ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆಬಲ; ಯಾರು ಈ ಓಂಕಾರ್ ಸಾಲ್ವಿ..?

author-image
Ganesh
Updated On
ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆಬಲ; ಯಾರು ಈ ಓಂಕಾರ್ ಸಾಲ್ವಿ..?
Advertisment
  • ಹರಾಜಿಗೂ ಮುನ್ನವೇ ಹೊಸ ಕೋಚ್ ಪಡೆದ ಆರ್​ಸಿಬಿ
  • ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಆಯ್ಕೆ
  • ಓಂಕಾರ್ ಸಾಲ್ವಿ ನೇಮಕದ ಬಗ್ಗೆ ಆರ್​ಸಿಬಿ ಅಧಿಕೃತ ಮಾಹಿತಿ

IPL 2025ರ ಮೆಗಾ ಹರಾಜಿನ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೊಡ್ಡ ಹೆಜ್ಜೆಯನ್ನಿಟ್ಟಿದೆ. ತಂಡದ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ (Omkar Salvi) ಅವರನ್ನು ನೇಮಿಸಿದೆ. ಬೆನ್ನಲ್ಲೇ ಓಂಕಾರ್ ಸಾಲ್ವಿ ಯಾರು ಎಂಬ ಪ್ರಶ್ನೆ ಶುರುವಾಗಿದೆ..?

ಯಾರು ಓಂಕಾರ್ ಸಾಲ್ವಿ..?

ಓಂಕಾರ್ ಸಾಲ್ವಿ ಅವರು ಮಹಾರಾಷ್ಟ್ರದ ಮುಂಬೈ ಮೂಲದವರು. ಟೀಂ ಇಂಡಿಯಾದ ಮಾಜಿ ವೇಗಿ ಅವಿಷ್ಕಾರ್ ಸಲ್ವಿ ಸಹೋದರ. 46 ವರ್ಷದ ಓಂಕಾರ್ ಸಾಲ್ವಿ ದೇಶಿಯ ಕ್ರಿಕೆಟ್​ನಲ್ಲಿ ಕೋಚ್ ಆಗಿ ಹೆಸರು ಮಾಡಿದ್ದಾರೆ. ಅಂದಹಾಗೆ ಇವರಿಗೆ ಐಪಿಎಲ್ ಫ್ರಾಂಚೈಸಿಯಲ್ಲಿ ಕೆಲಸ ಮಾಡುವುದು ಇದು ಹೊಸದೇನೂ ಅಲ್ಲ. ಆರ್​ಸಿಬಿಗೆ ಬರುವ ಮೊದಲು ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಕಳೆದ ಎರಡ್ಮೂರು ವರ್ಷಗಳಿಂದ ಓಂಕಾರ್ ಸಾಲ್ವಿ ಹೆಸರು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇವರ ನಿಯಂತ್ರಣದಲ್ಲಿ ಮುಂಬೈ ತಂಡವು ರಣಜಿ ಟ್ರೋಫಿಯನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. 2023-24 ವರ್ಷದ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಅಲ್ಲದೇ ಈರಾನಿ ಕಪ್ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಸೈಡ್​ಲೈನ್​​.. ಕ್ರಿಕೆಟ್ ಜಗತ್ತಿಗೆ ನ್ಯೂ ಕಿಂಗ್ ಉದಯ..!

ಇನ್ನು ಸಾಲ್ವಿ ಅವರ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ List A ಪಂದ್ಯದಲ್ಲಿ ರೈಲ್ವೇಸ್ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. 36 ಬಾಲ್​ಗಳನ್ನು ಮಾಡಿರುವ ಅವರು 36 ರನ್​ ನೀಡಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶ ತಂಡದ ವಿರುದ್ಧ ಅವರು ಆಡಿರುವ ಪಂದ್ಯ ಇದಾಗಿದೆ. 2023ರಲ್ಲಿ ಅವರು ಮುಂಬೈ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಅದಕ್ಕೂ ಮೊದಲು ಮುಂಬೈ ತಂಡದ ಬೌಲಿಂಗ್ ಕೋಚ್ ಆಗಿದ್ದರು.

ಓಂಕಾರ್ ಅವರು ಈ ಮೊದಲ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಕೆಲಸ ಮಾಡಿದ ಅನುಭವ ಇದೆ. ವಿಶೇಷ ಅಂದರೆ ಅವರೊಬ್ಬ ಉತ್ತಮ ಟ್ರೈನರ್​. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದಾರೆ. 2023-24ರ ರಣಜಿ ಟ್ರೋಫಿಯಲ್ಲಿ ಅವರ ನೇತೃತ್ವದ ಮುಂಬೈ ತಂಡ ಒಳ್ಳೆಯ ಸಾಧನೆ ಮಾಡಿತ್ತು. ಆರ್‌ಸಿಬಿಗೆ ಅವರ ಆಗಮನದಿಂದ ಬೌಲರ್‌ಗಳಿಗೆ ಹೆಚ್ಚಿನ ಲಾಭವಾಗಲಿದೆ.

ಇದನ್ನೂ ಓದಿ:IPL ಮೆಗಾ ಹರಾಜಿನಲ್ಲಿ 13 ವರ್ಷದ ಪೋರ.. ತ್ರಿಶತಕ ವೀರನ ಕತೆ ನಿಜಕ್ಕೂ ರೋಚಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment