/newsfirstlive-kannada/media/post_attachments/wp-content/uploads/2025/01/KING-OF-GOLD.jpg)
ಹಳದಿ ಲೋಹ ಎಂದೆ ಕರೆಸಿಕೊಳ್ಳುವ ಈ ಚಿನ್ನ ಕೇವಲ ಐಶ್ವರ್ಯದ ಸಂಕೇತ ಮಾತ್ರವಲ್ಲ. ಇದು ದೇಶದಲ್ಲಿ ಏಕೆ ಇಡೀ ವಿಶ್ವದಲ್ಲಿಯೇ ಅತ್ಯಂತ ನೆಚ್ಚಿನ ಹೂಡಿಕೆಯ ಮೂಲ. ಜಾಗತಿಕವಾಗಿ ಅತಿಹೆಚ್ಚು ಚಿನ್ನ ಬಳಸುವವರು ಭಾರತೀಯ ಮಹಿಳೆಯರೇ ಹೆಚ್ಚು. ಬಂಗಾರ ಎಂಬುದು ಭಾರತೀಯ ಮಹಿಳೆಯರಿಗೆ ಅಲಂಕಾರಕ್ಕಿಂತ ಬೇರೆಯದ್ದೇ ಭಾವನಾತ್ಮಕ ನಂಟು ಇದೆ. ಚಿನ್ನ ಎಂದರೆ ಭಾರತೀಯ ಮಹಿಳೆಯರಿಗೆ ಕೇವಲ ಒಂದು ಅಲಂಕಾರಿಕ ವಸ್ತು ಅಲ್ಲ ಅದು ಒಂದು ಹೂಡಿಕೆ ಹಾಗೂ ಉಳಿತಾಯದ ಮೂಲ. ಆದ್ರೆ ನಿಮಗೆ ಗೊತ್ತಾ ಭಾರತದಲ್ಲಿ ಅತಿಹೆಚ್ಚು ಬಂಗಾರ ಶೇಖರಣೆ ಹೊಂದಿರುವ ರಾಜ್ಯ ಯಾವುದು ಅಂತ. ಅದು ನಮ್ಮದೇ ರಾಜ್ಯ ಕರ್ನಾಟಕ.
ಭಾರತ ಅತಿಹೆಚ್ಚು ಬಂಗಾರವನ್ನು ಉಪಯೋಗಿಸುವ ವಿಶ್ವದ ಅತಿದೊಡ್ಡ ದೇಶ. ಭಾರತದಲ್ಲಿ ಅತಿಹೆಚ್ಚು ಬಂಗಾರ ರಿಸರ್ವ್ ಇರುವ ರಾಜ್ಯ ಅಂದ್ರೆ ಅದು ಕರ್ನಾಟಕ. ವರದಿಗಳ ಪ್ರಕಾರ ಕರ್ನಾಟಕದಲ್ಲಿ ದೇಶದ ಒಟ್ಟು ಶೇಕಡಾ 80 ರಷ್ಟು ಚಿನ್ನ ಉತ್ಪಾದನೆಯಾಗುತ್ತದೆ. ಅದು ಕರ್ನಾಟಕ ಹಟ್ಟಿ ಗೋಲ್ಡ್​ ಮೈನ್​ನಲ್ಲಿ. ದೇಶದಲ್ಲಿ ಸದ್ಯ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಚಿನ್ನದ ಗಣಿ ಅಂದ್ರೆ ಅದು ಹಟ್ಟಿ ಗೋಲ್ಡ್ ಮೈನ್ ಮಾತ್ರ. ಇಲ್ಲಿಂದಲೇ ಅತಿಹೆಚ್ಚು ಚಿನ್ನವನ್ನು ಹೊರತೆಗೆಯಲಾಗುತ್ತಿದೆ.
ಇದನ್ನೂ ಓದಿ:ಸೈಫ್ ಮೇಲೆ ದಾಳಿ ಮಾಡಿದವ ಅಂತಿಂಥ ಕಿಲಾಡಿ ಅಲ್ಲ.. ಈತ ಭಾರತದವ ಅಲ್ಲವೇ ಅಲ್ಲ..!
ಕರ್ನಾಟಕವನ್ನು ಬಿಟ್ಟರೆ ಬಿಹಾರದಲ್ಲಿ ದೇಶದ ಶೇಕಡಾ 44 ರಷ್ಟು ಗೋಲ್ಡ್ ರಿಸರ್ವ್​ ಇದೆ. ರಾಜಸ್ಥಾನದಲ್ಲಿ ಶೇಕಡಾ 25 ರಷ್ಟು. ಈ ಮೂರು ರಾಜ್ಯಗಳು ದೇಶದ ಆರ್ಥಿಕತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಲಾಗುತ್ತದೆ.
ಇನ್ನು ವಿಶ್ವದಲ್ಲಿ ಅತಿಹೆಚ್ಚು ಗೋಲ್ಡ್ ರಿಸರ್ವ್​ ಇಟ್ಟುಕೊಂಡಿರುವ ದೇಶ ಅಂದ್ರೆ ಅದು ಯುನೈಟೆಡ್ ಸ್ಟೇಟ್​ ಸುಮಾರು 8,133 ಟನ್​ ಮೌಲ್ಯದಷ್ಟು ಚಿನ್ನ ಮೀಸಲು ಆ ದೇಶದಲ್ಲಿದೆ ಇದರ ಮೌಲ್ಯ ಒಟ್ಟು 45 ಲಕ್ಷ ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಈ ಮೀಸಲಿರುವ ಚಿನ್ನ ಅಮೆರಿಕಾದ ಅಭಿವೃದ್ಧಿಗೆ ಹಾಗೂ ಜಾಗತಿಕ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿದೆ. ಅದು ಮಾತ್ರವಲ್ಲ ಜಾಗತಿಕವಾಗಿ ಯುನೈಟೆಡ್ ಸ್ಟೇಟ್​ ಆರ್ಥಿಕವಾಗಿ ಸದೃಢವಾಗಿ ನಿಲ್ಲಲು ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us