/newsfirstlive-kannada/media/post_attachments/wp-content/uploads/2024/10/ADAM-LANZA.jpg)
ಭಾರತೀಯ ವಿಮಾನ ಯಾನ ಸಂಸ್ಥೆಗೆ ಕಳೆದ ಒಂದು ವಾರದಲ್ಲಿ 90 ಹುಸಿಬಾಂಬ್ ಬೆದರಿಕೆಗಳನ್ನು ಕಂಡಿವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರಯಾಣಿಕರಿಗೆ ಸೇವೆ ನೀಡುವ ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೂ ಈ ತರಹದ ಹುಸಿ ಬಾಂಬ್ ಬೆದರಿಕೆಗಳು ಹೋಗಿವೆ, ಇದರಿಂದಾಗಿ ಅನೇಕ ಗೊಂದಲಗಳು ಉಂಟಾಗಿ, ವಿಮಾನ ಹಾರಾಟದ ಅವಧಿ ವಿಳಂಬವಾಗಿ ಕೆಲವೊಮ್ಮೆ ಹಾರಾಟವೇ ರದ್ದುಗೊಳಿಸುವಂತಹ ಸಂದರ್ಭಗಳು ಕೂಡ ಬಂದಿವೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು; ಉಗ್ರರ ದಾಳಿಗೆ ಬಲಿಯಾದ 7 ಜನ
ರಾಷ್ಟ್ರೀಯ ಮಾಧ್ಯಮಗಳ ವರದಿ ನೀಡಿರುವ ಪ್ರಕಾರ ಈ ಒಂದು ಹುಸಿಬಾಂ*ಬ್ ಕರೆಯಲ್ಲಿ ಶೇಕಡಾ 70 ರಷ್ಟು @adamlanza111 ಎಂಬ ಎಕ್ಸ್ ಖಾತೆಯಿಂದಲೇ ಬಂದಿವೆ. ಈ ಒಂದು ಎಕ್ಸ್ ಖಾತೆಯಿಂದ ಶುಕ್ರವಾರ ರಾತ್ರಿ ಅಂದ್ರೆ ಅಕ್ಟೋಬರ್ 18ರ ರಾತ್ರಿ 12 ಹುಸಿ ಬಾಂ*ಬ್ ಕರೆ ಬಂದಿವೆ. ಶನಿವಾರ ಅಕ್ಟೋಬರ್ 19ರಂದು 34 ಬೆದರಿಕೆಗಳು ಬಂದಿವೆ. ಏರ್ ಇಂಡಿಯಾ ಸೇರಿದಂತೆ ವಿಸ್ತಾರ, ಇಂಡಿಗೋ, ಆಕಾಸ್ ಏರ್, ಅಲೈನ್ಸ್ ಏರ್, ಸ್ಪೈಸ್ ಜೆಟ್, ಸೇರಿದಂತೆ ಅಮೆರಿಕಾದ ಏರ್ಲೈನ್ಸ್ ನ್ಯೂಜಿಲೆಂಡ್ನ ಏರ್ ನ್ಯೂಜಿಲೆಂಡ್ಗೂ ಕೂಡ ಈ ರೀತಿಯ ಬಾ*ಂಬ್ ಬೆದರಿಕೆಯ ಕರೆಗಳು ಬಂದಿವೆ.
ಯಾರು ಈ ಅದಮ್ ಲಾಂಜಾ?
ಬೆದರಿಕೆ ಬರುತ್ತಿರುವ ಎಕ್ಸ್ ಖಾತೆಯ ಅದಮ್ ಲಾಂಜಾ ಎಂಬುವವನು ಯಾರು ಅಂತ ನೋಡುತ್ತಾ ಹೋದ್ರೆ ಅವನ ಹಿಂದಿನ ನಟೋರಿಯಸ್ ಚರಿತ್ರೆ ತೆರೆದುಕೊಳ್ಳುತ್ತದೆ. 201ರಲ್ಲಿ ಯುಎಸ್ನ ಎಲಿಮೆಂಟರಿ ಸ್ಕೂಲ್ಗೆ ನುಗ್ಗಿ ಈತ ಮನಬಂದಂತೆ ಗುಂಡಿನ ದಾಳಿ ಮಾಡಿದ್ದ. ಡಿಸೆಂಬರ್ 14ರಂದು ಸ್ಯಾಂಡಿಹುಕ್ನ ಎಲಿಮೆಂಟರಿ ಸ್ಕೂಲ್ ನುಗ್ಗಿದ್ದ ಈತ ಮನಬಂದಂತೆ ಶೂಟ್ ಮಾಡಿ 20 ಮಕ್ಕಳ ಭೀಕರ ಅಂತ್ಯಕ್ಕೆ ಕಾರಣನಾಗಿದ್ದ. ಮೃತಪಟ್ಟ ಮಕ್ಕಳಲ್ಲಿ 6 ಮತ್ತು 7 ವರ್ಷದ ಮಕ್ಕಳೇ ಹೆಚ್ಚು ಇದ್ದರು ಹಾಗೂ 6 ಜನ ಶಿಕ್ಷಕರಿದ್ದರು ಇದೇ ಶಾಲೆಯಲ್ಲಿ ಈತ ನಾಲ್ಕು ವರ್ಷ ವಿದ್ಯಾಭ್ಯಾಸ ಮಾಡಿದ್ದ.
ಇದನ್ನೂ ಓದಿ: ಮಾಜಿ ವಿಜ್ಞಾನಿ ಹಾಗೂ ಪತ್ನಿಯನ್ನು ಸೆರೆಯಾಳಾಗಿ ಹಿಡಿದ ಕಳ್ಳರು! ಆಮೇಲಾಗಿದ್ದೇನು?
20 ವರ್ಷದ ಈತ ತನ್ನ ಸ್ವಂತ ತಾಯಿ ನ್ಯಾನ್ಸಿ ಲಾಂಜಳನ್ನ ಗುಂಡಿಟ್ಟು ಕೊಂದಿದ್ದ. ಹೆತ್ತ ತಾಯಿಗೆ ಮಲುಗುವ ಕೋಣೆಗೆ ಹೋಗುವಾಗ ಗುಂಡಿಕ್ಕಿ ಹತ್ಯೆ ಮಾಡಿದ್ದ ಈ ನೀಚ. ಇದೇ ವೇಳೆ ಮನೆಯಲ್ಲಿ ಇದ್ದ AR-15 ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲ್ಗಳನ್ನು ತೆಗೆದುಕೊಂಡು ಪರಾರಿಯಾಗಿ ಆಮೇಲೆ ಎಲಿಮೆಂಟರಿ ಸ್ಕೂಲ್ಗೆ ನುಗ್ಗಿ ದೊಡ್ಡ ಹತ್ಯಾಕಾಂಡವನ್ನೇ ಮೆರೆದಿದ್ದ. ಈತನಿಂದಲೇ ಈಗ ಹುಸಿ ಬಾಂಬ್ ಬೆದರಿಕೆಗಳನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಅನೇಕ ದೇಶದ ವಿಮಾನ ಯಾನ ಸಂಸ್ಥೆಗಳು ಎದುರಿಸುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ