/newsfirstlive-kannada/media/post_attachments/wp-content/uploads/2024/11/HANA-RAWHITI-1.jpg)
ನ್ಯೂಜಿಲೆಂಡ್ ಸರ್ಕಾರದ ವಿವಾದಾತ್ಮಕ ಮಸೂದೆಯ ಪ್ರತಿಯನ್ನು ಹರಿದು ಹಾಕಿ ಮೌರಿ ಹಾಕಾದ ಸಾಂಪ್ರದಾಯಿಕ ಡಾನ್ಸ್ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ. ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಹನಾ ರವೈಟಿ. 1853 ಬಳಿಕ ನ್ಯೂಜಿಲೆಂಡ್ ಕಂಡ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎಂದು ಹನಾ ರವೈಟಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಇವರು ಇದೇ ರೀತಿ ಸಂಸತ್ನಲ್ಲಿ ಡಾನ್ಸ್ ಮಾಡಿದ್ದರು ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆದರೆ ಇತ್ತೀಚೆಗೆ ಅವರ ಮಾಡಿದ ಹಾಕಾ ನೃತ್ಯಕ್ಕೆ ಕೆಲವು ವಿರೋಧ ಪಕ್ಷದ ನಾಯಕರು ಕೂಡ ಸೇರಿಕೊಂಡಿದ್ದರು. ಸದ್ಯ ನ್ಯೂಜಿಲೆಂಡ್ ರಾಜಕೀಯ ಅಂಗಳದಲ್ಲಿ ಆಗಾಗ ಸಂಚಲನ ಸೃಷ್ಟಿಸುತ್ತಿರುತ್ತಾರೆ ಹನಾ ರವೈಟಿ ಮೈಪಿ ಕ್ಲರ್ಕ್.ಸದ್ಯ ಮಸೂದೆಯ ಪ್ರತಿ ಹರಿದು ಮೌರಿ ಹಾಕಾ ನೃತ್ಯ ಮಾಡಿದ್ದಕ್ಕಾಗಿ ಅವರನ್ನು ಒಂದು ದಿನದ ಕಾಲ ಸಸ್ಪೆಂಡ್ ಮಾಡಲಾಗಿದೆ.
ಸ್ಥಳೀಯ ಒಪ್ಪಂದ ಮಸೂದೆಯ ಅಂಗೀಕಾರಕ್ಕಾಗಿ ನ್ಯೂಜಿಲೆಂಡ್ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ ಹನಾ ರವೈಟಿ ಈ ರೀತಿಯಾಗಿ ನಡೆದುಕೊಂಡರು. ಪದೇ ಪದೇ ಸುದ್ದಿಯಾಗುತ್ತಿರುವ ಈ ಹನಾ ರವೈಟಿ ಯಾರು. ಅವರ ರಾಜಕೀಯ ಹಿನ್ನೆಲೆ ಏನು ಎಂಬುದನ್ನು ನೋಡುವುದಾದ್ರೆ.
ಇದನ್ನೂ ಓದಿ:ಮತ್ತೆ ವೈರಲ್ ಆದ ನ್ಯೂಜಿಲೆಂಡ್ನ ಯುವ ಸಂಸದೆ ಹನಾ; ಮಸೂದೆಯ ಪ್ರತಿ ಹರಿದು ಡಾನ್ಸ್ ಮಾಡಿದ್ದು ಯಾಕೆ?
ಹನಾ ರವೈಟಿ ತಮ್ಮನ್ನು ತಾವು ಮೌರಿ ಭಾಷೆಯ ರಕ್ಷಕಿ ಹಾಗೂ ನ್ಯೂಜಿಲೆಂಡ್ ಯುವ ಜನತೆಯ ಧ್ವನಿ ಎಂದೇ ಕರೆದುಕೊಳ್ಳುತ್ತಾರೆ. ನ್ಯೂಜಿಲೆಂಡ್ನಲ್ಲಿ 200 ವರ್ಷಗಳ ಬಳಿಕ ಅತ್ಯಂತ ಕಿರಿಯ ಸಂಸದೆಯಾಗಿ ಆಯ್ಕೆಯಾದ ಯುವತಿ ಅಂದ್ರೆ ಅದು ಹನಾ ರವೈಟಿ. 22 ವರ್ಷದ ಹನಾ ರವೈಟಿ 2023ರಲ್ಲಿ ಚುನಾವಣೆ ಗೆದ್ದು ಸಂಸತ್ ಪ್ರವೇಶಿಸಿದ್ದಾಗ, ಪಾರ್ಲಿಮೆಂಟ್ ಸ್ಪೀಚ್ ನೀಡುವ ಸಂದರ್ಭದಲ್ಲಿಯೂ ಕೂಡ ಹೀಗೆ ಹಾಕಾದ ಸಾಂಪ್ರದಾಯಿಕ ನೃತ್ಯವನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇದನ್ನೂ ಓದಿ: ಕಳೆದ 6 ವರ್ಷಗಳಿಂದ ಈ ದೇಶದ ಜೈಲುಗಳಲ್ಲಿ ಕೈದಿಗಳೇ ಇಲ್ಲ! ಇದೇ ಅಲ್ಲವೇ ಅಸಲಿ ರಾಮರಾಜ್ಯ
ಹನಾ ಮತ್ತ ಆಕೆಯ ತಂದೆ ಇಬ್ಬರೂ ಕೂಡ ಪಟಿಮೌರಿಯನ್ನು ಪ್ರತಿನಿಧಿಸಿದ ಅಭ್ಯರ್ಥಿಗಳು. ಪಟಿಮೌರಿ ಬುಡಕಟ್ಟು ಜನಾಂಗದ ಬೆಂಬಲಕ್ಕಿಂತ, ಯುವ ಜನತೆಯ ಪ್ರತಿನಿಧಿ ಎಂಬ ನಿಟ್ಟಿನಲ್ಲಿ ಜನರು ಹನಾ ರೈವಟಿಯನ್ನು ಸಂಸದೆಯಾಗಿ ಆಯ್ಕೆ ಆಗಿದ್ದಾರೆ. ಹನಾ ರೈವಟಿ ಮೈಪಿ ಕ್ಲರ್ಕ್ ಹುಟ್ಟಿದ್ದು ಹಂಟ್ಲಿ ಎಂಬ ಒಂದು ಸಣ್ಣ ಪಟ್ಟಣದಲ್ಲಿ ಔಕ್ಲಾಂಡ್ ಹಾಗೂ ಹಮಿಲ್ಟನ್ ನಡುವೆ ಇರುವ ಈ ಪಟ್ಟಣದಲ್ಲಿ ಜನಿಸಿರುವ ಹನಾ, ತಮ್ಮನ್ನನು ತಾವು ಎಲ್ಲಿಯೂ ಕೂಡ ರಾಜಕಾರಣಿ ಎಂದು ಗುರುತಿಸಿಕೊಳ್ಳುವಲ್ಲಿ ಹಿಂಜರಿಯುತ್ತಾರ. ನಾನು ಮೌರಿ ಭಾಷೆಯ ಹಾಗೂ ಸಮುದಾಯದ ರಕ್ಷಕಿ ಅಂತಲೇ ಹೇಳುತ್ತಾರೆ. ಮೌರಿ ಕಮ್ಯೂನಿಟಿಗೆ ಸೇರಿದಂತಹ ತೋಟವೊಂದನ್ನು ಅವರು ನಿರ್ವಹಿಸುತ್ತಾರೆ.
ಹಲವು ವರದಿಗಳ ಪ್ರಕಾರ ರಾಜಕೀಯ ಹಾಗೂ ಹೋರಾಟಗಳ ಆಚೆ ಅವರು ಶಾಲಾ ಮಕ್ಕಳಿಗೆ ತೋಟಗಾರಿಕೆಯ ಬಗ್ಗೆ ತರಬೇತಿ ನೀಡುತ್ತಾರೆ. ಅದು ಅಲ್ಲದೇ ಹನಾ ನ್ಯೂಜಿಲೆಂಡ್ನಲ್ಲಿ ಮೌರಿ ಭಾಷೆಯ ದೊಡ್ಡ ಬೆಂಬಲಗಾತಿ ಎಂದು ಗುರುತಿಸಿಕೊಂಡಿದ್ದು. ಸಮುದಾಯದ ಈ ತಲೆಮಾರಿನ ಬಲಿಷ್ಠ ನಾಯಕಿ ಎಂದು ಕೂಡ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಹನಾ ಸಖತ್ ಆ್ಯಕ್ಟಿವ್ ಇದ್ದು ಇನ್ಸ್ಟಾಗ್ರಾಮ್ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ