/newsfirstlive-kannada/media/post_attachments/wp-content/uploads/2024/12/ISHA-GUHA.jpg)
ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ನಡೆಯುತ್ತಿದೆ. ಪಂದ್ಯದ ವೀಕ್ಷಕ ವಿವರಣೆ ವೇಳೆ ಇಶಾ ಗುಹಾ (Isa Guha) ಬುಮ್ರಾಗೆ ಒಂದು ಪದ ಬಳಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಇಂಗ್ಲಿಷ್ ಮಹಿಳಾ ನಿರೂಪಕಿ ಇಶಾ ಗುಹಾ ಕಾಮೆಂಟರಿ ಮಾಡುವಾಗ ‘ಪ್ರೈಮೇಟ್’ (Primate) ಎಂಬ ಪದವನ್ನು ಬಳಸಿದ್ದಾರೆ. 2008ರಲ್ಲಿ ನಡೆದ ‘ಮಂಕಿಗೇಟ್ ವಿವಾದ’ಕ್ಕೆ ತಳುಕು ಹಾಕಲಾಗ್ತಿದ್ದು, ವಿಷಯ ದೊಡ್ಡದಾಗುತ್ತಿದೆ. ಬೆನ್ನಲ್ಲೇ, ಇಶಾ ಗುಹಾ ಕ್ಷಮೆ ಕೇಳಿದ್ದಾರೆ.
ಯಾರು ಇಶಾ ಗುಹಾ..?
ಇಶಾ ಗುಹಾ ಕೆಲವು ವರ್ಷಗಳಿಂದ ಟಿವಿ ನಿರೂಪಕರಾಗಿ ಮತ್ತು ರೇಡಿಯೋ ಪ್ರಸಾರಕರಾಗಿ ಕೆಲಸ ಮಾಡ್ತಿದ್ದಾರೆ. ಇವರು ಮಾಜಿ ಕ್ರಿಕೆಟ್ ಆಟಗಾರ್ತಿ. ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ 100 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಕಾಮೆಂಟರಿ ಮಾಡುತ್ತಾರೆ. ಉನ್ನತ ವೆಬ್‌ಸೈಟ್‌ಗಳಿಗೆ ಅಂಕಣಗಳನ್ನು ಬರೆಯುತ್ತಾರೆ. 2012ರಿಂದ ಬರವಣಿಗೆ ಮತ್ತು ವೀಕ್ಷಕ ವಿವರಣೆಯನ್ನು ನೀಡುತ್ತ ಬಂದಿದ್ದಾರೆ.
ಇಶಾ ಗುಹಾ ಮೂಲತಃ ಭಾರತದವರು
ಇಶಾ ಗುಹಾ ಮೂಲತಃ ಭಾರತದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ಪ್ರತಿನಿಧಿಸಿದ್ದ ಭಾರತೀಯ ಮೂಲದ ಮೊದಲ ಮಹಿಳಾ ಆಟಗಾರ್ತಿ. ಇಶಾ ಪೋಷಕರು ಕೋಲ್ಕತ್ತಾದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಸ್ಥಳಾಂತರಗೊಂಡಿದ್ದರು. ಇಶಾ ಗುಹಾ ಮೇ 1985ರಲ್ಲಿ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಜನಿಸಿದರು. 8ನೇ ವಯಸ್ಸಿನಲ್ಲಿ ಅಣ್ಣನೊಂದಿಗೆ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು. ಕೇವಲ 13ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಡೆವಲಪ್​​ಮೆಂಟ್​​ ತಂಡಕ್ಕೆ ಆಯ್ಕೆಯಾದರು. ಇವರ ಒಟ್ಟು ಆಸ್ತಿ 12.6 ಕೋಟಿ ರೂಪಾಯಿ. 2018ರಲ್ಲಿ ಪ್ರಸಿದ್ಧ ಗಾಯಕ ರಿಚರ್ಡ್ ಥಾಮಸ್ ಅವರನ್ನು ವಿವಾಹವಾದರು.
ಇಶಾ ಗುಹಾ ಕ್ರಿಕೆಟ್ ಜೀವನ
ಇಶಾ ಗುಹಾ ಬಲಗೈ ವೇಗಿ. 2001ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ಪರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಮಾರ್ಚ್ 2012 ರಲ್ಲಿ ನಿವೃತ್ತಿ ಘೋಷಿಸಿದರು. 83 ಏಕದಿನ ಪಂದ್ಯಗಳಲ್ಲಿ 101 ವಿಕೆಟ್ ಹಾಗೂ 22 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. 8 ಟೆಸ್ಟ್‌ಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ