್ದ ರೈಲಾಗಿತ್ತು.
ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ಮಹತ್ವದ ನಿಯಮ ಬದಲಾವಣೆ.. ಪ್ರಯಾಣಿಕರಿಗೆ ಇದು ತಿಳಿದಿರಲೇಬೇಕು..!
ಆರಂಭದಲ್ಲಿ ಕೇವಲ ಇಂಗ್ಲಿಷರು ಮಾತ್ರ ಸಂಚಾರ ಮಾಡಲು ಮೀಸಲಾಗಿದ್ದ ಈ ರೈಲಿನ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದವು. ನಂತರ ಸಾರ್ವಜನಿಕರಿಗೂ ಈ ಒಂದು ರೈಲಿನ ಸೌಲಭ್ಯ ಸಿಗಲಿ ಎಂದು ಈ ರೈಲಿಗೆ ಥರ್ಡ್ ಕ್ಲಾಸ್ ಬೋಗಿಗಳನ್ನು ಜೋಡಿಸಲಾಯ್ತು. ಮುಂಬೈನಿಂದ ಪೇಶಾವರ್ವರೆಗೆ ಸಂಚರಿಸುತ್ತಿದ್ದ ಪಂಜಾಬ್ ಮೇಲ್ನ್ನು ಭಾರತದ ಮೊದಲ ಎಸಿ ಟ್ರೇನ್ ಎಂದು ಗುರುತಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ