/newsfirstlive-kannada/media/post_attachments/wp-content/uploads/2025/02/RATAN_TATA-1.jpg)
ಸ್ನೇಹ ಎಂದರೆ ಯಾವಾಗಲೂ ಶಾಶ್ವತವಾಗಿರುವ ಸಂಬಂಧ. ಯಾರ ನಡುವೆ ಆಗಲಿ ಗೆಳೆಯತನ ಎನ್ನುವುದು ಹಣ, ಆಸ್ತಿ, ಚಿನ್ನ, ಬೆಳ್ಳಿ, ಶ್ರೀಮಂತ, ಬಡವ ಎನ್ನುವುದರಿಂದ ಹುಟ್ಟುವುದಿಲ್ಲ. ಇಬ್ಬರ ವ್ಯಕ್ತಿಗಳ ಗುಣಗಳಲ್ಲಿ ಸಾಮ್ಯತೆ ಇದ್ದರೇ ಸ್ನೇಹ ಅದಾಗೆ ಬೆಸೆಯುತ್ತದೆ. ಪ್ರೀತಿಗಿಂತ ಹೆಚ್ಚು ಬಲಷ್ಠವಾಗಿರುವುದು ಕುಚುಕು ಗೆಳೆತನ. ಇಂತಹ ಅತ್ಯಧ್ಬುತವಾದ ಸುಂದರ ಸ್ನೇಹದ ಸೆಲೆಗೆ ಸಿಲುಕಿದ್ದ ಉದ್ಯಮಿ ರತನ್ ಟಾಟಾ ಅವರು ತನ್ನ ಹಾಸ್ಟೆಲ್ ಗೆಳೆಯನಿಗೆ 500 ಕೋಟಿ ರೂಪಾಯಿಯ ಆಸ್ತಿ ಬರೆದಿದ್ದಾರೆ.
ಉದ್ಯಮಿ ರತನ್ ಟಾಟಾ ಅವರು ಫಾರಿನ್ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದರು. ಇದಾದ ಮೇಲೆ ಅವರು ಕೆಲಸಕ್ಕೆಂದು ಟಾಟಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ವೇಳೆ ಅವರಿಗೆ ಟಾಟಾ ಕಂಪನಿಯಿಂದ ಉಳಿದುಕೊಳ್ಳಲು ಹಾಸ್ಟೆಲ್ ನೀಡಲಾಗಿತ್ತು. ಈ ವೇಳೆ ಅಲ್ಲಿ ಪರಿಚಯವಾಗಿದ್ದೇ ಮೋಹಿನಿ ಮೋಹನ್ ದತ್ತಾ ಅವರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಸ್ನೇಹ ಬಲಿಷ್ಠವಾಗಿ ಬೆಳೆಯುತ್ತದೆ. ವ್ಯಾಪಾರ, ಕುಟುಂಬ, ಇತರೆ ತಮ್ಮ ವೈಯಕ್ತಿಕ ಸಮಸ್ಯೆಗಳು ಏನಿದ್ದರು ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿಯೇ ಇಬ್ಬರ ನಡುವಿನ ಗೆಳೆತನ ಹೆಚ್ಚು ಗಾಡವಾಗಿ ಬೆಳೆದಿತ್ತು.
ಇದನ್ನೂ ಓದಿ: ಸೇತುವೆಯ ಅವೈಜ್ಞಾನಿಕ ಕಾಮಗಾರಿ; ನೀರಿನಲ್ಲಿ ಮುಳುಗಿದ ರೈತರ ಬದುಕು, ಅಸಲಿಗೆ ಆಗಿದ್ದೇನು?
ಮೋಹಿನಿ ಮೋಹನ್ ದತ್ತಾ ಅವರು, ಟಾಟಾ ಅವರ ಕುಟುಂಬಕ್ಕೆ ಬಿಟ್ಟರೇ ಬೇರೆಯವರಿಗೆ ಅಷ್ಟೇನೂ ಗೊತ್ತಿಲ್ಲ. ದಶಕದ ಹಿಂದಿನ ಗೆಳೆಯನನ್ನು ಮರೆಯದ ರತನ್ ಟಾಟಾ ಅವರು ಉಯಿಲಿನಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿ ಆಸ್ತಿಯನ್ನು ಬರೆದಿದ್ದಾರೆ. ಇದನ್ನು ಹೈಕೋರ್ಟ್ನಿಂದ ಪ್ರಮಾಣೀಕರಿಸಲ್ಪಟ್ಟ ನಂತರವೇ ಅವರಿಗೆ ಹಸ್ತಾಂತರ ಮಾಡಲಾಗುವುದು. ಈ ಇಬ್ಬರ ನಡುವಿನ ಸ್ನೇಹ ಇದೀಗ ಉಯಿಲಿನಿಂದ ಹೊರ ಬಂದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಮೋಹನ್ ದತ್ತಾ ಯಾರು?
ವಿದೇಶದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ರತನ್ ಟಾಟಾ ಅವರಿಗೆ ಜಾರ್ಖಂಡ್ನ ಜೆಮ್ಶೆಡ್ ಪುರದಲ್ಲಿರುವ ಟಾಟಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲೇ ಇವರಿಗೆ ಉಳಿದುಕೊಳ್ಳಲು ಕಂಪನಿಯ ಹಾಸ್ಟೆಲ್ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಮಯದಲ್ಲಿ ರತನ್ ಟಾಟಾ ಅವರಿಗೆ ದತ್ತಾ ಪರಿಚಯ ಆಗಿದ್ದರು. ಇದೇ ಸ್ನೇಹ ಮುಂದೆ ವ್ಯಾಪಾರ-ವ್ಯವಹಾರದಲ್ಲೂ ಒಂದುಗೂಡಿತ್ತು. ಮುಂದೆ ಬ್ಯುಸಿನೆಸ್ನಲ್ಲಿ ರತನ್ ಟಾಟಾ ಮೇಲೆತ್ತರಕ್ಕೆ ಬೆಳೆದರು. ಹೀಗಾಗಿಯೇ 2024ರಲ್ಲಿ ಮುಂಬೈನಲ್ಲಿ ನಡೆದ ಹುಟ್ಟುಹಬ್ಬಕ್ಕೆ ರತನ್ ಟಾಟಾ ಅವರು ಕೆಲವೇ ಕೆಲವು ಆಪ್ತರಲ್ಲಿ ದತ್ತಾ ಅವರನ್ನೂ ಆಹ್ವಾನ ಮಾಡಿದ್ದರು.
ದತ್ತಾ ಅವರು ಮೂಲತಹ ಜೆಮ್ಶೆಡ್ ಪುರದವರೇ ಆಗಿದ್ದರಿಂದ ತಮ್ಮದೇ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ಇದು ಬಳಿಕ ಸ್ಟಾಲಿಯನ್ ತಾಜ್ ಗ್ರೂಪ್ ಹೋಟೆಲ್ಸ್ನಲ್ಲಿ ವಿಲೀನ ಆಯಿತು. ಸ್ಟಾಲಿಯನ್ನಲ್ಲಿ ದತ್ತಾ 80 ರಷ್ಟು, ರತನ್ ಟಾಟಾ ಅವರು ಶೇ.20 ರಷ್ಟು ಶೇರ್ ಹೊಂದಿದ್ದರು. ರತನ್ ಟಾಟಾ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಬೆಳೆದಿದ್ದರೂ ಗೆಳೆತನ ಬಿಟ್ಟಿರಲಿಲ್ಲ. ದತ್ತಾ ಅವರ ಮಗಳು 2015ರವರೆಗೆ ಟಾಟಾ ಒಡೆತನದ ತಾಜ್ ಹೋಟೆಲ್, 2024ರವರೆಗೆ ಟಾಟಾ ಟ್ರಸ್ಟ್ನಲ್ಲಿ ಕೆಲಸ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ