/newsfirstlive-kannada/media/post_attachments/wp-content/uploads/2024/12/BBK1123.jpg)
ಕನ್ನಡದ ಅತಿ ದೊಡ್ಡ ಶೋ ಬಿಗ್ಬಾಸ್ ಸೀಸನ್ ಶುರುವಾಗಿ ಇಂದಿಗೆ 92 ದಿನಗಳು ಕಳೆದಿವೆ. ಒಟ್ಟು 17 ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಒಬ್ಬೊಬ್ಬರಾಗಿ ಬಿಗ್ಬಾಸ್ ಮನೆಯಿಂದ ಆಚೆ ಹೋದರು. ಸದ್ಯ 10 ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:ಬ್ರೇಕ್ ಅಪ್ ಸಾಂಗ್ ಬರೆದ್ರಾ ಚಂದನ್ ಶೆಟ್ಟಿ.. ಹೊಸ ಹಿಟ್ ಜೋಡಿ! ಯಾರು ಈ ಚಂದ್ರ ಚಕೋರಿ?
ಭವ್ಯಾ ಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್, ಧನರಾಜ್, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಈ 10 ಜನರಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ವಾರ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಧನರಾಜ್ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದರು. ಜೊತೆಗೆ ಕ್ಯಾಪ್ಟನ್ ಭವ್ಯಾ ಗೌಡಯಿಂದ ಐಶ್ವರ್ಯಾ ಸಿಂಧೋಗಿ ನೇರ ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಧನರಾಜ್ ಆಚಾರ್ಯ ಹಾಗೂ ಹನುಮಂತ ಸೇಫ್ ಆಗಿದ್ದಾರೆ.
ಆದರೆ, ಈ ಇಬ್ಬರನ್ನು ಬಿಟ್ಟು ನಾಮಿನೇಷನ್ ಸೀಟ್ನಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ ಪೈ, ತ್ರಿವಿಕ್ರಮ್, ಉಗ್ರಂ ಮಂಜು ಹಾಗೂ ಐಶ್ವರ್ಯಾ ಉಳಿದುಕೊಂಡಿದ್ದಾರೆ. ಈ ಆರು ಜನರಲ್ಲಿ ಭಾನುವಾರದ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ. ಆದ್ರೆ ಯಾವ ಸ್ಪರ್ಧಿ ಆಚೆ ಹೋಗಬಹುದು ಅಂತ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಇದಕ್ಕೆಲ್ಲಾ ಭಾನುವಾರದ ಎಪಿಸೋಡ್ನ ಕೊನೆಯಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ