newsfirstkannada.com

ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯಲಕ್ಷ್ಮೀ ಕೆಂಗಣ್ಣಿಗೆ ಗುರಿಯಾದ ಪವಿತ್ರಗೌಡ ಯಾರು?

Share :

Published January 25, 2024 at 8:03am

    ಪವಿತ್ರಾ ಗೌಡ ಯಾರು? ದರ್ಶನ್​ಗೆ ಏನು ಸಂಬಂಧ?

    ಕೌಟುಂಬಿಕ ಕಲಹದಲ್ಲಿ ಈಕೆಯ ಹೆಸರು ಕೇಳಿಬಂದಿತ್ತಾ?

    ಕನ್ನಡದಲ್ಲಿ ಈಕೆ ಎಷ್ಟು ಸಿನಿಮಾ ಮಾಡಿದ್ದಾರೆ? ಇಲ್ಲಿದೆ ಮಾಹಿತಿ

ಸ್ಯಾಂಡಲ್​ವುಡ್​ ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆಗಿರುವ ಫೋಟೋವನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ. ತನ್ನ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡ ನಟಿ ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆದುಕೊಂಡಿದ್ದಾರೆ. ಆದರೀಗ ಈ ಫೋಟೋ ಕಂಡು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅಸಮಾಧಾನ ಮತ್ತು ಆಕ್ರೋಶ ಹೊರಹಾಕಿದ್ದಾರೆ.

ಡಿ ಬಾಸ್​​ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಇನ್​ಸ್ಟಾಗ್ರಾಂನಲ್ಲಿ ತನ್ನ ಪತಿ ದರ್ಶನ್​ ಜೊತೆಗಿರುವ ಫೋಟೋ ಹಂಚಿಕೊಂಡ ಪವಿತ್ರಾ ಗೌಡ ವಿರುದ್ಧ ಬರೆದು ಹಾಕಿದ್ದಾರೆ. ಈ ಬೆನ್ನಲ್ಲೇ ಪವಿತ್ರಾ ಗೌಡ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಲು ಶುರು ಮಾಡಿದ್ದಾರೆ. ಆಕೆ ಯಾರು? ದರ್ಶನ್ ಗೂ ಪವಿತ್ರಾ ಗೌಡಗೂ ಏನ್ ಸಂಬಂಧ? ಎಂದು ಸರ್ಚ್​ ಮಾಡುತ್ತಿದ್ದಾರೆ.

ಪವಿತ್ರಾ ಗೌಡ ನಟಿ ಹಾಗೂ ರೂಪದರ್ಶಿಯಾಗಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲೂ ಮಿಂಚಿದ್ದಾರೆ. ಪವಿತ್ರಾಗೆ ಈ ಮೊದಲೇ ಸಂಜಯ್​​​ ಸಿಂಗ್​ ಎಂಬವರ ಜೊತೆಗೆ ವಿವಾಹವಾಗಿದ್ದು, ಮಗಳು ಸಹ ಇದ್ದಾಳೆ.

ಪವಿತ್ರಾ ಗೌಡ ಸಿನಿಮಾಗಳು

ಪವಿತ್ರಾ ಗೌಡ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದಾರೆ. ಅದರಲ್ಲಿ ಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಆಕೆಗೆ ಅಷ್ಟೊಂದು ಯಶಸ್ಸು ತಂದುಕೊಟ್ಟಿಲ್ಲ.

ದರ್ಶನ್​ಗೂ ಪವಿತ್ರಾ ಗೌಡಗೆ ಏನು ಸಂಬಂಧ?

ಡಿ ಬಾಸ್​ ದರ್ಶನ್​​ ಜೊತೆಗೆ ಪವಿತ್ರಾ ಗೌಡ ಹೆಸರು ಈ ಹಿಂದೆಯೂ ಅನೇಕ ಬಾರಿ ಕೇಳಿಬಂದಿದೆ. ದರ್ಶನ್ ಕೌಟುಂಬಿಕ ಕಲಹದ ವೇಳೆ ಈ ಸಂಗತಿ ಮುನ್ನೆಲೆಗೆ ಬಂದಿತ್ತು. ಅಷ್ಟು ಮಾತ್ರವಲ್ಲದೆ ದರ್ಶನ್​ ಜೊತೆಗಿನ ಫೋಟೋವನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ.

ಕಾಟೇರ ಪ್ರಚಾರ ಮಾಡಿದ ಪವಿತ್ರಾ

ದರ್ಶನ್ ಅವರ ಸಿನಿಮಾಗಳ ಬಗ್ಗೆಯೂ ನಿರಂತರವಾಗಿ ಪವಿತ್ರಾ ಗೌಡ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಕಾಟೇರ ಚಿತ್ರದ ಸ್ಪೆಷಲ್ ಶೋನಲ್ಲೂ ಭಾಗಿಯಾಗಿದ್ದರು. ಮಾತ್ರವಲ್ಲದೆ, ಕುರುಕ್ಷೇತ್ರ ಸಿನಿಮಾ ಸಮಯದಲ್ಲೂ ಸೆಟ್​ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.

ಪವಿತ್ರಾ ಮಗಳ ಬರ್ತ್ ಡೇಯಲ್ಲಿ ಡಿ ಬಾಸ್​

ಅತ್ತ ನಟ ದರ್ಶನ್​ ಪವಿತ್ರಾ ಗೌಡ ಮಗಳ ಬರ್ತ್ ಡೇಯಲ್ಲೂ ಭಾಗಿಯಾಗಿದ್ದರು. ಆಕೆಯ ಮಗಳ ಜೊತೆ ದರ್ಶನ್ ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.

ಆಕ್ರೋಶ ಹೊರ ಹಾಕಿದ ವಿಜಯಲಕ್ಷ್ಮೀ

ಇದೀಗ ಪವಿತ್ರ ಗೌಡ ‘ನಮ್ಮಿಬ್ಬರ ರಿಲೇಶನ್​ಶಿಪ್​ಗೆ 10 ವರ್ಷ’ ಎಂದು ಬರೆದು ಹಾಕುವ ಮೂಲಕ ದರ್ಶನ್​ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದೇ ವಿಚಾರಕ್ಕೆ ವಿಜಯಲಕ್ಷ್ಮೀ ಕಿಡಿಕಾರಿದ್ದು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಇರಬೇಕು ಎಂದು ಬರೆದು ಹಾಕಿದ್ದಾರೆ. ಜೊತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಂದು ಬರೆಯುವ ಮೂಲಕ ಪವಿತ್ರಾ ಗೌಡಗೆ ಟ್ಯಾಗ್​ ಮಾಡಿದ್ದಾರೆ.

View this post on Instagram

A post shared by Vijayalakshmi darshan (@viji.darshan)

ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ, ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಪವಿತ್ರಾ ಗೌಡ ಹಾಕಿಕೊಂಡಿರುವ ದರ್ಶನ್​ ಫೋಟೋಗೆ ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಗೌರವಕ್ಕೆ ಧಕ್ಕೆ‌ತರುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ವಿಜಯಲಕ್ಷ್ಮೀ ಕೆಂಗಣ್ಣಿಗೆ ಗುರಿಯಾದ ಪವಿತ್ರಗೌಡ ಯಾರು?

https://newsfirstlive.com/wp-content/uploads/2024/01/darshan-2.jpg

Load More