/newsfirstlive-kannada/media/post_attachments/wp-content/uploads/2024/11/AR-Rahman-Mohini-Dey.jpg)
ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ದಾಂಪತ್ಯದಲ್ಲಿ ಅತಿ ದೊಡ್ಡ ಬಿರುಗಾಳಿ ಎದ್ದಿದೆ. ತಮ್ಮ 29 ವರ್ಷದ ದಾಂಪತ್ಯ ಜೀವನಕ್ಕೆ ಸೈರಾ ಭಾನು ಅವರು ಗುಡ್‌ಬೈ ಹೇಳಿದ್ದಾರೆ. ಎ.ಆರ್ ರೆಹಮಾನ್ ಅವರ ಈ ಡಿವೋರ್ಸ್ ಸುದ್ದಿ ತೀವ್ರ ಸಂಚಲನಕ್ಕೆ ಕಾರಣವಾಗಿರುವುದರ ಮಧ್ಯೆ ಹೊಸದೊಂದು ಹೆಸರು ಮುನ್ನೆಲೆಗೆ ಬಂದಿದೆ. ಅದುವೆ ಮೋಹಿನಿ ದೇ.
ಮೋಹಿನಿ ದೇ ಅವರು ಎ.ಆರ್ ರೆಹಮಾನ್ ಅವರ ಬಾಸಿಸ್ಟ್ ಅಂದ್ರೆ ಮ್ಯೂಸಿಕಲ್ ಬ್ಯಾಂಡ್ ತಂಡದಲ್ಲಿದ್ದ ಗಿಟಾರಿಸ್ಟ್. ಜಗತ್ತಿನಾದ್ಯಂತ 40ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ರೆಹಮಾನ್ ಅವರ ಜೊತೆ ಮೋಹಿನಿ ದೇ ಭಾಗವಾಹಿಸಿದ್ದಾರೆ. ಈಕೆ ರೆಹಮಾನ್ ದಾಂಪತ್ಯದ ಡಿವೋರ್ಸ್ ಸುದ್ದಿ ಬಯಲಾದ ಕೆಲವೇ ಹೊತ್ತಿಗೆ ತಮ್ಮ ಗಂಡನಿಂದ ದೂರವಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/11/A-R-Rehman-mohini.jpg)
ಮೋಹಿನಿ ದೇ ಅವರು ಮ್ಯೂಸಿಕ್ ಕಂಪೋಸರ್ ಮಾರ್ಕ್ ಹಾರ್ಟ್ಸುಚ್ ಅವರನ್ನು ವಿವಾಹವಾಗಿದ್ದರು. ರೆಹಮಾನ್ ದಾಂಪತ್ಯದ ಬಿರುಕಿನ ಬಳಿಕ ಇವರಿಬ್ಬರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬೇರೆಯಾದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮೋಹಿನಿ ದೇ ಅವರ ಈ ದಿಢೀರ್ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ಎ.ಆರ್ ರೆಹಮಾನ್‌ಗೆ ಬಿಗ್ ಶಾಕ್.. ದಿಢೀರ್ ಬೇರೆಯಾಗುವ ನಿರ್ಧಾರ ಪ್ರಕಟಿಸಿದ ಸೈರಾ; ಕಾರಣವೇನು?
ಯಾರು ಈ ಮೋಹಿನಿ ದೇ?
ಮೋಹಿನಿ ದೇ ಅವರು ಮಹಾರಾಷ್ಟ್ರ ಮೂಲದವರು. ಜುಲೈ 20, 1967ರಲ್ಲಿ ಮುಂಬೈನಲ್ಲಿ ಜನಿಸಿದ್ದರು. ಮೋಹಿನಿ ಅವರ ಕುಟುಂಬ ಸಂಗೀತದ ಅಪಾರ ಆಸಕ್ತಿಯನ್ನು ಹೊಂದಿತ್ತು. ಮೋಹಿನಿ ಅವರ ತಂದೆ ಸುಜೋಯ್ ದೇ ಅವರು ಸಂಗೀತಗಾರರಾಗಿದ್ದರು. ಇವರ ಬೆಂಬಲ ಹಾಗೂ ಪ್ರೋತ್ಸಾಹದಿಂದ ಮೋಹಿನಿ ಅವರ ಬಾಲ್ಯದಲ್ಲಿ ಸಂಗೀತವನ್ನು ಅಭ್ಯಾಸ ಮಾಡಿದ್ದರು.
ಮೋಹಿನಿ ದೇ ಅವರು ಕೇವಲ 11 ವರ್ಷದವಳಾಗಿದ್ದಾಗಲೇ ಸಂಗೀತ ಜಗತ್ತಿಗೆ ಕಾಲಿಟ್ಟಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ವೃತ್ತಿಪರವಾಗಿ ಕಾರ್ಯನಿರ್ವಹಿಸಿದ್ದರು. ಸಂಗೀತ ಪ್ರಿಯರಿಗೆ ಇಷ್ಟವಾಗಿದ್ದು ಗಿಟಾರಿಸ್ಟ್ ಆಗಿ. ಗಿಟಾರಿಸ್ಟ್‌ನಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ ಮೋಹಿನಿ ಅವರು ಬಹಳಷ್ಟು ಹೆಸರು ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us