newsfirstkannada.com

ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ

Share :

Published September 6, 2024 at 4:28pm

    ನಗರದ ಮಧ್ಯೆದಲ್ಲೇ ಮಾರಾಟ ಮಾಡುತ್ತಿದ್ದ ವಿಸ್ಕಿ ಐಸ್​ ​ಕ್ರೀಂ

    ಅಂಗಡಿ ಮೇಲೆ ರೇಡ್ ಮಾಡಿದಾಗ ಅಧಿಕಾರಿಗಳಿಗೆ ಶಾಕ್.!

    ಶಾಪ್​ನಲ್ಲಿ ಎಷ್ಟು ಕೆಜಿ ವಿಸ್ಕಿ ಐಸ್​​ ಕ್ರೀಂ ವಶಕ್ಕೆ ಪಡೆಯಲಾಗಿದೆ?

ಹೈದರಾಬಾದ್​: ಮಕ್ಕಳಿಗೆ ಐಸ್​ ಕ್ರೀಂ ಎಂದರೆ ಪಂಚಪ್ರಾಣ. ಅಂಗಡಿಗಳಲ್ಲಿ ನೋಡಿದರೆ ಸಾಕು ಅಮ್ಮ.. ಅಪ್ಪ.. ನನಗೆ ಐಸ್​ ಕ್ರೀಂ ಬೇಕೆಂದು ಹಠ ಹಿಡಿದು ಬಿಡುತ್ತಾರೆ. ಇನ್ಮುಂದೆ ಮಕ್ಕಳು ಕೇಳಿದರೆಂದು ಕೊಡಿಸುವ ಮುನ್ನ ಪೋಷಕರು ತುಸು ಎಚ್ಚರ ವಹಿಸಬೇಕು. ಏಕೆಂದರೆ ಇಲ್ಲೊಂದು ಐಸ್​ ಕ್ರೀಂ ಶಾಪ್​ನಲ್ಲಿ ವಿಸ್ಕಿ ಮಿಶ್ರಿತ ಐಸ್​ ಕ್ರೀಂ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಇಬ್ಬರನ್ನು ಅರೆಸ್ಟ್​ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ ಆಗುವುದನ್ನ ತಪ್ಪಿಸಲು ಹೋಗಿ ಬೈಕ್​ ಆಕ್ಸಿಡೆಂಟ್​.. ಇಬ್ಬರು ಯುವಕರು ಸಾವು

ಐಸ್ ​​ಕ್ರೀಂ ಶಾಪ್​​ನ ಮಾಲೀಕರಾದ ದಯಕರ್ ರೆಡ್ಡಿ, ಸೋಭಾನ್ ಎನ್ನುವ ಆರೋಪಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ ಈ ಶಾಪ್​​​​ ಅನ್ನು ಬೇರೆಯೊಬ್ಬ ವ್ಯಕ್ತಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇವರು ಶಾಪ್​​​​​ನಲ್ಲಿ 1 ಕೆ.ಜಿ ಐಸ್ ​​ಕ್ರೀಂಗೆ 60 ಎಂ.ಎಲ್​ ವಿಸ್ಕಿ ಮಿಕ್ಸ್​ ಮಾಡಿ ಬಳಿಕ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!

ಐಸ್​ ಕ್ರೀಂನಲ್ಲಿ ವಿಸ್ಕಿ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಶಾಪ್​​​​​ನಲ್ಲಿ ವಿಸ್ಕಿ ಮಿಶ್ರಿತ ಐಸ್​ ಕ್ರೀಂನ ಬಾಕ್ಸ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 11.50 ಕೆ.ಜಿ ವಿಸ್ಕಿ ಮಿಶ್ರಿತ ಐಸ್ ಕ್ರೀಂ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐಸ್ ಕ್ರೀಂ ತಯಾರು ಮಾಡುತ್ತಿದ್ದ ಮಿಷನ್ ಸೇರಿದಂತೆ ಶಾಪ್​​​​ನಲ್ಲಿದ್ದ ಇತರೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತೆಲಂಗಾಣದ ಹೈದರಾಬಾದ್​ನ ಜುಬಿಲಿಹಿಲ್ಸ್​​ನ ರೋಡ್​ ನಂಬರ್​ 1ರಲ್ಲಿರುವ ಹಾರಿಕ ಕೆಫೆ ಐಸ್​​ ಕೀಂ ಶಾಪ್​ನಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳಿಗೆ ಐಸ್​ ಕ್ರೀಂ ಕೊಡಿಸುವ ಮುನ್ನ ಹುಷಾರ್​.. ಪೋಷಕರು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2024/09/ICE_CREAM-1.jpg

Load More