/newsfirstlive-kannada/media/post_attachments/wp-content/uploads/2025/03/WHITE-HOUSE-ON-SUNITA-RETURN-2.jpg)
ಯುಎಸ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದಷ್ಟು ಬೇಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ನಮ್ಮ ಗಗನಯಾನಿಗಳನ್ನು ವಾಪಸ್ ಕರೆತರುತ್ತೇವೆ ಎಂದು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಹೇಳಿದ್ದರು. ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದಲೇ ಸುನೀತಾ ಹಾಗೂ ವಿಲ್ಮೋರ್ ಅವರನ್ನು ಭೂಮಿಗೆ ಕರೆಸಿಕೊಳ್ಳುವುದು ವಿಳಂಬವಾಗಿದೆ ಎಂದು ಕೂಡ ಆರೋಪಿಸಿದ್ದರು. ಈಗ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಭೂಮಿಗೆ ವಾಪಸ್ ಬಂದಿದ್ದಾರೆ. ಇದೇ ವಿಚಾರವಾಗಿ ವೈಟ್ಹೌಸ್ ನಾವು ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದೆ.
ಅನಿರೀಕ್ಷಿವಾಗಿ ಉಭಯ ಗಗನಯಾನಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು 9 ತಿಂಗಳುಗಳ ಕಾಲ ಕಳೆಯಬೇಕಾಗಿ ಬಂತು. ಇದು ರಾಜಕೀಯವಾಗಿಯೂ ಕೂಡ ಅಮೆರಿಕಾದಲ್ಲಿ ಚರ್ಚೆಗೆ ಬಂದಿತ್ತು. ಜಾಗತಿಕವಾಗಿಯೂ ಕೂಡ ಪರ ವಿರೋಧಗಳ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಟ್ರಂಪ್ ಅಧಿಕಾರವಹಿಸಿಕೊಂಡ ಎರಡೇ ತಿಂಗಳಿಗೆ ಈಗ ಗಗನಯಾನಿಗಳು ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಸ್ಪೇಸ್ ಎಕ್ಸ್ನ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ವಿಲಿಯಮ್ಸ್ ಹಾಗೂ ವಿಲ್ಮೋರ್ರನ್ನು ಭೂಮಿಗೆ ಮರಳಿ ತಂದಿದ್ದು. ಸುಮಾರು 3.30ಕ್ಕೆ ಫ್ಲೋರಿಡಾದ ಕರಾವಳಿ ತೀರದಲ್ಲಿ ಇಬ್ಬರು ಗಗನಯಾತ್ರಿಗಳು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ವೈಟ್ಹೌಸ್ ಟ್ವೀಟ್ ಮಾಡಿದೆ
ವೈಟ್ಹೌಸ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, ಗಗನಯಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದಾಗಿ ನಾವು ಭರವಸೆ ಕೊಟ್ಟಿದ್ದೇವು. ಆ ಭರವಸೆಯನ್ನು ಈಡೇರಿಸಿದ್ದೇವೆ. ನಮ್ಮ ಅಧ್ಯಕ್ಷ ಟ್ರಂಪ್ ಗಗನಯಾತ್ರಿಗಳನ್ನು ರಕ್ಷಿಸುವುದಾಗಿ ವಾಗ್ದಾನ ಮಾಡಿದ್ದರು ಅದರಂತೆ 9 ತಿಂಗಳುಗಳ ಬಳಿಕ ಅವರನ್ನು ರಕ್ಷಿಸಲಾಗಿದೆ ಇಂದು ಗಗನಯಾನಿಗಳು ಗಲ್ಫ್ ಆಫ್ ಅಮೆರಿಕಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ಹೇಳಿದೆ.
ಇನ್ನು ಇದೇ ವಿಚಾರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಸಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಸ್ಪೇಸ್ ಎಕ್ಸ್ನ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್, ಸ್ಪೇಸ್ ಎಕ್ಸ್ ಹಾಗೂ ನಾಸಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪೇಸ್ ಎಕ್ಸ್ ಮತ್ತು ನಾಸಾ ಗಗನಯಾನಿಗಳ ಮತ್ತೊಂದು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿವೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ