/newsfirstlive-kannada/media/post_attachments/wp-content/uploads/2025/05/JYOTI.jpg)
ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸ್ತಿದ್ದ ಶಂಕೆಯ ಮೇಲೆ ಹರಿಯಾಣದ ಹಿಸ್ಸಾರ್ ನಿವಾಸಿ ಖ್ಯಾತ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ( Jyoti Malhotra) ಬಂಧಿಸಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಭಾರತದ ರಹಸ್ಯ ಮಾಹಿತಿ ನೀಡಿದ ಆರೋಪವನ್ನು ಜ್ಯೋತಿ ಹೊತ್ತಿದ್ದಾಳೆ.
ಉತ್ತರ ಭಾರತದ ಜ್ಯೋತಿ ಪಾಕಿಸ್ತಾನದ ಬೇಹುಗಾರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದಳು ಎಂಬ ಆರೋಪವಿದೆ. ಈಕೆ ಟ್ರಾವೆಲ್ ವ್ಲಾಗ್ಗರ್ ಆಗಿದ್ದು, ‘ಟ್ರಾವೆಲ್ ವಿತ್ ಜೋ’ (Travel with JO) ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದಾಳೆ. ಈಕೆಯ ಯೂಟ್ಯೂಬ್ ಚಾನೆಲ್ಗೆ 3.77 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.31 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ.
ಮುಂಚೆ ಹೇಗಿದ್ದರು..?
ಹಿಸ್ಸಾರ್ನ ನ್ಯೂ ಅಗ್ರಸೇನ್ ಕಾಲೋನಿಯಲ್ಲಿ ಜ್ಯೋತಿ ಮನೆ ಇದೆ. ಚಿಕ್ಕ ಮನೆಯಾಗಿದ್ದು, ಮೂರು ಕೊಠಡಿಗಳನ್ನು ಹೊಂದಿವೆ. ಅವರ ತಂದೆ ಬಡಗಿ, ಇವರು ಹೆಚ್ಚು ಆದಾಯ ಸಂಪಾದನೆ ಮಾಡ್ತಿರಲಿಲ್ಲ. ಜ್ಯೋತಿ ತನ್ನ ಹೆತ್ತವರಿಗೆ ಒಬ್ಬಳೇ ಮಗಳು. 20 ವರ್ಷಗಳ ಹಿಂದೆ ಅಪ್ಪ-ಅಮ್ಮನಿಗೆ ವಿಚ್ಛೇದನ ಆಗಿದೆ. ನಂತರ ಚಿಕ್ಕಪ್ಪನ ಪಿಂಚಣಿ ಹಣದಲ್ಲಿ ಜೀವನ ದೂಡುತ್ತಿದ್ದಳು. ಕೊನೆಗೆ ಐಷಾರಾಮಿ ಬದುಕಿಗೆ ತಿರುಗಿಸಿದ್ದು, ಯೂಟ್ಯೂಬ್.
ಇದನ್ನೂ ಓದಿ: ಕೊಹ್ಲಿಗಾಗಿ ಅಲ್ಲವೇ ಅಲ್ಲ.. RCB ಫ್ಯಾನ್ಸ್ಗೆ ಕ್ಯಾಪ್ಟನ್ ರಜತ್ ಥ್ಯಾಂಕ್ಸ್ ಹೇಳಿದ್ದು ಯಾಕೆ?
ಜ್ಯೋತಿ ತನ್ನ ಶಿಕ್ಷಣವನ್ನು ಹಿಸ್ಸಾರ್ನಲ್ಲಿ ಪೂರ್ಣಗೊಳಿಸಿದ್ದಾಳೆ. ಎಫ್‌ಸಿಜೆ ಕಾಲೇಜಿನಿಂದ ಎಂಬಿಎ ಪೂರ್ಣಗೊಳಿಸಿ, ನಂತರ ದೆಹಲಿಗೆ ಬಂದಿದ್ದಳು. ದೆಹಲಿಯಲ್ಲಿ ಕೇವಲ 20 ಸಾವಿರಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದಳು. ಪಿಜಿಯಲ್ಲಿ ಇದ್ದು ಕೆಲಸ ಮಾಡಿಕೊಂಡಿದ್ದಳು.
ವ್ಲಾಗರ್ ಹೇಗೆ ಆದಳು?
ಜ್ಯೋತಿ ಸಾಂದರ್ಭಿಕವಾಗಿ ಮಾತ್ರ ಮನೆಗೆ ಬರ್ತಿದ್ದಳು. 2020ರಲ್ಲಿ ಕೊರೊನಾ ಅವಧಿಯಲ್ಲಿ ಕಂಪನಿ ಕೆಲಸದಿಂದ ಕೊಕ್ ನೀಡಿತು. ನಂತರ ಮತ್ತೆ ಹಿಸ್ಸಾರ್ಗೆ ಮರಳಿದಳು. ಕೆಲಸ ಹುಡುಕಲು ಪ್ರಾರಂಭಿಸ್ತಾಳೆ, ಎಲ್ಲಿಯೂ ಸಿಗಲ್ಲ. ನಿರುದ್ಯೋಗ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದತ್ತ ಗಮನ ಕೊಡ್ತಾಳೆ. ವ್ಲಾಗ್‌ಗಳನ್ನು ಮಾಡುವ ಮೂಲಕ ಜನ ಹಣ ಸಂಪಾದನೆ ಮಾಡ್ತಿರೋದನ್ನ ತಿಳಿದುಕೊಳ್ತಾಳೆ. ಅಂತೆಯೇ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾಳೆ. ಅದರಿಂದ ಆಕೆಯ ಲಕ್ ಬದಲಾಗಿತ್ತು. ಕೊನೆಯಲ್ಲಿ ದುರ್ಬುದ್ಧಿಗೆ ಬಿದ್ದು, ಈಗ ಜೈಲು ಸೇರಿದ್ದಾಳೆ.
ಇದನ್ನೂ ಓದಿ: ದೇಶದಲ್ಲಿ ಆಪರೇಷನ್ ಸಿಂಧೂರ ಹೊಸ ಮಾರ್ಕೆಟಿಂಗ್ ಟ್ರೆಂಡ್.. ಅಚ್ಚರಿ ವಿಷಯ ತಿಳಿಸಿದ ಬಿಗ್ಬಾಸ್ ಬೆಡಗಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ