/newsfirstlive-kannada/media/post_attachments/wp-content/uploads/2025/05/RCB-14.jpg)
ಸುದೀರ್ಘ 18 ವರ್ಷಗಳ ಕಪ್ ಕೊರಗು ನೀಗೋಕೆ ಒಂದೇ ಒಂದು ಹೆಜ್ಜೆ ಬಾಕಿ ಉಳಿದಿದೆ. ಅಹ್ಮದಾಬಾದ್ನ ನಮೋ ಅಂಗಳದಲ್ಲಿ ನಡೆಯೋ ಫೈನಲ್ ಫೈಟ್ನಲ್ಲಿ ಆರ್ಸಿಬಿ ದಿಟ್ಟ ಇಜ್ಜೆ ಇಟ್ರೆ ಅಸಂಖ್ಯ ಅಭಿಮಾನಿಗಳ ಕನಸು ನನಸಾಗಲಿದೆ. ಈ ಹಿಂದಿನ 18 ಸೀಸನ್ಗಳಲ್ಲಿದ್ದ ಆರ್ಸಿಬಿಗೂ ಈ ಸೀಸನ್ನ ಆರ್ಸಿಬಿಗೂ ಹೆಚ್ಚು ಡಿಫರೆನ್ಸ್ ಇದೆ. ಅಂದ್ಹಾಗೆ, ಈ ಡಿಫರೆಂಟ್ ಆರ್ಸಿಬಿಯ ಜರ್ನಿ ಶುರುವಾಗಿದ್ದು ಸೀಸನ್ ಆರಂಭವಾದ ಮೇಲಲ್ಲ, ಈ ಹಿಂದಿನ ಸೀಸನ್ 17 ಅಂತ್ಯವಾದ ಬಳಿಕ.
ಕಳೆದ ಸೀಸನ್ನಲ್ಲಿ ಆರ್ಸಿಬಿ ಪ್ಲೇ ಆಫ್ ಹಂತದಲ್ಲಿ ಎಡವಿತ್ತು. ಆ ಸೋಲಿನ ಬೆನ್ನಲ್ಲೇ ಶುರುವಾಗಿದ್ದು ಹೊಸ ಆರ್ಸಿಬಿ ಕಟ್ಟೋ ಕೆಲಸ. ಕೋಚಿಂಗ್ ಸ್ಟಾಫ್ಗೆ ಭಾರತದವರ ಅಗತ್ಯತೆ ಇದೆ ಅನ್ನೋದು ಮ್ಯಾನೇಜ್ಮೆಂಟ್ ಅರ್ಥವಾಗಿತ್ತು. ಇದರ ಭಾಗವಾಗಿ ಫಿನಿಶರ್ ದಿನೇಶ್ ಕಾರ್ತಿಕ್ ಹೊಸ ಅವತಾರದಲ್ಲಿ ಆರ್ಸಿಬಿಗೆ ಎಂಟ್ರಿ ಕೊಟ್ಟರು. RCBಯಲ್ಲಿ ಬದಲಾವಣೆ ಅನ್ನೋದು ಇಲ್ಲಿಂದ ಶುರುವಾಯ್ತು ನೋಡಿ.
ನಾವು ನಮ್ಮ ಕೋಚಿಂಗ್ ವಿಭಾಗಕ್ಕೆ ಭಾರತೀಯರನ್ನ ಸೇರಿಸಿಕೊಳ್ಳಲು ಬಯಸಿದ್ವಿ. ನಾನು ಮತ್ತು ಆ್ಯಂಡಿ ಫ್ಲವರ್ ಈ ಬಗ್ಗೆ ಚಿಂತಿಸಿದ್ವಿ. ದಿನೇಶ್ ಕಾರ್ತಿಕ್ ವಿಚಾರದಲ್ಲಂತೂ ತಂಡಕ್ಕೆ ಸೇರಿಸಿಕೊಳ್ಳಲೇಬೇಕೆಂದು ತಿರ್ಮಾನಿಸಲಾಗಿತ್ತು. ನಿವೃತ್ತಿ ಬಗ್ಗೆ ಕಾರ್ತಿಕ್ ಯೋಚಿಸುತ್ತಿರುವಾಗ ಕೋಚ್ ಸ್ಥಾನಕ್ಕೆ ಅರ್ಹ ಎಂದು ಭಾವಿಸಿದ್ದೆ. ಸೀಸನ್ ಅಂತ್ಯವಾದ ಬಳಿಕ ಮೊ ಬೊಬಾಟ್ ನನ್ನನ್ನ ಸಂಪರ್ಕಿಸಿದ್ರು. ಆ್ಯಂಡಿ ಫ್ಲವರ್ ಜೊತೆ ಉತ್ತಮ ಸಂಬಂಧವಿತ್ತು. ಮುಖ್ಯವಾಗಿ ವಿರಾಟ್ ಕೊಹ್ಲಿ ನನ್ನನ್ನ ಮೆಂಟರ್ ಆಗಿ ನೋಡಲು ಬಯಸಿದರು.
ಈಗಿರೋ ಆರ್ಸಿಬಿಗೂ ಇರೋ ವ್ಯತ್ಯಾಸ ಏನು?
ಫಿನಿಶರ್ ಡಿಕೆ, ಮೇಷ್ಟು ಡಿಕೆಯಾಗಿ ಆರ್ಸಿಬಿ ಸೇರಿದ ಬಳಿಕ ನ್ಯೂ ಟೀಮ್ ಕಟ್ಟೋ ಪ್ರಯತ್ನ ಶುರುವಾಯಿತು. ಆರ್ಸಿಬಿ ಇಷ್ಟು ವರ್ಷ ಎಲ್ಲೆಲ್ಲಿ ಎಡವಿದೆ.? ಇದಕ್ಕೆ ಕಾರಣ ಏನು.? ಯಾವ ವಿಭಾಗದಲ್ಲಿ ಸ್ಟ್ರೆಂಥ್ ಆಗಬೇಕು ಅನ್ನೋದನ್ನ ಆಕ್ಷನ್ಗೂ ಮುನ್ನವೇ ಥಿಂಕ್ ಟ್ಯಾಂಕ್ಸ್ ಸರಣಿ ಮೀಟಿಂಗ್ ಮಾಡಿ ಚರ್ಚಿಸಿದರು.
ಮೆಗಾ ಆಕ್ಷನ್ಗೂ ಮುನ್ನ ಎಲ್ಲಾ ಲೆಕ್ಕಾಚಾರ ಹಾಕಿಕೊಂಡು ಪರ್ಫೆಕ್ಟ್ ಪ್ಲಾನಿಂಗ್ನೊಂದಿಗೆ ಆರ್ಸಿಬಿ ಮ್ಯಾನೇಜ್ಮೆಂಟ್ ಅಖಾಡಕ್ಕಿಳಿಯಿತು. ಅಂದುಕೊಂಡಂತೆ ಪರ್ಫೆಕ್ಟ್ ತಂಡವನ್ನೂ ಕಟ್ಟಿತು. ಈ ಹಿಂದಿದ್ದ ಆರ್ಸಿಬಿಗೂ ಈಗಿರೋ ಆರ್ಸಿಬಿಗೂ ಇರೋ ಡಿಫರೆನ್ಸೇ ಇದು.
ಈಗಿರುವ RCBಗೂ ಹಿಂದಿದ್ದ RCBಗೂ ವ್ಯತ್ಯಾಸವಿದೆ. ಆಡೋ 12 ಆಟಗಾರರಲ್ಲಿರೋ ಅನುಭವ. ಬ್ಯಾಟಿಂಗ್ನಲ್ಲಿ ಸ್ಟ್ರೆಂಥ್ ಹಾಗೂ ಡೆಪ್ತ್. ಬಹು ಮುಖ್ಯವಾಗಿ ಬೌಲಿಂಗ್ನಲ್ಲಿ ಕ್ವಾಲಿಟಿ. ಈ ಮೂರು ಮುಖ್ಯವಾಗಿತ್ತು. ಜೊತೆ ಹಲವು ಲೀಡರ್ಸ್, ಒಂದು ಅಥವಾ ಎರಡಲ್ಲ ಹಲವು ಲೀಡರ್ಸ್ ತಂಡದಲ್ಲಿದ್ದಾರೆ.
ಸಕ್ಸಸ್ಫುಲ್ ಆಗಿ ಆಕ್ಷನ್ ಮುಗಿಸಿದ್ದ ಆರ್ಸಿಬಿ ಮುಂದಿದ್ದ ನೆಕ್ಸ್ಟ್ ಬಿಗ್ ಟಾಸ್ಕ್ ಸಾರಥಿಯ ಆಯ್ಕೆ. ಈ ವಿಚಾರದಲ್ಲೂ ಆರ್ಸಿಬಿ ಮ್ಯಾನೇಜ್ಮೆಂಟ್ ಸರಿಯಾದ ಹೆಜ್ಜೆ ಇಡ್ತು.
ರಜತ್ ಪಟಿದಾರ್ ನನ್ನ ಜೀವನದಲ್ಲಿ ಕಣ್ತೆರೆಸಿದ. ಯಾಕಂದ್ರೆ ಜನರಿಗೆ ದಿಢೀರ್ ಎಂದು ಅಧಿಕಾರ ಅನ್ನೋದು ಸಿಕ್ರೆ ಬದಲಾಗ್ತಾರೆ. ನಡತೆ, ಮಾತುಕತೆ ಒಂದಲ್ಲ ಒಂದು ರೀತಿಯಲ್ಲಿ ಬದಲಾಗುತ್ತೆ. ಆದ್ರೆ, ರಜತ್ ಪಟಿದಾರ್ ವಿಚಾರದಲ್ಲಿ ಹಾಗಾಗಲಿಲ್ಲ. ಆರ್ಸಿಬಿ ತಂಡದ ನಾಯಕನಾದ ಬಳಿಕವೂ ರಜತ್ ಮುಂಚೆ ಹೇಗಿದ್ರೋ ಹಾಗೇ ಇದ್ದಾರೆ.
ದಿನೇಶ್ ಕಾರ್ತಿಕ್, ಆರ್ಸಿಬಿ ಮೆಂಟರ್
ಈ ಸೀಸನ್ಗೂ ಮುನ್ನ ನಡೆದ ಮೆಗಾ ಅಕ್ಷನ್ ಟೇಬಲ್ನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಸಕ್ಸಸ್ ಕಂಡಿರೋದಕ್ಕೆ ಆನ್ಫೀಲ್ಡ್ನ ಪರ್ಫಾಮೆನ್ಸ್ ಬೆಸ್ಟ್ ಎಕ್ಸಾಂಪಲ್. ಇಷ್ಟು ಸೀಸನ್ ಒಬ್ಬರು ಇಬ್ಬರು ಆಟಗಾರರ ಮೇಲೆ ಮಾತ್ರ ಆರ್ಸಿಬಿ ಡಿಪೆಂಡ್ ಆಗಿರ್ತಾ ಇತ್ತು. ಆದ್ರೆ, ಈ ಬಾರಿ ಎಲ್ಲರೂ ಮ್ಯಾಚ್ವಿನ್ನರ್ಸೇ.
ಈ ಸೀಸನ್ನಲ್ಲಿ ಹಲವು ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಇದೊಂದು ಒಳ್ಳೆ ಪ್ರತಿಬಿಂಬ. ಜೊತೆಗೆ 7,8 ಅಥವಾ 9 ಜನ ಅರ್ಧಶತಕ ಸಿಡಿಸಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಹಲವರು ತಂಡಕ್ಕೆ ಕೊಡುಗೆ ನೀಡ್ತಿದ್ದಾರೆ. ಇದು ನಾವು ಬಯಸಿದ್ವಿ.
ಇದನ್ನೂ ಓದಿ:ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ದಿಢೀರ್ ನಿವೃತ್ತಿ.. ಕಾರಣವೇನು?
ಸೀನಿಯರ್ಸ್-ಜೂನಿಯರ್ಸ್ ನಡುವೆ ಡಿವೈಡ್ ಇಲ್ಲ
ಆರ್ಸಿಬಿ ಸಂಘಟಿತ ಹೋರಾಟ ನಡೆಸ್ತಿರೋದ್ರ ಹಿಂದಿರೋ ಮತ್ತೊಂದು ಕಾರಣ ಏನು ಗೊತ್ತಾ.? ಆಫ್ ದ ಫೀಲ್ಡ್ನ ವಾತಾವರಣ. ಆಟಗಾರರ ನಡುವಿನ ಭಾಂದವ್ಯ.!
ಆಫ್ ದ ಫೀಲ್ಡ್ನಲ್ಲೂ ನಮ್ಮ ತಂಡ ಅದ್ಭುತವಾಗಿದೆ. ಇಡೀ ತಂಡ ಜೆಲ್ ಆಗಿದೆ. ನಾನು ಈ ಹಿಂದೆ ಹಲವು ತಂಡಗಳ ಭಾಗವಾಗಿದ್ದೆ. ಅಲ್ಲಿ ಬ್ಯಾಟರ್ಸ್, ಬೌಲರ್ಸ್ ಅಥವಾ ವಿದೇಶಿ ಆಟಗಾರರು, ಭಾರತೀಯ ಆಟಗಾರರು, ಸೀನಿಯರ್ಸ್-ಜೂನಿಯರ್ಸ್ ನಡುವೆ ಸಣ್ಣದಾದ ಡಿವೈಡ್ ಇರುತ್ತಿತ್ತು. ಆದ್ರೆ, ಈ ತಂಡ ಮಿಕ್ಸ್ ಆಯ್ತು. ಇದು ತಂಡ ಕ್ಯಾರೆಕ್ಟರ್ ಅನ್ನ ಹೇಳ್ತಿದೆ.
ಬ್ಯಾಕ್ ಎಂಡ್ನಲ್ಲಿ ಮಾಡಿದ ಸರಿಯಾದ ಪ್ಲಾನ್ಗಳು, ಲೆಕ್ಕಾಚಾರದ ನಿರ್ಧಾರಗಳು ಈ ಬಾರಿ ಆರ್ಸಿಬಿಯ ಸಕ್ಸಸ್ ಹಿಂದೆ ಪ್ರಮುಖ ಪಾತ್ರವನ್ನ ನಿರ್ವಹಿಸಿವೆ. ಇದಕ್ಕೆ ಶ್ರಮ ವಹಿಸಿದ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸಪೋರ್ಟ್ ಸ್ಟಾಫ್ಗೆ ಸಲಾಂ ಹೇಳಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ