/newsfirstlive-kannada/media/post_attachments/wp-content/uploads/2024/12/Techhie-Atul-Shubash-Case.jpg)
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣದಲ್ಲಿ ಪತ್ನಿ ನಿಖಿತಾ ಸಿಂಘಾನಿಯಾ ಮೊದಲ ಆರೋಪಿಯಾಗಿದ್ದಾರೆ. ಹೀಗಾಗಿ ನಿಖಿತಾಳ ಬಂಧನಕ್ಕೆ ಆಗ್ರಹ ಜೋರಾಗಿದೆ. ಎಫ್ಐಆರ್ ದಾಖಲಾದರೂ ಇನ್ನೂ ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಶುರುವಾಗಿದೆ.
ಯಾರು ನಿಖಿತಾ ಸಿಂಘಾನಿಯಾ?
ಅತುಲ್ ಪತ್ನಿ ನಿಖಿತಾ, ಬಿಟೆಕ್, ಎಂಬಿಎ ಪದವಿಧರೆ. ದೆಹಲಿಯಲ್ಲಿ AI ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡ್ತಿದ್ರೂ ಪತಿ ಬಳಿ ಹಣಕ್ಕಾಗಿ ಟಾರ್ಚರ್ ಕೊಡುತ್ತಿದ್ದ ಆರೋಪ ಇದೆ. 2021ರಲ್ಲಿ ಸೀನಿಯರ್ ಕನ್ಸಲ್ಲ್ಟೆಂಟ್ ಆಗಿ ಜೈಪುರಿಯಾ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿದ್ದಳು.
ಇದನ್ನೂ ಓದಿ:99 ಪ್ರತಿಶತ ಪುರುಷರದ್ದೇ ತಪ್ಪು -ಬೆಂಗಳೂರು ಟೆಕ್ಕಿ ಕೇಸ್‌ಗೆ ಕಂಗನಾ ಟೀಕೆ
ಬನಸ್ಥಲಿ ವಿದ್ಯಾಪೀಠದಲ್ಲಿ ಬಿ.ಟೆಕ್ ಪದವಿ ಸಹ ಪಡೆದಿದ್ದಾಳೆ. ಟೆಕ್ ಸಂಸ್ಥೆಯೊಂದರಲ್ಲಿ ಇಂಟರ್ನ್ ಆಗಿ ವೃತ್ತಿ ಜೀವನ ಆರಂಭ ಮಾಡಿ, ವಿವಿಧ ಟೆಕ್ ಹಾಗೂ ಫೈನಾನ್ಶಿಯಲ್ ಕಂಪನಿಗಳಲ್ಲಿಯೂ ಕೆಲಸ ಮಾಡಿದ್ದಾಳೆ.
ಪ್ರಕರಣದ ಆರೋಪಿಗಳು ಯಾಱರು?
ನಿಖಿತಾ ಸಿಂಘಾನಿಯಾ ಮೊದಲ ಆರೋಪಿಯಾಗಿದ್ದಾಳೆ. ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾ, ಸುಶೀಲ್ ಸಿಂಘಾನಿಯಾ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಆರೋಪಿಗಳಾಗಿದ್ದಾರೆ. 2019ರಲ್ಲಿ ನಿಖಿತಾ ಸಿಂಘಾನಿಯಾ ಮತ್ತು ಅತುಲ್ ಸುಭಾಷ್ ಮದುವೆ ಆಗಿತ್ತು.
ಇದನ್ನೂ ಓದಿ:Justice Is Due ಅತುಲ್ ಸುಭಾಷ್ ಕೇಸ್‌ಗೆ ಹೊಸ ಟ್ವಿಸ್ಟ್; ಮಗನ ಮುಂದಿಟ್ಟುಕೊಂಡ ಟೆಕ್ಕಿ ಪತ್ನಿ ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ