ಭಾರತ್ ಬಂದ್‌ಗೆ ಕರೆ, ನಾಳೆ ಇಡೀ ದಿನ ಸ್ತಬ್ಧವಾಗಲಿದೆಯಾ ದೇಶ..?
ಶಾಲಾ, ಕಾಲೇಜು, ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿವೆಯಾ?
ನಾಳಿನ ಭಾರತ್ ಬಂದ್ ಬೆಂಬಲಕ್ಕೆ ನಿಂತ ರಾಜಕೀಯ ಪಕ್ಷಗಳಾವುವು..?
ನವದೆಹಲಿ: ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿ ಒಳಪಂಗಡಗಳನ್ನು ಗುರುತಿಸುವಂತೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿದ ಬೆನ್ನಲ್ಲೆ ಈಗ ಪ್ರತಿಭಟನೆಯ ಬೆಂಕಿಯೊಂದು ಹೊತ್ತಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಖಂಡಿಸಿರುವ ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿ, ಭಾರತ್ ಬಂದ್‌ಗೆ ಕರೆ ಕೊಟ್ಟಿದೆ. ಈಗಾಗಲೇ ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಶುರುವಾಗಿದ್ದು, ದಲಿತ ಸಂಘಟನೆಗಳು ಆಗಸ್ಟ್ 21 ರಂದು ಭಾರತ್ ಬಂದ್‌ಗೆ ಕರೆಕೊಟ್ಟಿವೆ.
ಇದನ್ನೂ ಓದಿ: ನಾಳೆ ಭಾರತ್ ಬಂದ್.. ಮುಷ್ಕರಕ್ಕೆ ಕಾರಣವೇನು? ಶಾಲೆಗಳಿಗೆ ರಜೆ ಇರುತ್ತಾ? ಏನಿರುತ್ತೆ? ಏನಿರಲ್ಲ?
ಮೂಲಗಳ ಪ್ರಕಾರ ಬುಧವಾರ ಅಂದ್ರೆ ಆಗಸ್ಟ್ 21 ರಂದು ಭಾರತ್ ಬಂದ್ ಇದ್ದರೂ ಕೂಡ ಶಾಲಾ ಕಾಲೇಜುಗಳು, ಕಚೇರಿಗಳು ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇರಲಿವೆ. ಪೆಟ್ರೋಲ್ ಬಂಕ್ ಹಾಗೂ ವೈದ್ಯಕೀಯ ಸೇವೆಗಳು ಎಂದಿನಂತೆ ಇರಲಿವೆ ಎಂದು ಹೇಳಲಾಗುತ್ತಿದೆ. ರಾಜಸ್ತಾನ ಹಾಗೂ ಉತ್ತರಪ್ರದೇಶದಲ್ಲಿ ಭಾರತ್ ಬಂದ್ ತೀವ್ರ ಪರಿಣಾಮ ಬೀರುವ ಮುನ್ಸೂಚನೆ ಇದ್ದು. ಆ ಎರಡು ರಾಜ್ಯಗಳನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ.
ಇದನ್ನೂ ಓದಿ: ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?
ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ನೀಡಿರುವ ಭಾರತ್ ಬಂದ್‌ಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಬಹುಜನ ಸಮಾಜ ಪಕ್ಷ, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್ ವಾದ), ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಸ್ಟಾಲಿನ್ ನೇತೃತ್ವದ ಡಿಎಂಕೆ ಕೂಡ ಬೆಂಬಲ ನೀಡಿದೆ. ಕರ್ನಾಟಕದ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ, ಮಾದಿಗ ದಂಡೋರ, ಜನಶಕ್ತಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಅಂಬೇಡ್ಕರ್ ಯುವ ಸೇನೆ, ಸಮತಾ ಸೈನಿಕ ದಳ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಎಸ್ಐಓ, ಬಿವಿಎಸ್, ಕೆವಿಎಸ್ ಸೇರಿದಂತೆ ಮುಂತಾದ ಸಂಘಟನೆಗಳು ಬೆಂಬಲ ಘೋಷಿಸಿವೆ. ನಾಳೆ ಬೀದಿಗಿಳಿದು ಭಾರತ್ ಬಂದ್ ಸಕ್ಸಸ್ ಮಾಡಲು ಪ್ಲಾನ್ ಮಾಡಿಕೊಂಡಿವೆ.
ಏನಿದು ವಿವಾದ?
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಲಾಗುತ್ತಿದೆ. ಎಸ್ಸಿ, ಎಸ್ಸಿಯಲ್ಲಿರೋ ಪ್ರಬಲ ಜಾತಿಗಳೇ ಹೆಚ್ಚಿನ ಪ್ರಮಾಣ ಮೀಸಲಾತಿ ಪಡೆಯುತ್ತಿವೆ. ಹಾಗಾಗಿ ಎಲ್ಲರಿಗೂ ಸಮಾನವಾಗಿ ಒಳಮೀಸಲಾತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲೂ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ ನೀಡಲು ಅನುಮತಿ ಇದೆ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ತೀರ್ಪಿಗೆ ಈಗ ಅವಶ್ಯಕತೆ ಇದ್ದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮೀಸಲಾತಿ ನೀಡಬೇಕೆಂದು ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಕೋರ್ಟ್ ತೀರ್ಪಿನಲ್ಲಿ ವಿವಾದವೇನಿದೆ?
SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ ನೀಡಲು ಅನುಮತಿ ಇದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ 100% ಮೀಸಲಾತಿ ಮೀಸಲಿಡಲು ಸಾಧ್ಯವಿಲ್ಲ. ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂಬ ಸುಪ್ರೀಂಕೋರ್ಟ್ ತೀರ್ಪು ವಿವಾದಕ್ಕೀಡಾಗಿದೆ.
ಮೀಸಲಾತಿ ಒಂದು ವರ್ಗದಲ್ಲಿ ಮೊದಲ ಪೀಳಿಗೆಗೆ ಮಾತ್ರ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಎರಡನೇ ತಲೆಮಾರು ಬಂದರೆ ಮೀಸಲಾತಿಯ ಪ್ರಯೋಜನಗಳನ್ನು ನೀಡಬಾರದು. ಎಸ್ಸಿ/ಎಸ್ಟಿಗಳಲ್ಲಿ ಕೆನೆ ಪದರವನ್ನು ಗುರುತಿಸುವುದು ಸಾಂವಿಧಾನಿಕ ಕಡ್ಡಾಯವಾಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ