/newsfirstlive-kannada/media/post_attachments/wp-content/uploads/2024/07/Keir-Starmer.jpg)
ಲಂಡನ್: ಇಂಗ್ಲೆಂಡ್ ಮುಂದಿನ ಪ್ರಧಾನಮಂತ್ರಿಯಾಗಿ ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕರ್ನರ್ವೇಟೀವ್ ಪಕ್ಷವನ್ನು ಬಗ್ಗು ಬಡಿದಿರುವ ಲೇಬರ್ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿದಿದೆ. ಲೇಬರ್ ಪಾರ್ಟಿಯ ಅಬ್ಬರದ ಮುಂದೆ 14 ವರ್ಷದ ಬಳಿಕ ಕರ್ನರ್ವೇಟೀವ್ ಪಾರ್ಟಿ ಸಂಪೂರ್ಣವಾಗಿ ಮಂಕಾಗಿದೆ.
ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಹೊಸ ಯುಗಾರಂಭ; 14 ವರ್ಷದ ಬಳಿಕ ಸೋತರೂ ಸಂಪ್ರದಾಯ ಎತ್ತಿ ಹಿಡಿದ ರಿಷಿ ಸುನಕ್!
ಇಂಗ್ಲೆಂಡ್ ಪಾರ್ಲಿಮೆಂಟ್‌ನ ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕ್ಕೇರುವ ಪಕ್ಷಕ್ಕೆ 326 ಸ್ಥಾನಗಳ ಅವಶ್ಯಕತೆ ಇತ್ತು. ಇತ್ತೀಚಿನ ಮಾಹಿತಿ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 326 ಸ್ಥಾನಗಳನ್ನ ಗೆದ್ದು ಮುನ್ನುಗ್ಗುತ್ತಿದೆ. ಎಕ್ಸಿಟ್ ಪೋಲ್ ಪ್ರಕಾರ ಲೇಬರ್ ಪಕ್ಷ 410 ಸೀಟ್‌ಗಳಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ಯಾರು ಈ ಕೀರ್ ಸ್ಟಾರ್ಮರ್?
ಇಂಗ್ಲೆಂಡ್‌ನ ಮುಂದಿನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ ಸದ್ಯ 61 ವರ್ಷ ವಯಸ್ಸು. ಲಂಡನ್ ಹೊರವಲಯದ ಸರ್ರೆಯಲ್ಲಿರುವ ಕಾರ್ಮಿಕ ಕುಟುಂಬದಲ್ಲಿ ಜನಿಸಿದವರು. ಕೀರ್ ಸ್ಟಾರ್ಮರ್ ತಾಯಿ ನರ್ಸ್ ಆಗಿದ್ದರು. ಸ್ಟಾರ್ಮರ್ ಅವರು ಇಡೀ ಕುಟುಂಬದಲ್ಲೇ ಮೊದಲ ಪದವಿಧರರು. ಲೀಡ್ಸ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಆಕ್ಸ್‌ಫರ್ಡ್‌ನಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ.
ಎಡಪಂಥೀಯ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದ್ದ ಕೀರ್ ಸ್ಟಾರ್ಮರ್ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಮಾನವ ಹಕ್ಕುಗಳ ಪರ ಬಹಳಷ್ಟು ಹೋರಾಟಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಮಾನವ ಹಕ್ಕು, ಕಾರ್ಮಿಕರ ಪರ ಕೀರ್ ಸ್ಟಾರ್ಮರ್ ನಡೆಸಿದ ದೀರ್ಘಕಾಲಿನ ಹೋರಾಟಕ್ಕೆ ಇಂಗ್ಲೆಂಡ್‌ನಲ್ಲಿ ಕೊನೆಗೂ ದಿಗ್ವಿಜಯ ಸಿಕ್ಕಿದೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ I am sorry ಎಂದ ಸುನಕ್.. ನೂತನ ಪ್ರಧಾನಿಯಿಂದ ಬಸವಣ್ಣನಿಗೆ ಗೌರವ ಸಲ್ಲಿಕೆ
1930ರ ಇಂಗ್ಲೆಂಡ್ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಸತತ ಮೂರು ಬಾರಿ ಕರ್ನರ್ವೇಟೀವ್ ಪಕ್ಷವೇ ಗೆಲುವು ಸಾಧಿಸುತ್ತಾ ಬಂದಿದೆ. ಬ್ರಿಟೀಷರ ನಾಡಲ್ಲಿ ಪ್ರಬಲವಾಗಿದ್ದ ಕರ್ನರ್ವೇಟೀವ್ ಪಕ್ಷವನ್ನು ಸೋಲಿಸುವಲ್ಲಿ ಕೀರ್ ಸ್ಟಾರ್ಮರ್ ಅವರ ಪಾತ್ರ ದೊಡ್ಡದಿದೆ. ಸತತ ಸೋಲಿನ ಸುಳಿಯಲ್ಲಿದ್ದ ಲೇಬರ್ ಪಾರ್ಟಿಯ ಗೆಲುವಿಗೆ ಕೀರ್ ಸ್ಟಾರ್ಮರ್ ನಿರಂತರ ಹೋರಾಟ ನಡೆಸಿ ಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ