ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರ ಸದಸ್ಯ ಅರೆಸ್ಟ್! ಯಾರಿದು ದೀಪರಾಜ್ ಚಂದ್ರನ್?

author-image
Gopal Kulkarni
Updated On
ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರ ಸದಸ್ಯ ಅರೆಸ್ಟ್! ಯಾರಿದು ದೀಪರಾಜ್ ಚಂದ್ರನ್?
Advertisment
  • ಬೆಂಗಳೂರಿನಲ್ಲಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿದ್ದವನ ಬಂಧನ
  • ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿ ವಿನಿಮಯ ಮಾಡುತ್ತಿದ್ದ ಸಂಶಯ
  • ಕಾನ್ಪುರದಲ್ಲಿಯೂ ಕೂಡ ಎಟಿಎಸ್​​ನಿಂದ ಮತ್ತೊಬ್ಬ ಗೂಢಚಾರನ ಬಂಧನ

ಕೇಂದ್ರ, ರಾಜ್ಯ ಹಾಗೂ ಗುಪ್ತಚರ ದಳ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಭಾರತ್​ ಎಲೆಕ್ರ್ಟಾನಿಕ್ಸ್​ ಲಿಮಿಟೆಡ್​​ನಲ್ಲಿ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನದ ಪರವಾಗಿ ಗೂಡಚಾರಿಕೆ ಮಾಡುತ್ತಿದ್ದ ಎಂಬ ಆರೋಪದಲ್ಲಿ ದೀಪರಾಜ್ ಚಂದ್ರನ್​ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈಗ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನ ಪಾಕಿಸ್ತಾನಕ್ಕೆ ಬಿಟ್​ ಕಾಯಿನ್ ವಿನಿಮಯದೊಂದಿಗೆ ರವಾನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. 36 ವರ್ಷದ ಆರೋಪಿ ದೀಪರಾಜ್ ಚಂದ್ರನ್ ಉತ್ತರಪ್ರದೇಶದ ಘಾಜಿಯಾಬಾದ್​ನವನು ಎಂದು ತಿಳಿದು ಬಂದಿದೆ. ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ನ ಪಿಡಿಸಿಐನಲ್ಲಿ ಹಿರಿಯ ಇಂಜನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಸೇನೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಾದ ಪ್ರೊಡಕ್ಷನ್ ಸಿಸ್ಟಮ್​, ಆಫೀಸ್​ ಲೇಔಟ್ಸ್​ ಮತ್ತು ಹಿರಿಯ ಸಿಬ್ಬಂದಿಗಳ ಬಗ್ಗೆ ಪಾಕಿಸ್ತಾನದ ಎಜೆಂಟ್​ರಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ:ಸುಡುವ ಬಿಸಿಲಿನಲ್ಲಿ ಮೈ ಮರೆಯದಿರಿ.. ಚಿಕ್ಕಮಗಳೂರಿನಲ್ಲಿ ಏನಾಯ್ತು ನೋಡಿ..

ಈ ಒಂದು ಮಾಹಿತಿ ವಿನಿಮಯಕ್ಕಾಗಿ ಈತ ಇ-ಮೇಲ್ ವಾಟ್ಸಾಪ್ ಮತ್ತು ಟೆಲಿಗ್ರಾಮ್​ನಂತಹ ಆ್ಯಪ್​ಗಳನ್ನು ಮಾಹಿತಿ ವಿನಿಯಮಕ್ಕಾಗಿ ಬಳಸುತ್ತಿದ್ದ ಎಂದು ಹೇಳಲಾಗಿದೆ. ಈ ಮೂಲಕವೇ ಪಾಕಿಸ್ತಾನದ ಎಜೆನ್ಸಿಗಳಿಗೆ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದನಂತೆ. ತನಿಖೆ ಮಾಡುತ್ತಿರುವ ಅಧಿಕಾರಿಗಳು ಹಲವು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಆತ ಅತ್ಯಂತ ರಹಸ್ಯವಅಗಿ ಇ-ಮೇಲ್​​ ಖಾತೆಯೊಂದಿಗೆ ಸಂವಹನ ನಡೆಸುತ್ತಿದ್ದನಂತೆ ಸಾಕ್ಷಿಗಳು ಸರಳವಾಗಿ ಸಿಗದ ರೀತಿಯಲ್ಲಿ ತನ್ನ ಇ-ಮೇಲ್ ಅಕೌಂಟ್​ನ್ನು ವರ್ಗಿಕೃತ ಮಾಹಿತಿ ಹಂಚಿಕೆಯಾಗುವ ರೀತಿಯಲ್ಲಿ ವಿನ್ಯಾಸ ಮಾಡಿದ್ದನಂತೆ. ಅಂದ್ರೆ ನೇರವಾಗಿ ಇ-ಮೇಲ್​ ಕಳಹಿಸದೆ, ಲಾಗಿನ್ ಕ್ರೆಡಿನ್ಷಿಯಲ್​ ಮೂಲಕ ಚಂದ್ರನ್​ ಪಾಕಿಸ್ತಾನಕ್ಕೆ ಇ-ಮೇಲ್ ಮೂಲಕ ಮಾಹಿತಿಗಳನ್ನು ಕಳುಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆ ಕಳುಹಿಸಿದ ಇ-ಮೇಲ್​ಗಳ ಡಾಟಾ ಡ್ರಾಫ್ಟ್​​ನಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಪಾಕಿಸ್ತಾನದ ಗೂಢಚಾರಿ ಅರೆಸ್ಟ್.. ಈತ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯ ಉದ್ಯೋಗಿ..!

ಅಧಿಕಾರಿಗಳು ವ್ಯಕ್ತಪಡಿಸಿದ ಸಂಶಯದ ಪ್ರಕಾರ ಚಂದ್ರನ್ ಪ್ರಮುಖವಾಗಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು, ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಿ ಎಂಜೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದನಂತೆ.

ಭಾರತೀಯ ಗುಪ್ತಚರ ಇಲಾಖೆ ಸದ್ಯ ಚಂದ್ರನ್​ನ ಡಿಜಿಟಲ್ ಟ್ರಾಂಜಕ್ಷನ್ ಹಾಗೂ ಪಾಕ್ ಎಜೆನ್ಸಿಯೊಂದಿಗೆ ಮಾಹಿತಿ ಹಂಚಿಕೆಗಾಗಿ ಬಳಸಿದ ಆ್ಯಪ್​​ಗಳ ಪರಿಶೀಲನೆಗೆ ಇಳಿದಿದೆ. ಅದು ಮಾತ್ರವಲ್ಲ ಚಂದ್ರನ್​ನ ಜೊತೆ ಇನ್ನು ಯಾರೆಲ್ಲಾ ಆ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದನ್ನು ಕೂಡ ವಿಚಾರಣೆ ಮಾಡುತ್ತಿದ್ದಾರೆ.

publive-image

ಕಾನ್ಪುರ್​ನಲ್ಲಿ ಎಟಿಎಸ್​ನಿಂದ ಮತ್ತೊಬ್ಬ ಗೂಢಚಾರಿಯ ಬಂಧನ
ಇನ್ನು ಕಾನ್ಪುರದಲ್ಲಿಯೂ ಸಹ ಇದೇ ಮಾದರಿಯ ಒಂದು ಘಟನೆ ನಡೆದಿದೆ. ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಕುಮಾರ್ ವಿಕಾಸ್ ಎಂಬ ಆರೋಪಿಯನ್ನು ಬಂಧಿಸಿದ್ದು. ಈತ ಕೂಡ ಭಾರತೀಯ ಗುಪ್ರಚರ ದಳದ ಸೂಕ್ಷ್ಮ ವಿಚಾರಗಳನ್ನು ಪಾಕಿಸ್ತಾನದ ಎಜೆಂಟರಿಗೆ ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಾನ್ಪುರದ ಕಾರ್ಖಾನೆಯೊಂದರಲ್ಲಿ ಸಿನೀಯರ್ ಮ್ಯಾನೇಜರ್ ಆಗಿ ಈತ ಕಾರ್ಯನಿನರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment