/newsfirstlive-kannada/media/post_attachments/wp-content/uploads/2025/05/battle-tanks-2.jpg)
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಗಡಿಯಲ್ಲಿ ಯುದ್ಧಕ್ಕೆ ಆಹ್ವಾನಿಸುವ ಚಟುವಟಿಕೆಗಳು ಜೋರಾಗಿದ್ದು, ಯಾವುದೇ ಕ್ಷಣದಲ್ಲಾದರೂ ಮಿಲಿಟರಿ ಆಪರೇಷನ್ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಎರಡೂ ದೇಶಗಳ ಮಧ್ಯೆ ಯುದ್ಧದ ಭೀತಿ ಆವರಿಸಿದೆ.
ಯುದ್ಧ ಭೀತಿಗೆ ಕಾರಣಗಳು..
- ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಪಣ ತೊಟ್ಟಿದೆ
- ಈಗಾಗಲೇ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಮೆಗಾ ಕೂಂಬಿಂಗ್ ಶುರುವಾಗಿದೆ
- ಉಗ್ರರ, ನರ ರಕ್ಕಸರಿಗೆ ಆಶ್ರಯ ನೀಡ್ತಿದ್ದವ್ರ ಮನೆಗಳನ್ನ ಸೇನೆ ಉಡೀಸ್ ಮಾಡ್ತಿದೆ
- ಭಾರತವು ಪಾಕಿಸ್ತಾನದ ವಿರುದ್ಧ ಜಲ ಒಪ್ಪಂದಗಳನ್ನು ಸ್ಥಗಿತಗೊಳಿಸಿದೆ
- ಪಾಕಿಸ್ತಾನಿಗಳ ವೀಸಾ ರದ್ದು, ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದೆ
- ಪ್ರತೀಕಾರವಾಗಿ ಪಾಕಿಸ್ತಾನವು ಭಾರತಕ್ಕೆ ವಾಯುಪ್ರದೇಶ ಮುಚ್ಚಿದೆ
- ಅದಕ್ಕೆ ಭಾರತ ಕೂಡ ಪಾಕಿಸ್ತಾನಕ್ಕೆ ಕೌಂಟರ್ ನೀಡಿ, ನೋ ಎಂಟ್ರಿ ಎಂದಿದೆ
- ಪಾಕಿಸ್ತಾನ ಸೇನೆಯಿಂದ ಗಡಿಯಲ್ಲಿ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ
- ಪಾಕಿಸ್ತಾನ ನಾಯಕರಿಂದ ಭಾರತದ ವಿರುದ್ಧ ಉದ್ಧಟತನದ ಹೇಳಿಕೆಗಳು..
ಬೆಳಗ್ಗೆ ಏನಾಗಿದೆ..?
ಇಂದು ಬೆಳಗ್ಗೆಯೂ ಪಾಕಿಸ್ತಾನ ಸೇನೆ ಭಾರತೀಯ ಯೋಧರ ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಅದಕ್ಕೆ ಪ್ರತಿಯಾಗಿ ಪಂಜಾಬ್ ಗಡಿಯಲ್ಲಿ ಭಾರತೀಯ ಸೇನೆ ಯುದ್ಧ ಟ್ಯಾಂಕ್ಗಳು, ಫಿರಂಗಿಗಳನ್ನು ನಿಯೋಜನೆ ಮಾಡಿದೆ. ಅಲ್ಲದೇ, ಪಾಕಿಸ್ತಾನದ ಯುದ್ಧ ವಿಮಾನಗಳ ದಿಕ್ಕು ತಪ್ಪಿಸಲು ಜಾಮರ್ಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಾದರೂ ಮಿಲಿಟರಿ ಆಪರೇಷನ್ ಶುರುವಾಗಬಹುದು.
ಪ್ರಶ್ನೆ ಏನು..?
ಒಂದು ವೇಳೆ ಯುದ್ಧ ಶುರುವಾದರೆ, ಮೊದಲು ವಾರ್ ಅನೌನ್ಸ್ ಮಾಡಿದ ರಾಷ್ಟ್ರಕ್ಕೆ ಎಷ್ಟು ಹೊಡೆತ ಬೀಳಲಿದೆ ಎಂಬುವುದು. ಯಾವುದೇ ದೇಶ ಇನ್ನೊಂದು ದೇಶದ ಮೇಲೆ ದಾಳಿ ಮಾಡಿದಾಗ ಅದು ತುಂಬಾನೇ ನಷ್ಟ ಅನುಭವಿಸುತ್ತದೆ. ಶತ್ರು ದೇಶದ ಮೇಲೆ ಮೊದಲು ದಾಳಿ ಮಾಡುವುದರಿಂದ ಎಷ್ಟು ಅನುಕೂಲಗಳಿವೆಯೋ, ಅಷ್ಟೇ ಅನಾನುಕೂಲಗಳೂ ಇವೆ. ಒಂದು ವೇಳೆ ಮೊದಲು ದಾಳಿ ಮಾಡಿದ ದೇಶವು, ಶತ್ರು ದೇಶಕ್ಕಿಂತ ಬಲವಾದ ಸ್ಥಾನ ಹೊಂದಿದ್ದರೆ ದಾಳಿಯ ಪ್ರಯೋಜನ ಪಡೆಯಬಹುದು. ಆದರೆ, ಶತ್ರುಗಳಿಂದ ಅನಿರೀಕ್ಷಿತ ಹಾನಿ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ಅಂತರರಾಷ್ಟ್ರೀಯ ಕಾನೂನು ಮತ್ತು ಭದ್ರತಾ ಶಿಷ್ಟಾಚಾರಗಳನ್ನು ಸಹ ಉಲ್ಲಂಘಿಸಿದಂತೆ ಆಗಲಿದೆ. ಮೊದಲು ದಾಳಿ ಮಾಡುವ ದೇಶಕ್ಕೆ ಆರ್ಥಿಕ, ಮಿಲಿಟರಿ ಮತ್ತು ಸಾಮಾಜಿಕ ಹಾನಿ ಆಗಲಿದೆ.
ಕಳಪೆ ಆರ್ಥಿಕತೆ..
ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ.. ಯಾವುದೇ ಮಾನ್ಯ ಕಾರಣವಿಲ್ಲದೆ ಬೇರೆ ರಾಷ್ಟ್ರದ ಮೇಲೆ ದಾಳಿ ಮಾಡೋದು ಯುದ್ಧ ಅಪರಾಧ. ಅಂತಹ ಪರಿಸ್ಥಿತಿಯಲ್ಲಿ, ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಮೊದಲು ದಾಳಿ ಮಾಡಿದ ದೇಶಕ್ಕೆ ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ. ಯುದ್ಧದ ಪರಿಸ್ಥಿತಿಯಲ್ಲಿ ತುಂಬಾ ವೆಚ್ಚಗಳು ಇರೋದ್ರಿಂದ ಭಾರೀ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಮಿಲಿಟರಿ ಉಪಕರಣಗಳು, ಸೈನಿಕರು ಮತ್ತು ಇತರ ಯುದ್ಧ ಸಂಬಂಧಿತ ವೆಚ್ಚಗಳಿಗಾಗಿ ಅಪಾರ ಪ್ರಮಾಣದ ಹಣ ಖರ್ಚು ಆಗಲಿದೆ. ಇದು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ.
ಸೇನಾ ನಷ್ಟಗಳು
ಮೊದಲು ದಾಳಿ ಮಾಡುವ ದೇಶ ಸೈನಿಕರನ್ನು ಪ್ರಾಣ ಕಳೆದುಕೊಳ್ಳುವ ಮತ್ತು ಗಂಭೀರ ಗಾಯಗಳನ್ನುಂಟುಮಾಡುವ ಅಪಾಯ ಎದುರಿಸುತ್ತದೆ. ಇದು ಮಿಲಿಟರಿ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಯುದ್ಧವು ಸಾಮಾಜಿಕ ಹಾನಿಯನ್ನೂ ಉಂಟುಮಾಡುತ್ತದೆ. ದೇಶದಲ್ಲಿ ಅಪರಾಧ, ಸಾಮಾಜಿಕ ಅಶಾಂತಿ ಮತ್ತು ನಾಗರಿಕ ಹಿಂಸಾಚಾರದ ಅಪಾಯ ಹೆಚ್ಚಾಗುತ್ತದೆ. ದೇಶದ ರಚನೆಯೂ ದುರ್ಬಲವಾಗುತ್ತದೆ. ಜನರ ವಿಶ್ವಾಸ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತ ಜಾಮರ್ ಅಸ್ತ್ರ; ಇದರಿಂದ ಪುಕ್ಕಲು ಪಾಕ್ ಸೇನೆಗೆ ಹೇಗೆ ಕಷ್ಟ ಆಗ್ತದೆ..?
ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ.. ಪಾಕಿಸ್ತಾನಕ್ಕೆ ಈಗ ಏರ್ಸ್ಟ್ರೈಕ್ ಆಘಾತ; ನಿನ್ನೆ ಭಾರತ ಏನ್ಮಾಡಿದೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ