/newsfirstlive-kannada/media/post_attachments/wp-content/uploads/2025/01/bigg-boss34.jpg)
ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಕನ್ನಡದ ಬಿಗ್​ಬಾಸ್​​ದ್ದೇ ಹವಾ ಜೋರಾಗಿದೆ. ಎಲ್ಲಿ ನೋಡಿದರೂ ಬಿಗ್​ಬಾಸ್​ ಫೈನಲಿಸ್ಟ್​ಗಳ ಬಗ್ಗೆ ಜೋರು ಚರ್ಚೆ ಶುರುವಾಗಿದೆ. ಬಿಗ್​ಬಾಸ್​ ಸೀಸನ್​ 11 ಅದ್ಧೂರಿ ಗ್ರ್ಯಾಂಡ್ ಫಿನಾಲೆ ಇದೇ ವಾರದಲ್ಲಿದೆ. ಸದ್ಯ ಬಿಗ್​ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/01/bigg-boss37.jpg)
ಮೊದಲು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಸ್ಪರ್ಧಿ ಹನುಮಂತ. ಇದಾದ ಬಳಿಕ ಮೋಕ್ಷಿತಾ ಎಂಟ್ರಿ ಕೊಟ್ಟಿದ್ದರು. ನಂತರ ತ್ರಿವಿಕ್ರಮ್​ ಆಯ್ಕೆಯಾದ್ರು. ಭಾನುವಾರದ ಸಂಚಿಕೆಯಲ್ಲಿ ನಾಮಿನೇಷನ್​ ಸ್ಥಾನದಲ್ಲಿ ಕುಳಿತುಕೊಂಡಿದ್ದ ಉಗ್ರಂ ಮಂಜು, ಭವ್ಯಾ ಗೌಡ ಹಾಗೂ ರಜತ್​ ಸೇಫ್​ ಆಗಿ ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/01/bigg-boss35.jpg)
ಸದ್ಯ ಅತಿ ದೊಡ್ಡ ಬಿಗ್​ಬಾಸ್​ ಮನೆಯಲ್ಲಿ ಕೇವಲ ಆರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ಆರು ಸ್ಪರ್ಧಿಗಳು ಮೊದಲು ಬಿಗ್​ಬಾಸ್​ ಮನೆಯಿಂದ ಆಚೆ ಬರೋರು ಯಾರು ಅಂತ ಚರ್ಚೆ ಶುರುವಾಗಿದೆ. ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿ ಇದ್ದುಕೊಂಡು ಇನ್ನೇನೂ ಕೊನೆಯ ಕ್ಷಣದಲ್ಲಿ ಎಲಿಮಿನೇಟ್​ ಆಗೋದು ಯಾರು ಅಂತ ಭಾನುವಾರದ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಹೀಗಾಗಿ ಸೋಮವಾರದಿಂದ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿ ವೋಟ್​ ಮಾಡಲು ಬಿಗ್​ಬಾಸ್​ ವೋಟಿಂಗ್ ಪೋಲ್​ ಓಪನ್​ ಮಾಡಿದ್ದಾರೆ. ವೀಕ್ಷಕರಿಂದ ಯಾವ ಸ್ಪರ್ಧಿ ಅತಿ ಹೆಚ್ಚು ವೋಟ್ಸ್​ ಪಡೆದುಕೊಂಡು ಬಿಗ್​ಬಾಸ್​ ವಿನ್ನರ್​ ಆಗಲಿದ್ದಾರೆ ಅಂತ ಕಾದು ನೋಡಬೇಕಿದೆ.
/newsfirstlive-kannada/media/post_attachments/wp-content/uploads/2025/01/bigg-boss36.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us