/newsfirstlive-kannada/media/post_attachments/wp-content/uploads/2024/08/Tajmahal-Agra.jpg)
ನಮ್ಮ ದೇಶದ ವಿಶೇಷ ಗುರುತಾದ ತಾಜ್​ ಮಹಲ್ ಪರಿಚಯ ಯಾರಿಗೂ ಮಾಡಿಕೊಡುವುದು ಬೇಡ. ಇದೊಂದು ಪ್ರೇಮ ಸಂಕೇತ. ಪ್ರತಿ ಪ್ರೇಮಿಯೂ ತನ್ನ ಪ್ರೇಯಸಿಗೋ, ಪ್ರಿಯಕರಿನಗೋ ತಾಜ್​ ಮಹಲ್​​ನ್ನು ಗಿಫ್ಟ್ ಕೊಟ್ಟೆ ಕೊಟ್ಟಿರುತ್ತಾನೆ. ಜಗತ್ತಿನ ಏಳು ಅದ್ಭುತಗಳಲ್ಲಿ ತಾಜ್ ಕೂಡ ಒಂದು ಉತ್ತರಪ್ರದೇಶ ಇಲ್ಲವೇ ದೆಹಲಿಗೆ ಹೋದವರು ತಪ್ಪದೇ ತಾಜ್ ಮಹಲ್​ನ್ನು ನೋಡಿಕೊಂಡು ಬರುತ್ತಾರೆ. ಅದರ ಸೌಂದರ್ಯಕ್ಕೆ ಮರುಳಾಗಿ ತದೇಕಚಿತ್ತದಿಂದ ಅದನ್ನೇ ನೋಡುತ್ತಾ ನಿಲ್ಲುತ್ತಾರೆ. ಅಂತಹ ತಾಜ್ ಮಹಲ್​ನ ಕೆಲವು ರಹಸ್ಯಮಯ ವಿಷಯಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.
ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್ ಪ್ರೇಮದ ಸಂಕೇತವಾಗಿ, ಸೌಂದರ್ಯದ ಗುರುತಾಗಿ ಶತಮಾನಗಳಿಂದಲೂ ಆಗ್ರಾದಲ್ಲಿ ನಿಂತಿದೆ. ಇಷ್ಟು ಕಾಲದಲ್ಲಿ ಅದೆಷ್ಟೋ ನೀರು ಯಮುನಾ ತೀರದಲ್ಲಿ ಹರಿದು ಹೋಗಿದೆ. ಶತ ಶತಮಾನಗಳ ಇತಿಹಾಸಗಳಿಗೆ ತಾಜ್ ಮೂಕ ಸಾಕ್ಷಿಯಾಗಿ ನಿಂತಿದೆ. ಇದರ ನಿರ್ಮಾಣದ ವೈಖರಿ ಹಾಗೂ ವಾಸ್ತುಶೈಲಿಗೆ ಇಂದಿಗೂ ಕೂಡ ಜಗತ್ತು ನಿಬ್ಬೆರಗಿನಿಂದ ನೋಡುತ್ತದೆ. ಹಾಗಾದರೆ ಈ ಭವ್ಯ ಹಾಗೂ ಅದ್ಭುತ ಪ್ರೇಮ ಮಹಲ್​​ನ್ನು ವಿನ್ಯಾಸ ಮಾಡಿದವರು ಯಾರು? ಆ ವಿನ್ಯಾಸಕನಿಗೆ ಅಂದಿನ ಜಹಾಪನಾ ಷಹಾ ಜಹಾನ್​ ನೀಡಿದ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಆ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ.
/newsfirstlive-kannada/media/post_attachments/wp-content/uploads/2025/01/RED_PORT.jpg)
ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹೇಳುವ ಪ್ರಕಾರ ತಾಜ್ ಮಹಲ್ ನಿರ್ಮಾಣದ ಮುಖ್ಯ ವಾಸ್ತುಶಿಲ್ಪಿಯ ಹೆಸರು ಉಸ್ತಾದ್​ ಅಹ್ಮದ್ ಲಾಹೋರಿ. ಇಂದಿನ ಪಾಕಿಸ್ತಾನದ ಲಾಹೋರಿನಲ್ಲಿ ಆತ ಜನ್ಮಿಸಿದ್ದು. 1580ರಲ್ಲಿ ಜನಿಸಿದ ಉಸ್ತಾದ್ ಅಹ್ಮದ್ ಲಹೋರಿ 1649ರಲ್ಲಿ ತೀರಿಕೊಂಡ ಎಂದು ಇತಿಹಾಸವು ಹೇಳುತ್ತದೆ. ಇದೇ ವ್ಯಕ್ತಿಯೇ ತಾಜ್​ ಮಹಲ್​​ ನಿರ್ಮಾಣದ ಮುಖ್ಯ ವಾಸ್ತುಶಿಲ್ಪಿ ಮತ್ತು ಈತನಿಂದಲೇ ಕೆಂಪುಕೋಟೆಯ ವಿನ್ಯಾಸವೂ ಕೂಡ ಆಯಿತು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:1 ರಾತ್ರಿ ಕಳೆಯಲು ₹1 ಲಕ್ಷ.. ಮಹಾ ಕುಂಭಮೇಳದಲ್ಲಿ ಯಾವುದಕ್ಕೆ ಎಷ್ಟು ದುಡ್ಡು ಗೊತ್ತಾ?
ತಾಜ್​ ಮಹಲ್ ನಿರ್ಮಾಣಕ್ಕಾಗಿ ಉಸ್ತಾದ್ ಅಹ್ಮದ್ ಲಾಹೋರಿ ತೆಗೆದುಕೊಂಡಿದ್ದು ಬರೋಬ್ಬರಿ 16 ವರ್ಷಗಳು. ಲಾಹೋರಿ ಹಾಗೂ ಈತನ ತಂಡ ಬಹಳ ವರ್ಷಗಳ ಕಾಲ ಬಾಳಿಕೆ ಬರುವಂತಹ ತಂತ್ರಗಳನ್ನು ಉಪಯೋಗಿಸಿ ಈ ಕಟ್ಟಡವನ್ನು ಕಟ್ಟಿದರು ಎಂದು ಹೇಳಲಾಗುತ್ತದೆ. ವಾಸ್ತುಶಿಲ್ಪಿಗಳ, ಇಂಜಿನಿಯರ್​ಗಳ ಹಾಗೂ ಕುಶಲಕರ್ಮಿಗಳ ವಿಶೇಷ ತಂಡವನ್ನೇ ಲಾಹೋರಿ ಇದಕ್ಕಾಗಿ ಕಟ್ಟಿಕೊಂಡಿದ್ದ . ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯಂತ ನುರಿತ ತಜ್ಞರನ್ನೇ ತಾಜ್ ನಿರ್ಮಾಣಕ್ಕೆ ಲಾಹೋರಿ ಆಯ್ಕೆ ಮಾಡಿಕೊಂಡಿದ್ದ. ಪರ್ಷಿಯನ್, ಇಸ್ಲಾಮಿಕ್ ಹಾಗೂ ಮೊಘಲ್ ಶೈಲಿಯಲ್ಲಿ ಈ ತಾಜ್ ನಿರ್ಮಾಣವನ್ನು ಮಾಡಲು ನಿರ್ಧರಿಸಲಾಗಿತ್ತು.
ಇತಿಹಾಸದ ಪುಟಗಳನ್ನು ತೆರದು ನೋಡಿದಾಗ ಅಂದು ತಾಜ್​ ಮಹಲ್​ ನಿರ್ಮಾಣಕ್ಕೆ ವಿನ್ಯಾಸ ಮಾಡಲು ಉಸ್ತಾದ್​ ಅಹ್ಮದ್​ ಲಾಹೋರಿಗೆ ಷಹಾ ಜಹಾನ್ ಅಂದಿನ ಕಾಲದ ಒಟ್ಟು 10 ಸಾವಿರ ರೂಪಾಯಿಗಳನ್ನು ನೀಡಿದ್ದ ಎನ್ನಲಾಗುತ್ತದೆ. ಅದನ್ನು ಇಂದಿನ ಕಾಲಕ್ಕೆ ಹೋಲಿಸದರೆ ಆಧುನಿಕ ಸಿಇಓಗಳ ತಿಂಗಳ ಸಂಬಳದ ಸಾವಿರ ಪಟ್ಟು ಹೆಚ್ಚಳ ಎಂದು ಲೆಕ್ಕ ಹಾಕಲಾಗುತ್ತದೆ. ಅಂದಿನ ಕಾಲದ ಅತ್ಯಂತ ಜನಪ್ರಿಯ ವಾಸ್ತುಶಿಲ್ಪಿಯಾಗಿ ಗುರುತಿಸಿಕೊಂಡಿದ್ದರು ಉಸ್ತಾದ್​ ಅಹ್ಮದ್​ ಲಾಹೋರಿ. ಹೀಗಾಗಿ ತಾಜ್​ ಮಹಲ್ ನಿರ್ಮಾಣಕ್ಕೆ ಷಹಾ ಜಹಾನ್ ಈತನನ್ನೇ ನೇಮಿಸಿದ್ದ. 1631ರಲ್ಲಿ ಲಾಹೋರಿ ತಾಜ್ ಮಹಲ್​ನ ಮೊದಲ ವಿನ್ಯಾಸವನ್ನು ತಯಾರಿಸಿದ್ದ ಎಂದು ತಿಳೀದು ಬಂದಿದೆ. ತಾಜ್, ಕೆಂಪುಕೋಟೆಯ ಜೊತೆಗೆ ದೆಹಲಿಯ ಜಾಮಾ ಮಸೀದಿಯ ವಾಸ್ತುಶಿಲ್ಪವೂ ಕೂಡ ಲಾಹೋರಿಯಿಂದಲೇ ವಿನ್ಯಾಸಗೊಂಡಿದ್ದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us