/newsfirstlive-kannada/media/post_attachments/wp-content/uploads/2024/10/han_kang.jpg)
ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಾಗಿ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ದಕ್ಷಿಣ ಕೊರಿಯಾದ ಪ್ರಸಿದ್ಧ ಲೇಖಕಿ ಹಾನ್ ಕಾಂಗ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಸಾಹಿತ್ಯ ಕುಟುಂಬದಿಂದಲೇ ಬೆಳೆದು ಬಂದಿರುವ ಹಾನ್ ಕಾಂಗ್ ಅವರು ಪ್ರಶಸ್ತಿ ಒಲಿದು ಬಂದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ನೋಡಿಕೊಂಡು ಕುಳಿತ ಸ್ಟೇಷನ್ ಮಾಸ್ಟರ್.. ಆಟೋಗೆ ರೈಲು ಡಿಕ್ಕಿ; ತಂದೆ, ಮಕ್ಕಳು ಗಂಭೀರ
ಕಾವ್ಯ ರಚನೆ, ಕಥೆ, ಕಾದಂಬರಿಗಳ ಬರಹದಲ್ಲಿ ಸದಾ ಚಟುವಟಿಕೆಯಿಂದ ಇರುವ 53 ವರ್ಷದ ಲೇಖಕಿ ಹಾನ್ ಕಾಂಗ್ ಅವರಿಗೆ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ರಾಯಲ್ ಸ್ವಿಡಿಷ್ ಅಕಾಡೆಮಿ ತಿಳಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಏಷ್ಯಾದ ಹಾಗೂ ದಕ್ಷಿಣ ಕೊರಿಯಾದ ಮೊಟ್ಟ ಮೊದಲ ಮಹಿಳೆ ಹಾನ್ ಕಾಂಗ್ ಆಗಿದ್ದಾರೆ.
ಬರಹಗಾರ್ತಿ ಹಾನ್ ಕಾಂಗ್ ಅವರು 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜು ಎಂಬಲ್ಲಿ ಜನಿಸಿದರು. ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು. ಇವರ ತಂದೆ ಕೂಡ ಪ್ರಸಿದ್ಧ ಕಾದಂಬರಿಕಾರ ಆಗಿದ್ದರು. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಲು ಹಾನ್ ಕಾಂಗ್ಗೆ ಸುಲಭವಾಯಿತು. ಪ್ರಸ್ತುತ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಇವರು ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ಸ್ ಬೆಳವಣಿಗೆ ಹಿಂದೆ ರತನ್ ಟಾಟಾ ಮಹತ್ವದ ಪಾತ್ರ.. ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆ!
ಇನ್ನು 2016ರಲ್ಲಿ ಹಾನ್ ಕಾಂಗ್ ಅವರ ಪ್ರಸಿದ್ಧ ಕಾದಂಬರಿ ದಿ ವೆಜಿಟೇರಿಯನ್ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದುಕೊಂಡಿತ್ತು. ಇದನ್ನು ಕೊರಿಯಾದಲ್ಲಿ 2007ರಂದು ಪಬ್ಲಿಷ್ ಮಾಡಿದ್ದರು. 1995 ರಲ್ಲಿ ಒಂದು ಸಣ್ಣ ಕಥಾ ಸಂಕಲನದೊಂದಿಗೆ ಲೇಖಕಿ ವೃತ್ತಿ ಆರಂಭಿಸಿದರು. ಇದರ ಜೊತೆಗೆ ಹೆಚ್ಚುವರಿಯಾಗಿ, ಹಾನ್ ಕಾಂಗ್ ಕಲೆ ಮತ್ತು ಸಂಗೀತಕ್ಕೆ ಹೆಚ್ಚಿನ ಸಮಯ ಕೊಡುತ್ತಾರೆ ಎಂದು ಹೇಳಲಾಗುತ್ತದೆ. ಸದ್ಯ ಈ ಎಲ್ಲ ಶ್ರಮದಿಂದ ಲೇಖಕಿಗೆ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು
- ರವೀಂದ್ರನಾಥ್ ಠಾಗೂರ್- 1913 (ಭಾರತ)
- ಓಲ್ಗಾ ಟೋಕರ್ಝುಕ್- 2018
- ಪೀಟರ್ ಹಂಡ್ಕೆ- 2019
- ಲೂಯಿಸ್ ಗ್ಲುಕ್- 2020
- ಅಬ್ದುಲ್ ರಜಾಕ್ ಗುರ್ನಾ- 2021
- ಅನ್ನಿ ಎರ್ನಾಕ್ಸ್- 2022
- ಜಾನ್ ಫೋಸ್ಸೆ- 2023
- ಹಾನ್ ಕಾಂಗ್- 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ