ಸಂಭಾಜಿ ಮಹಾರಾಜ್​ ಬೆನ್ನಿಗೆ ಚೂರಿಯಿಟ್ಟವರು ಸಂಬಂಧಿಕರೇ? ಯಾರಿವರು ಛಾವಗೆ ಮೋಸ ಮಾಡಿದ ಗನೋಜಿ, ಕನ್ಹೋಜಿ?

author-image
Gopal Kulkarni
Updated On
ಸಂಭಾಜಿ ಮಹಾರಾಜ್​ ಬೆನ್ನಿಗೆ ಚೂರಿಯಿಟ್ಟವರು ಸಂಬಂಧಿಕರೇ? ಯಾರಿವರು ಛಾವಗೆ ಮೋಸ ಮಾಡಿದ ಗನೋಜಿ, ಕನ್ಹೋಜಿ?
Advertisment
  • ಸಿಂಹದ ಮರಿ ಛತ್ರಪತಿ ಸಂಭಾಜಿ ಮಹಾರಾಜರ ವಿರುದ್ಧ ಷಡ್ಯಂತ್ರ ಮಾಡಿದವರು ಯಾರು?
  • ಸಂಬಂಧಿಕರಿಂದಲೇ ಸಂಭಾಜಿ ಮಹಾರಾಜ ಮೊಘಲರ ಸೇನೆಯ ಕೈಗೆ ಸಿಕ್ಕಿದ್ದು ಹೇಗೆ ಗೊತ್ತಾ?
  • ಗನೋಜಿ, ಸಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿಯವರಿಗಿದ್ದ ಕೌಟುಂಬಿಕ ಸಂಬಂಧವೇನು?

ವಿಕ್ಕಿ ಕೌಶಾಲ್ ನಟನೆಯ ಛಾವ ಸಿನಿಮಾ ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸುತ್ತಿದೆ. ಬಾಕ್ಸ್ ಆಫೀಸ್ ದೂಳಿಪಟ ಮಾಡಿದ 2025ರ ಮೊದಲನೇ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಐತಿಹಾಸಿಕದ ಒಂದು ದುರಂತ ಅಧ್ಯಾಯವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮರಾಠಾ ಸಾಮ್ರಾಜ್ಯದ ಹುಲಿ ಎಂದೇ ಕರೆಸಿಕೊಂಡಿದ್ದ ಛತ್ರಪತಿ ಶಿವಾಜಿ ನಿಧನದ ನಂತರ ಅವರ ಕನಸಾದ ಹಿಂದವಿ ಸ್ವರಾಜ್ಯವನ್ನು ಮುಂದುವರಿಸಲು ಕಂಕಣ ಕಟ್ಟಿದ್ದು ಅವರದೇ ಮಗನಾದ ಸಂಭಾಜಿ ಬೋಸ್ಲೆ

ಏಪ್ರಿಲ್ 3, 1680ರಲ್ಲಿ ರಾಜೆ ಶಿವಾಜಿಯವರ ಮರಣವಾಗುತ್ತದೆ. ಅವರು ತಮ್ಮ ಮರಣಕ್ಕೂ ಪೂರ್ವ ತನ್ನ ಮರಾಠಾ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಯಾವುದೇ ಮಾತನ್ನು ಆಡಿರಲಿಲ್ಲ. ಇದೇ ಸಮಯದಲ್ಲಿ ಪರಿವಾರದ ಷಡ್ಯಂತ್ರದ ನಡುವೆಯೇ ಸಂಭಾಜಿ ಬೋಸ್ಲೆ ರಾಯಗಢದ ಸಿಂಹಾಸನವನ್ನು ಅಲಂಕರಿಸಿದರು.

publive-image

ಶಿವಾಜಿ ಮಹಾರಾಜ ಹೇಗೆ ಮೊಘಲರ ಸಾಮ್ರಾಜ್ಯಕ್ಕೆ ಹಾಗೂ ಔರಂಗಜೇಬನ ಅಟ್ಟಹಾಸದ ವಿರುದ್ಧ ಹೋರಾಡಿದ್ದರೋ. ದಖನ್​ ಪ್ರಾಂತ್ಯದೊಳಗೆ ಒಂದಿಂಚೂ ಭೂಮಿಯಲ್ಲಿ ಕಾಲಿಡಲು ಔರಂಗ್​ಜೇಬನಿಗೆ ಸಾಧ್ಯವಾಗದಂತೆ ಹೋರಾಡಿದರೋ, ಅದೇ ರೀತಿ ಸಂಭಾಜಿ ಮಹಾರಾಜ ಔರಂಗಜೇಬನ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದರು. ಅನೇಕ ಯುದ್ಧಗಳಲ್ಲಿ ಔರಂಗಜೇಬ್​​​ನ ಲಕ್ಷಾಂತರ ಸೈನಿಕರ ಪಡೆಯನ್ನು ಕೇವಲ ಸಾವಿರಾರು ಮರಾಠ ಸೈನಿಕರು ಸಂಭಾಜಿ ನೇತೃತ್ವದಲ್ಲಿ ಗೆದ್ದುಕೊಂಡರು. 1682ರಲ್ಲಿ ಔರಂಗಜೇಬನ ಸೇನೆ ದಖನ್ ಅಥವಾ ದಕ್ಷಿಣ ಭಾರತದತ್ತ ಔರಂಗನ ಸೇನೆ ನುಗ್ಗಿ ಬಂದಾಗ ಇದೇ ಸಂಭಾಜಿ ಮಹಾರಾಜರ ಸೇನೆ ಗೆರಿಲ್ಲಾ ಯುದ್ಧದ ಮೂಲಕ ಸೇನೆಯನ್ನು ಬಗ್ಗು ಬಡಿದಿತ್ತು. ನಿರಂತರ ನಡೆದ ಯುದ್ಧದಿಂದಾಗಿ ಔರಂಗಜೇಬ್​ನ ಸೇನೆ ಖಾಲಿಯಾಗುತ್ತಲೇ ಸಾಗಿತ್ತು.

ವಿಜಯಪುರ ಹಾಗೂ ಗೊಲ್ಕೊಂಡಾದಲ್ಲಿ ಮೊಘಲ ಸೇನೆ ತನ್ನ ಅಧಿಪತ್ಯವನ್ನು ಸಾಧಿಸಿತಾದರೂ ಉಳಿದ ಪ್ರದೇಶಗಳ ಒಂದಿಂಚೂ ಭೂಮಿಯಲ್ಲೂ ಕಾಲಿಡಲು ಆಗಲಿಲ್ಲ. ಯಾವಾಗ ಸಂಭಾಜಿ ಮಹಾರಾಜರ ಬಲಗೈ ಭಂಟನಂತಿದ್ದ ಸೇನಾಪತಿ ಹಂಬಿರಿರಾವ್​ ಅವರು ಯುದ್ಧದಲ್ಲಿ ಅಸುನೀಗಿದರೋ ಅದು ಮರಾಠ ಸೇನೆಯ ಮೇಲೆ ದೊಡ್ಡ ಘಾತಕ ಪರಿಣಾಮ ಬೀರಿತು. ಇದೇ ಸಮಯವನ್ನು ತಮ್ಮ ಷಡ್ಯಂತ್ರಕ್ಕೆ ಬಲವಾಗಿ ಮಾಡಿಕೊಂಡರು ಸಂಭಾಜಿ ಮಹಾರಾಜರ ಸಂಬಂಧಿಕರು

publive-image

ಒಂದು ಕಡೆ ಸಂಭಾಜಿ ಮಹಾರಾಜ ತನ್ನ ಸೇನೆಯನ್ನು ಮೂರು ಭಾಗವಾಗಿ ಮಾಡಿ, ಪೋರ್ಚಗೀಸರು, ನಿಜಾಮರು ಹಾಗೂ ಮೊಘಲರ ವಿರುದ್ಧ ಹೋರಾಡಲು ಸಿದ್ಧಗೊಳಿಸಿದ್ದರು. ಇದರಲ್ಲಿ ಜಯಗಳಿಸಿದರೂ ಕೂಡ. ಇದೇ ವೇಳೆ ಸಂಗಮೇಶ್ವರದಲ್ಲಿ ಒಂದು ಬೈಠಕ್ ಮಾಡಿ ರಾಯಗಢಕ್ಕೆ ತೆರಳಿಲಿದ್ದರು. ಅದು 31 ಜನವರಿ ,1689. ಸಂಭಾಜಿಯ ಸಂಬಂಧಿಕಾರಾದ ಗನೋಜಿನ ಶಿರ್ಕೆ ಹಾಗೂ ಕನ್ಹೋಜಿ ಶಿರ್ಕೆ ಮೊಘಲರೊಂದಿಗೆ ಕೈ ಜೋಡಿಸಿ ಸಂಭಾಜಿಯನ್ನು ಸಿಕ್ಕಾಕಿಸಲು ಯೋಜನೆ ರೂಪಿಸಿದ್ದರು ಮತ್ತು ಅದರಲ್ಲಿ ಯಶಸ್ವಿ ಕೂಡ ಆದರು.

publive-image

ಹೀಗೆ ಸಂಭಾಜಿ ಮಹಾರಾಜರನ್ನು ಔರಂಗಜೇಬನಿಗೆ ಹಿಡಿದುಕೊಟ್ಟವರಲ್ಲಿ ಒಬ್ಬನಾದ ಗನೋಜಿ ಶಿರ್ಕೆ ಸಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿಯವರ ಸಹೋದರನೇ ಆಗಿದ್ದ. ಇವರ ತಂದೆ ಒಂದು ಕಾಲದಲ್ಲಿ ಮೊಘಲರ ಸೇನೆಯಲ್ಲಿ ಸರ್ದಾರನಾಗಿ ಗುರುತಿಸಿಕೊಂಡಿದ್ದ. ಆ ಪ್ರದೇಶವನ್ನು ಸಂಭಾಜಿ ಮಹಾರಾಜರು ಕಬ್ಜಾ ಮಾಡಿಕೊಂಡಿದ್ದರು. ಆ ಪ್ರಾಂತ್ಯಕ್ಕೆ ಇಬ್ಬರನ್ನು ಸುಬೇದಾರನ್ನಾಗಿಯೂ ಕೂಡ ನೇಮಿಸಿದ್ದರು. ಒಂದು ಮೂಲಗಳು ಹೇಳುವ ಪ್ರಕಾರ ಕನ್ಹೋಜಿ ಹಾಗೂ ಗನೋಜಿ ಇಬ್ಬರು ಸಂಭಾಜಿ ಮಹಾರಾಜರ ಸೋದರ ಮಾವಂದಿರು. ತಮ್ಮದೇ ಲಾಲಸೆಗಾಗಿ ಮೊಘಲರ ಬಿತ್ತಿದ ಅಧಿಕಾರದ ದಾಹಕ್ಕಾಗಿ ಸಂಭಾಜಿ ಮಹಾರಾಜರ ವಿರುದ್ಧ ಷಡ್ಯಂತ್ರ ನಡೆಸಿ ಅವರನ್ನು ಮೊಘಲರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾದರು.

publive-image

ಸಂಗಮೇಶ್ವರದಿಂದ ಸಂಭಾಜಿ ಮಹಾರಾಜ್ ರಾಯಗಢಕ್ಕೆ ಯಾವ ಮಾರ್ಗದ ಮೂಲಕ ತೆರಳಲಿದ್ದಾರೆ ಎಂಬ ಸಂದೇಶವನ್ನು ಗನೋಜಿ ಹಾಗೂ ಕನ್ಹೋಜಿ ಇಬ್ಬರು ಮೊಘಲರ ಸರ್ದಾರ ಮುಖರಬ್ ಖಾನ್​​ಗೆ ತಿಳಿಸಿದ್ದರು. ಇಷ್ಟೇ ಕಾಯುತ್ತಿದ್ದ ಔರಂಗಜೇಬ್​ನ ಸೇನೆ ಗುಪ್ತ ಮಾರ್ಗಗಳ ಮೂಲಕ ಸಂಗಮೇಶ್ವರ ತಲುಪಿದರು. ಆ ಒಂದು ಗುಪ್ತ ದಾರಿ ಮರಾಠಾ ಸೈನಿಕರಾಚೆ ಬೇರೆ ಯಾರಿಗೂ ಕೂಡ ತಿಳಿದಿರಲಿಲ್ಲ. ಅದೇ ಮಾರ್ಗದ ಮೂಲಕ ಬಂದ ಮೊಘಲ ಸೈನಿಕರು ಅತ್ಯಂತ ಕಡಿಮೆ ಸೈನಿಕರೊಂದಿಗೆ ಇದ್ದ ಸಂಭಾಜಿ ಮಹಾರಾಜರ ಮೇಲೆ ದಾಳಿ ನಡೆಸಿದರು. ಔರಂಗಜೇಬನ ಆದೇಶದ ಪ್ರಕಾರ ಸಂಭಾಜಿ ಮಹಾರಾಜರನ್ನು ಜೀವಂತವಾಗಿ ಸೆರೆಹಿಡಿದುಕೊಂಡು ಔರಂಗನ ಬಳಿ ಬರಲಾಯ್ತು. ಅದು 1ನೇ ಫೆಬ್ರವರಿ 1689. ಸಂಬಾಜಿ ಮಹಾರಾಜರನ್ನು ಸರಪಳಿಗಳಿಂದ ಕಟ್ಟಿಕೊಂಡು ತುಲಾಪುರ ಕೋಟೆಗೆ ಕರೆದುಕೊಂಡು ಬಂದು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದರು. ಇದಕ್ಕೆ ಒಪ್ಪದ ಸಂಭಾಜಿ ಮಹಾರಾಜರನ್ನ ಚಿತ್ರ ವಿಚಿತ್ರ ಹಿಂಸೆ ನೀಡಿ ಕೊಂದು ಹಾಕಿದರು.

publive-image

ಹೇಗೆ ಕಿತ್ತೂರು ಚೆನ್ನಮ್ಮರನ್ನು ಬ್ರಿಟಿಷರಿಗೆ ಹಿಡಿದು ಕೊಡಲು ಮಲ್ಲಪ್ಪಶೆಟ್ಟಿ ಹಾಗೂ ವೆಂಕಟರಾವ್​ ಹೇಗೆ ಸಹಾಯ ಮಾಡಿದರೋ. ಸಂಗೋಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದು ಕೊಡಲು ಹೇಗೆ ಅವರ ಮಾವನೇ ಕಾರಣನಾದನೋ ಸಂಭಾಜಿ ಎಂಬ ಸಿಂಹದ ಮರಿಯನ್ನು ಸೆರೆ ಹಿಡಿಯಲು ಅವರ ಸೋದರ ಮಾವಂದಿರೇ ಕಾರಣರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment