ಗಾಯಕ್ವಾಡ್ ಬದಲಿಗೆ CSK ಸೇರಿದ 17 ವರ್ಷದ ಹುಡುಗ.. ಧೋನಿ ನಂಬಿಕೆಯಿಟ್ಟ ಆಯುಷ್​ ಯಾರು..?

author-image
Ganesh
Updated On
ಗಾಯಕ್ವಾಡ್ ಬದಲಿಗೆ CSK ಸೇರಿದ 17 ವರ್ಷದ ಹುಡುಗ.. ಧೋನಿ ನಂಬಿಕೆಯಿಟ್ಟ ಆಯುಷ್​ ಯಾರು..?
Advertisment
  • ಋತುರಾಜ್ ಸ್ಥಾನಕ್ಕೆ 17 ವರ್ಷದ ಆಯುಷ್ ಮ್ಹಾತ್ರೆ..!
  • ಯುವ ಆಟಗಾರನಿಗೆ ಹೊಡೆಯಿತು ಜಾಕ್​ಪಾಟ್..!
  • ಹರಾಜಿನಲ್ಲಿ ಅನ್​ಸೋಲ್ಡ್​.. ಇಂಜುರಿಯಿಂದಾಗಿ ಲಕ್

17 ವರ್ಷದ ಯಂಗ್ ಮುಂಬೈಕರ್​ಗೆ ಅದೃಷ್ಟ ಖುಲಾಯಿಸಿದೆ. ಮೆಗಾ ಹರಾಜಿನಲ್ಲಿ ಚೆನ್ನೈ ಸೇರುವ ನಿರೀಕ್ಷೆಯಲ್ಲಿದ್ದ ಈತನಿಗೆ ಋತುರಾಜ್ ಇಂಜುರಿ ಅದೃಷ್ಟ ತಂದುಕೊಟ್ಟಿದೆ.

ಋತುರಾಜ್ ಗಾಯಕ್ವಾಡ್ ಇಂಜುರಿ ರಿಪ್ಲೇಸ್​ಮೆಂಟ್​ ಯಾರ್ ಆಗ್ತಾರೆ ಅನ್ನೋ ಪ್ರಶ್ನೆ ಬಹುವಾಗಿ ಕಾಡಿತ್ತು. ಮುಂಬೈಕರ್​, ಡ್ಯಾಶಿಂಗ್ ಓಪನರ್ ಪೃಥ್ವಿ ಶಾ ಹೆಸರು ಈ ವಿಚಾರದಲ್ಲಿ ಬಹುವಾಗಿ ಸೌಂಡ್ ಮಾಡಿತ್ತು. ಫೃಥ್ವಿ ಷಾ ಬದಲಿಗೆ ಮುಂಬೈ ತಂಡದ ಮತ್ತೋರ್ವ ಓಪನರ್ ಚೆನ್ನೈ ಕ್ಯಾಂಪ್ ಸೇರಿಕೊಳ್ತಿದ್ದಾರೆ. ಆತನ ಹೆಸರೇ ಆಯುಷ್​ ಮ್ಹಾತ್ರೆ.

ಋತುರಾಜ್​ಗೆ ಇಂಜುರಿ..

ಆಯುಷ್​ ಮ್ಹಾತ್ರೆ.. ಮುಂಬೈ ತಂಡದ ಓಪನರ್.. ಅಗ್ರೆಸ್ಸಿವ್ ಆಟ, ಮೆಚ್ಯುರ್ ಬ್ಯಾಟಿಂಗ್​​ನಿಂದಲೇ ಎಲ್ಲರ ಗಮನ ಸೆಳೆದಿರೋ ಆಟಗಾರ. 2024ರ ಕೂಚ್​​ ಬೆಹಾರ್ ಟ್ರೋಫಿಯಲ್ಲಿ ಸಖತ್​​ ಸದ್ದು ಮಾಡಿದ್ದ. ರಣಜಿ ಟ್ರೋಫಿ, ಅಂಡರ್​​-19 ಏಷ್ಯಾಕಪ್​ನಲ್ಲಿ ಮಿಂಚಿದ್ದ ಈತ, ಐಪಿಎಲ್​​ನ ಮೆಗಾ ಹರಾಜಿನ ಕಣದಲ್ಲಿ ಸೇಲ್ ಅಚ್ಚರಿಯ ಮೊತ್ತಕ್ಕೆ ಬಿಕರಿಯಾಗ್ತಾನೆ ಅನ್ನೋ ನಿರೀಕ್ಷೆ ಇತ್ತು. ಅದು ಸುಳ್ಳಾಗಿತ್ತು. ಇದೀಗ ಅದೃಷ್ಟ ಖುಲಾಯಿಸಿದೆ. 17 ವರ್ಷದ ಯುವ ಆಟಗಾರನ ಜೊತೆ ಸಿಎಸ್​​ಕೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: ಲವ್ವರ್​ ಜೊತೆ AC ಲಾಡ್ಜ್​ನಲ್ಲಿ​ದ್ದ.. ಸುದ್ದಗುಂಟೆ ಪಾಳ್ಯದ ಕಾಮುಕನ ಕ್ಲೂ ಕೊಟ್ಟಿದ್ದು ಒಂದು ಸಿಮ್!

publive-image

ಶೀಘ್ರದಲ್ಲೇ ತಂಡಕ್ಕೆ ಆಯುಷ್ ಮ್ಹಾತ್ರೆ

ಋತುರಾಜ್ ಗಾಯಕ್ವಾಡ್ ಬದಲಿಗೆ ಆಯುಷ್ ಮ್ಹಾತ್ರೆಯನ್ನು ಸೇರಿಕೊಳ್ಳಲು ಬಯಸಿದ್ದೇವೆ. ಆತನಿಗೆ ತಂಡ ಸೇರಿಕೊಳ್ಳಲು ಸೂಚಿಸಲಾಗಿದೆ. ಆತ ಏಪ್ರಿಲ್ 20ರ ಮುಂಬೈ ಇಂಡಿಯನ್ಸ್ ಪಂದ್ಯದ ಆಯ್ಕೆಗೆ ಲಭ್ಯರಿರುತ್ತಾರೆ-CSK ಮೂಲಗಳು.

ಕಳೆದ ವರ್ಷದ ಫಸ್ಟ್​ ಕ್ಲಾಸ್​ ಕ್ರಿಕೆಟ್​ಗೆ ಡೆಬ್ಯು..

ಅಕ್ಟೋಬರ್ 1ರಂದು ಇರಾನಿ ಕಪ್​​ನಲ್ಲಿ ಮುಂಬೈ ಪರ ಕಣಕ್ಕಿಳಿದ ಆಯುಷ್​​​​, ರೆಸ್ಟ್​ ಆಫ್ ಇಂಡಿಯಾ ಎದುರಿನ ಪಂದ್ಯದಲ್ಲಿ ಕ್ರಮವಾಗಿ 19, 14 ರನ್​ ಗಳಿಸಿದ್ರಷ್ಟೇ. ಹೀಗಾದ್ರೂ ಈತನ ಮೇಲೆ ಭರವಸೆ ಇಟ್ಟಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ರಣಜಿ ತಂಡಕ್ಕೂ ಆಯ್ಕೆ ಮಾಡ್ತು. ಬರೋಡ ಎದುರು ರಣಜಿಗೆ ಡೆಬ್ಯೂ ಮಾಡಿದ ಪಂದ್ಯದಲ್ಲೇ ಅರ್ಧಶತಕ ಗಳಿಸಿ ಗಮನ ಸೆಳೆದ ಆಯುಷ್​, ಟೂರ್ನಿಯುದಕ್ಕೂ ರನ್ ಗಳಿಸಿದ್ದರು. ಆ ನಂತರ ವಿಜಯ್ ಹಜಾರೆ ಟೂರ್ನಿಯಲ್ಲೂ ಆಯುಷ್ ಮ್ಹಾತ್ರೆ ಅಬ್ಬರ ಜೋರಾಗಿತ್ತು.

ದೇಶಿ ಕ್ರಿಕೆಟ್​ನಲ್ಲಿ ಆಯುಷ್​

ರಣಜಿ ಟ್ರೋಫಿಯಲ್ಲಿ ಆಡಿದ್ದ 8 ಪಂದ್ಯಗಳಲ್ಲಿ 16 ಇನ್ನಿಂಗ್ಸ್​ಗಳಿಂದ 471 ರನ್ ಗಳಿಸಿದ್ದ ಮ್ಹಾತ್ರೆ, 73.82ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ರು. 1 ಅರ್ಧಶತಕ, 2 ಶತಕ ಚಚ್ಚಿದ್ರು. ಏಕದಿನ ಮಾದರಿಯ ವಿಜಯ್ ಹಜಾರೆಯಲ್ಲೂ ರನ್​ ಭರಾಟೆ ನಡೆಸಿದ್ದ ಮ್ಹಾತ್ರೆ, 7 ಪಂದ್ಯಗಳಿಂದ 458 ರನ್ ಸಿಡಿಸಿದ್ದರು. 135.50ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಈತ, 1 ಅರ್ಧಶತಕ, 2 ಶತಕ ಸಿಡಿಸಿದ್ರು.

ಇದನ್ನೂ ಓದಿ: ಧೋನಿ ಮಾಡಿದ ಈ ರನೌಟ್ ಭಾರೀ ವೈರಲ್.. ವಿಂಟೇಜ್​ ಧೋನಿಯ ದರ್ಶನ ಹೇಗಿತ್ತು..? VIDEO

publive-image

ರಣಜಿ ಟೂರ್ನಿಯಲ್ಲಿ ಮುಖ್ಯವಾಗಿ ಆಯುಷ್​ ಮಹಾರಾಷ್ಟ್ರ ಎದುರು ಬರೋಬ್ಬರಿ 176 ರನ್ಗಳ ಇನ್ನಿಂಗ್ಸ್​​ ಕಟ್ಟಿದ್ರು. ಈ ಇನ್ನಿಂಗ್ಸ್​ ಈತನ ನಸೀಬು ಬದಲಿಸಿತ್ತು. 17 ವರ್ಷದ ಯುವ ಆಟಗಾರನ ಬ್ಯಾಟಿಂಗ್​ ಸ್ಕಿಲ್ಸ್​ಗೆ ಮಾರು ಹೋಗಿದ್ದ ದಿಗ್ಗಜ ಧೋನಿ, ಟ್ರಯಲ್ಸ್ ಕರೆಸುವಂತೆ ಸೂಚಿಸಿದ್ದರು. ಟ್ರಯಲ್ಸ್​ ಬಳಿಕ ಚೆನ್ನೈ ಮೆಗಾ ಹರಾಜಿನಲ್ಲಿ ಕೊಳ್ಳುವ ಮನಸ್ಸು ಮಾಡಲಿಲ್ಲ. ಆದ್ರೀಗ ಅದೇ ಯುವ ಆಟಗಾರನನ್ನ ಋತುರಾಜ್ ಬದಲಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.

ಅನುಭವಿ ಪೃಥ್ವಿ ಬದಲಿಗೆ ಆಯುಷ್ ಆಯ್ಕೆ ಸರಿನಾ?

ಋತುರಾಜ್ ಗಾಯಕ್ವಾಡ್ ಬದಲಿಯಾಗಿ ಆಯುಷ್ ಮ್ಹಾತ್ರೆ, ಚೆನ್ನೈ ಸೇರ್ತಾರೆ ಎಂಬ ಸುದ್ದಿ ಹೊರಬಿದ್ದಿದ್ದೆ ಬಿದ್ದಿದ್ದು, ಸತತ ಸೋಲಿನ ನಡುವೆ ಯುವ ಕ್ರಿಕೆಟಿಗನ ಆಯ್ಕೆ ಎಷ್ಟು ಸರಿ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೀತಿದೆ. ಪ್ರಸಕ್ತ ಸೀಸನ್​ನಲ್ಲಿ ಚೆನ್ನೈಗೆ ಪವರ್ ಪ್ಲೇನಲ್ಲಿ ಉತ್ತಮ ಆರಂಭವೇ ಸಿಕ್ಕಿಲ್ಲ. ಹೀಗಾಗಿ ಪೃಥ್ವಿ ಶಾ ರಿಪ್ಲೇಸ್​ಮೆಂಟ್ ಆಗಿ ತಂಡಕ್ಕೆ ಬಂದ್ರೆ ಬಲ ಹೆಚ್ಚುತ್ತೆ ಎಂಬ ಆಶಾಭಾವನೆ ಫ್ಯಾನ್ಸ್​ ವಲಯದಲ್ಲಿತ್ತು. ಅನುಭವಿ ಪೃಥ್ವಿ ಶಾ ಬದಲಿಗೆ ಅನಾನುಭವಿ ಆಯುಷ್​ ಮ್ಹಾತ್ರೆ ಚೆನ್ನೈ ಮಣೆ ಹಾಕಿದೆ. ದೇಶಿ ಕ್ರಿಕೆಟ್​ನಲ್ಲಿ ಪೃಥ್ವಿಯ ಕಳಪೆ ಆಟ ಹಾಗೂ ಫಿಟ್​ನೆಸ್ ರಿಜೆಕ್ಟ್​ ಆಗಲು ಕಾರಣ ಎನ್ನಲಾಗ್ತಿದೆ.

ಇದನ್ನೂ ಓದಿ: ಇನ್ಮೇಲೆ ಆರ್​ಸಿಬಿ ಲೆಕ್ಕಾನೇ ಬೇರೆ.. ಪ್ಲೇ ಆಫ್​ ಎಂಟ್ರಿ ಭವಿಷ್ಯ ಅಷ್ಟು ಸುಲಭ ಇಲ್ಲ..!

publive-image

ಅನ್​ಸೋಲ್ಡ್ ಆಗಿದ್ದ ಪೃಥ್ವಿ, ಋತುರಾಜ್​ ಇಂಜುರಿಯಿಂದಾಗಿ ಐಪಿಎಲ್​ಗೆ ಎಂಟ್ರಿ ನೀಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಅದ್ರೀಗ ಆ ಅವಕಾಶವೂ ಕೈತಪ್ಪಿದೆ. ಇದು ಸಹಜವಾಗೇ ಪೃಥ್ವಿ ಶಾ ಕರಿಯರ್​ಗೆ ದೊಡ್ಡ ಹಿನ್ನಡೆಯಾಗಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment