/newsfirstlive-kannada/media/post_attachments/wp-content/uploads/2025/01/MODEL_SADHU_1.jpg)
ಆಧ್ಯಾತ್ಮ ಲೋಕ ಏನ್ ಹೇಳುತ್ತೆ ಅಂದ್ರೆ ಎಲ್ಲವೂ ನನಗೆ ಬೇಕು ಅನ್ನೋದು ತಪ್ಪು. ನನಗೆ ಏನು ಬೇಡ ಅಂತಾ ಎಲ್ಲವನ್ನೂ ಬಿಟ್ಟು ಹೋಗುವುದು ತಪ್ಪು. ಇವಾಗ್ಯಾಕೆ ಈ ಮಾತು ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಮೊದಲು ಮಾಡೆಲ್ ಆಗಿದ್ದರು, ಆ ಮೇಲೆ ಭಕ್ತೆ ಆಗಿ ಆಧ್ಯಾತ್ಮ ಲೋಕಕ್ಕೆ ತನ್ನ ಸಮರ್ಪಣೆ ಹಾರ್ಸ್ ರೈಡಿಂಗ್, ಮೇಕಪ್, ಌಂಕರಿಂಗ್, ಟೂರ್, ವ್ಲಾಗ್ ಎಂದು ಸದಾ ಬ್ಯುಸಿ ಆಗಿರುತ್ತಿದ್ದ ಸುಂದರಿ, ಈ ಎಲ್ಲವನ್ನ ತ್ಯಜಿಸಿ ಗುರುವಿನ ಗುಲಾಮ ಆಗಿದ್ದಾರೆ.
ಪ್ರಯಾಗರಾಜ್‌ನಲ್ಲಿ ಶುರುವಾಗಿರೋ ಮಹಾಕುಂಭಮೇಳದ ಮೊದಲ ದಿನವೇ ಲಕ್ಷಾಂತರ ಭಕ್ತರು ಗಂಗಾಸ್ನಾನದಲ್ಲಿ ಮಿಂದೆದ್ದರು. ಗಂಗಾ ತೀರದಲ್ಲಿ ವಿವಿಧ ರೀತಿಯ ಋಷಿಗಳು, ಸಂತರು ಮತ್ತು ಮಹಾತ್ಮರು ಕಾಣಿಸಿಕೊಂಡರು. ಹೀಗೆ ಕಾಣಿಸಿಕೊಂಡ ಋಷಿಗಳ, ಸಂತರ ಜೀವನಶೈಲಿ ಹೇಗಿರುತ್ತೆ ಅನ್ನೋ ಬಗ್ಗೆ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಯುವ ಸಾಧ್ವಿಯೊಬ್ಬರ ವಿಡಿಯೋ ಸಖತ್ ವೈರಲ್ ಆಗಿದೆ.
ಇವರ ಮಾಡೆಲ್ ಹೆಸರು ಹರ್ಷ ರಿಚರಿಯಾ. ಯೂಟ್ಯೂಬರ್, ಌಂಕರ್ ಆಗಿರುವ ಇವರು ಉತ್ತರಾಖಂಡದ ನಿವಾಸಿ. ದೇವರ, ಆಧ್ಯಾತ್ಮ, ಸನಾತನ ಧರ್ಮದ ಮೇಲೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ಅಪಾರವಾದ ಭಕ್ತಿ, ತುಂಡು ಬಟ್ಟೆ ಧರಿಸಿ ರೀಲ್ಸ್ ಮಾಡಿ ಟ್ರೆಂಡ್ ಆಗುತ್ತಿದ್ದ ಬ್ಲೂ ಐಸ್ ಸುಂದರಿ. ಸದ್ಯ ಆಧ್ಯಾತ್ಮ ಜಗತ್ತಿನ ಕಡೆ ಮುಖ ಮಾಡಿದ್ದಾರೆ. ಹಲವಾರು ಕಡೆಗೆ ಪ್ರಯಾಣ ಮಾಡಿ ವಿಡಿಯೋಗಳನ್ನ ಮಾಡುತ್ತಿದ್ದ ಈಕೆ ಮಹಾಕುಂಭಮೇಳದಲ್ಲಿ ಸಾಧುಗಳ ಜೊತೆ ಪ್ರತ್ಯಕ್ಷವಾಗಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್ನೂ ಹರ್ಷ ರಿಚರಿಯಾ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆ ಅನೇಕ ರೀತಿಯ ಕಾಮೆಂಟ್ಗಳು ಬರಲಾರಂಭಿಸಿವೆ. ಕೇಸರಿ ಉಡುಪನ್ನ ತಮ್ಮ ಇನ್‌ಸ್ಟಾ ಫಾಲೋವರ್ಸ್ ಅನ್ನು ಹೆಚ್ಚಿಸುವ ತಂತ್ರವಾಗಿ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ಹರ್ಷ ರಿಚರಿಯಾ ಕುಂಭಮೇಳದಲ್ಲಿ ಭಾಗವಹಿಸಿದ ಅನುಭವನ್ನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವಿಶ್ವಕ್ಕೆ ಕಾಲಿಟ್ಟ ಹುಡಗರನ್ನ ಪ್ರೀತಿಸುವ AI ರೋಬೋ.. ಇದರ ಹೆಸರೇನು, ಬೆಲೆ ಎಷ್ಟು?
ನಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜೀ ಮಹಾರಾಜ್ ಶಿಷ್ಯೆ. ನಾನು ಆಯ್ಕೆ ಮಾಡಿದ ಮಾರ್ಗವು ತನಗೆ ನೆಮ್ಮದಿಯನ್ನ ತಂದಿದೆ. ನನಗೆ 30 ವರ್ಷ. 2 ವರ್ಷದಿಂದ ಮೋಕ್ಷವನ್ನ ಅನುಸರಿಸುತ್ತಿದ್ದೇನೆ.
ಹರ್ಷ ರಿಚರಿಯಾ, ಸಾಧ್ವಿ
ಹರ್ಷ ರಿಚರಿಯಾ ಮಾತುಗಳನ್ನ ಕೇಳಿ ಅದೆಷ್ಟೊ ಪ್ಯಾನ್ಸ್ ಮನಸ್ಸು ಒಡೆದೋಗಿದೆ. ಕೆಲವರು ಅವರ ನಂಬಿಕೆ ಅವರದ್ದು ಅಂತ ಹೊಗಳಿದ್ದಾರೆ. ಆದರೆ ಇತರರು ಅವರ ಉದ್ದೇಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅದೇನೆ ಇರಲಿ ಬದಲಾವಣೆ ಅವರವರ ವೈಯಕ್ತಿಕ ನಿರ್ಧಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ