/newsfirstlive-kannada/media/post_attachments/wp-content/uploads/2025/02/MUSK.jpg)
ಆಕಾಶ್ ಬೊಬ್ಬಾ (Akash Bobba). ಭಾರತ ಮೂಲದ ಈ ಎಂಜಿನಿಯರ್ ವಯಸ್ಸು ಕೇವಲ 22. ಇಂದು ಆಕಾಶ್ ಬೊಬ್ಬ ಅವರ ಹೆಸರು ಜಗತ್ತಿನಾದ್ಯಂತ ಚರ್ಚೆ ಆಗುತ್ತಿದ್ದು, ಅದಕ್ಕೆ ಕಾರಣ ಎಲಾನ್ ಮಸ್ಕ್ (Elon Musk). ಟ್ರಂಪ್ ಸರ್ಕಾರ ಬಂದ ಮೇಲೆ ಎಲಾನ್ ಮಸ್ಕ್ ಸ್ಥಾಪಿಸಿದ ‘ಸರ್ಕಾರಿ ದಕ್ಷತೆ ಇಲಾಖೆ’ (DOGE: Department of Government Efficiency)ಯು ಆರು ಯುವ ಎಂಜಿನಿಯರ್ಗಳನ್ನು ನೇಮಿಸಿಕೊಂಡಿದೆ. ಈ ಆರು ಮಂದಿ ಯುವ ಎಂಜಿನಿಯರ್ ವಯಸ್ಸು 19 ರಿಂದ 24 ವರ್ಷಗಳು. ಅವರಲ್ಲಿ ಭಾರತದ ಆಕಾಶ್ ಬೊಬ್ಬಾ ಕೂಡ ಒಬ್ಬರು. ಈ ಯುವ ಎಂಜಿನಿಯರ್‌ಗಳಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಪ್ರವೇಶ ನೀಡಿರೋದೇ ಚರ್ಚೆಯ ವಿಷಯ. ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಅನುಭವ ಕಡಿಮೆ ಇರುವ ಯುವ ಎಂಜಿನಿಯರ್‌ಗಳ ನೇಮಕ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟು ಮಾಡಬಹುದು ಅಂತ ತಜ್ಞರು ನಂಬಿದ್ದಾರೆ. ಟೀಕೆಗಳ ಹೊರತಾಗಿಯೂ ಒಬ್ಬ ಅದ್ಭುತ ಕೋಡರ್ ಆಗಿರುವ ಬೊಬ್ಬಾರ ಪ್ರಯಾಣ ಅತ್ಯಂತ ಸ್ಫೂರ್ತಿದಾಯಕವಾಗಿದೆ.
ಯಾರು ಆಕಾಶ್ ಬೊಬ್ಬಾ..?
ಆಕಾಶ್ ಬೊಬ್ಬಾ DOGEಗೆ ಸೇರುವ ಮೊದಲು ತಂತ್ರಜ್ಞಾನ (Technology) ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು. ಯುಸಿ ಬರ್ಕ್ಲಿಯ (UC Berkeley) ನಿರ್ವಹಣೆ, ಉದ್ಯಮಶೀಲತೆ (UC Berkeley) ಮತ್ತು ತಂತ್ರಜ್ಞಾನ (MET) ಪ್ರೊಗ್ರಾಮಿಂಗ್ನಲ್ಲಿ ಸ್ಟಡಿ ಮಾಡಿದರು. ಇವ್ರನ್ನು ಗುರುತಿಸಿರುವ ಮಸ್ಕ್, ‘ಭವಿಷ್ಯದ ತಂತ್ರಜ್ಞಾನದ ನಾಯಕರ’ನ್ನಾಗಿ ಸಿದ್ಧಪಡಿಸಲು ಹೊರಟಿದ್ದಾರೆ.
ಇದನ್ನೂ ಓದಿ: ಮಂಗನ ಕಾಯಿಲೆ ಕುರಿತು ಆಘಾತಕಾರಿ ಮಾಹಿತಿ; ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ರಿವೀಲ್..!
ವೃತ್ತಿಜೀವನ ಆರಂಭಕ್ಕೂ ಮೊದಲು..
ಮೆಟಾ (Meta), ಪಲಂತಿರ್ (Palantir) ಮತ್ತು ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನಂತಹ (Bridgewater associates) ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಿದರು. ಅಲ್ಲಿ ಅವರು AI, ಡೇಟಾ ಅನಾಲಿಸಿಸ್ ಮತ್ತು ಹಣಕಾಸು ಮಾಡೆಲಿಂಗ್‌ನಲ್ಲಿ ಪರಿಣತಿ ಪಡೆದರು. ಕಠಿಣ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುವುದು ಹಾಗೂ ಎಷ್ಟೇ ಒತ್ತಡದ ಸಂದರ್ಭದಲ್ಲೂ ಶಾಂತವಾಗಿರುವ ಕೌಶಲ್ಯವನ್ನು ಆಕಾಶ್ ಹೊಂದಿದ್ದಾರೆ.
ಆಕಾಶ್ ಬಗ್ಗೆ ಕ್ಲಾಸ್ಮೇಟ್ ಹೇಳಿದ ಕತೆ..
ಬೊಬ್ಬಾ ಪ್ರತಿಭೆ ಎಂಥದ್ದು ಅನ್ನೋದಕ್ಕೆ ಉತ್ತಮ ಉದಾಹರಣೆ ಆತನ ಸ್ನೇಹಿತ ಹೇಳಿದ ಒಂದು ಸ್ಟೋರಿ. UC Berkeley ಅವಧಿಯಲ್ಲಿ ಆಕಾಶ್ ಜೊತೆ ಚರಿಸ್ ಜಾಂಗ್ (Charis Zhang) ಎಂಬ ಸಹಪಾಠಿ ಇದ್ದ. ಇವರು, ಆಕಾಶ್ಗೆ ಇರುವ ಜ್ಞಾನ, ತೀಕ್ಷ್ಣವಾದ ಕೋಡಿಂಗ್ (Coding brilliance) ಕೌಶಲ್ಯಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ
ಜಾಂಗ್ ಅವರೇ ಹೇಳುವಂತೆ.. ‘ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು ಆಕಸ್ಮಿಕವಾಗಿ ಸಂಪೂರ್ಣ ಕೋಡ್ ಫೈಲ್ ಡಿಲೀಟ್ ಮಾಡಿಬಿಟ್ಟಿದ್ದೆ. ನನಗೆ ಗಾಬರಿ ಆಯಿತು. ಕೊನೆಗೆ ನನ್ನ ಸಹಾಯಕ್ಕೆ ಆಕಾಶ್ ಬಂದ. ಆತ ನನಗೆ ಧೈರ್ಯ ನೀಡಿ ಒಂದೇ ರಾತ್ರಿಯಲ್ಲಿ ಸಂಪೂರ್ಣ ಕೋಡಿಂಗ್ ಪುನಃ ಬರೆದ. ಅದು ಮೊದಲಿಗಿಂತಲೂ ಉತ್ತಮವಾಗಿತ್ತು. ಇದರಿಂದ ನಾನು ಆ ಪ್ರಾಜೆಕ್ಟ್ ಅನ್ನು ಸರಿಯಾದ ಸಮಯಕ್ಕೆ ಸಲ್ಲಿಸಲು ಸಾಧ್ಯವಾಯಿತು. ಆ ಮೂಲಕ ಕ್ಲಾಸ್ನಲ್ಲಿ ಫಸ್ಟ್ ಱಂಕ್ ಪಡೆದುಕೊಂಡೆವು ಎಂದಿದ್ದಾರೆ.
ನೇಮಕಾತಿ ವಿವಾದ ಏಕೆ?
ಮಸ್ಕ್ ಅವರ ಸರ್ಕಾರಿ ಸಂಸ್ಥೆಯಲ್ಲಿ ಸೇರ್ಪಡೆಗೊಂಡ ಏಕೈಕ ಯುವ ಎಂಜಿನಿಯರ್ ಆಕಾಶ್ ಬೊಬ್ಬಾ ಅಲ್ಲ. DOGE ತಂಡಕ್ಕೆ ಒಟ್ಟು ಆರು ಹೊಸ ಎಂಜಿನಿಯರ್‌ಗಳ ನೇಮಕವಾಗಿದೆ. ಅವರಲ್ಲಿ ಹಲವರು ಇತ್ತೀಚೆಗೆ ಪದವಿ ಮುಗಿಸಿದ್ದಾರೆ. ಅವರೆಲ್ಲರಿಗೂ ಸರ್ಕಾರಿ ಇ-ಮೇಲ್ ಮತ್ತು ಉನ್ನತ ಮಟ್ಟದ ಭದ್ರತಾ ಅನುಮತಿ ನೀಡಲಾಗಿದೆ. ಇದು ರಾಷ್ಟ್ರೀಯ ಭದ್ರತೆಗೆ ದಕ್ಕೆ ಬರುವ ವಿಚಾರ ಎಂದು ಹೇಳಲಾಗಿದೆ.
ಈ ಯುವಕರು ಪ್ರತಿಭಾನ್ವಿತರಾಗಿದ್ದರೂ ಅವರಿಗೆ ಸರ್ಕಾರ ಅಥವಾ ಸಾರ್ವಜನಿಕ ಸೇವೆಯಲ್ಲಿ ಯಾವುದೇ ಅನುಭವ ಇಲ್ಲ. ಯುವ ಎಂಜಿನಿಯರ್‌ಗಳಿಗೆ ಸಾಮಾನ್ಯ ಸೇವೆಗಳ ಆಡಳಿತ (GSA) ಮತ್ತು ಸಿಬ್ಬಂದಿ ನಿರ್ವಹಣಾ ಕಚೇರಿ (OPM) ನಂತಹ ಸಂಸ್ಥೆಗಳಿಗೆ ಪ್ರವೇಶ ನೀಡಿರೋದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ತಜ್ಞರು ವಾದಿಸುತ್ತಿದ್ದಾರೆ.
ವರದಿಗಳ ಪ್ರಕಾರ.. ಆಕಾಶ್ ಬೊಬ್ಬಾ ಸೇರಿದಂತೆ ಕನಿಷ್ಠ ನಾಲ್ವರು ಹೊಸ ಎಂಜಿನಿಯರ್‌ಗಳು ಅಲ್ಲಿದ್ದಾರೆ. ಅವರಿಗೆ ಉನ್ನತ ಮಟ್ಟದ ಭದ್ರತಾ ಅನುಮತಿ ನೀಡಲಾಗಿದೆ. ಅವರು ಸರ್ಕಾರಿ ಐಟಿ ಮೂಲಸೌಕರ್ಯ ಮತ್ತು ಸೂಕ್ಷ್ಮ ಡೇಟಾವನ್ನು ನೇರವಾಗಿ ಪ್ರವೇಶಿಸಬಹುದು.
ಇದನ್ನೂ ಓದಿ: ಗರ್ಲ್ ಫ್ರೆಂಡ್ಗಾಗಿ ₹3 ಕೋಟಿ ಮನೆ ಕಟ್ಟಿದ ಪ್ರೊಫೆಷನಲ್ ಕಳ್ಳ; ಬೆಂಗಳೂರಲ್ಲಿ ಈ ಖದೀಮ ಸಿಕ್ಕಿದ್ದೇ ರೋಚಕ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ