10 ಲಕ್ಷ ಬೇಸ್​ ಪ್ರೈಸ್​.. 1.20 ಕೋಟಿ ರೂ ಕೊಟ್ಟು ಖರೀದಿಸಿದ RCB; ಯಾರು ಈ ಗುಳಿಕೆನ್ನೆ ಹುಡುಗಿ..?

author-image
Ganesh
Updated On
10 ಲಕ್ಷ ಬೇಸ್​ ಪ್ರೈಸ್​.. 1.20 ಕೋಟಿ ರೂ ಕೊಟ್ಟು ಖರೀದಿಸಿದ RCB; ಯಾರು ಈ ಗುಳಿಕೆನ್ನೆ ಹುಡುಗಿ..?
Advertisment
  • WPL ಹರಾಜಿನಲ್ಲಿ ಆರ್​ಸಿಬಿ ಅಚ್ಚರಿ ಆಯ್ಕೆ
  • 23 ವರ್ಷದ ಭಲೇ ಪ್ರತಿಭಾವಂತೆ RCBಗೆ ಎಂಟ್ರಿ
  • ಪ್ರೇಮ ರಾವತ್​ಗಾಗಿ ಡೆಲ್ಲಿ-ಆರ್​ಸಿಬಿ ಭಾರೀ ಬಿಡ್

ಐಪಿಎಲ್ ಕ್ರೀಡಾ ಉತ್ಸಾಹಿ ಯುವ ಪ್ರತಿಭೆಗಳಿಗೆ ಹೊಸ ಕನಸನ್ನು, ಹೊಸ ಬದುಕನ್ನು ಕಟ್ಟಿ ಕೊಡ್ತಿದೆ. ಇಷ್ಟು ದಿನ ಪುರುಷ ಐಪಿಎಲ್​​ನಲ್ಲಿ ನಡೆದ ಜಾಕ್​ಪಾಟ್​ಗಳಿಂದ ಅದೆಷ್ಟೋ ಬಡ ಕ್ರಿಕೆಟಿಗರ ಬದುಕು ಹಸನಾದ ಕತೆ ಗೊತ್ತೇ ಇದೆ. ಅದೇ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ WPL ಕೂಡ ಸಾಗುತ್ತಿದೆ.

ಐಪಿಎಲ್ ಮತ್ತು ಡಬ್ಲ್ಯೂಪಿಎಲ್​ಗೆ ಕ್ರಿಕೆಟ್ ಆಟಗಾರರ ಆರ್ಥಕ ಸಾಮರ್ಥ್ಯವನ್ನು ಬದಲಾಯಿಸುವ ಶಕ್ತಿ ಇದೆ. ಮಹಿಳಾ ಪ್ರೀಮಿಯರ್​ ಲೀಗ್​​ಗಾಗಿ ನಡೆದ ಹರಾಜಿನಲ್ಲಿ ನಮ್ಮ ಆರ್​​ಸಿಬಿ ಪ್ರೇಮ ರಾವತ್ ಎಂಬ ಪ್ರತಿಭೆಗೆ ಬರೋಬ್ಬರಿ 1.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

ಇದನ್ನೂ ಓದಿ:iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್​​ಗಳು..!

publive-image

ಪ್ರೇಮ್ ರಾವತ್ ಯಾರು..?
ಪ್ರೇಮ ರಾವತ್ ಉತ್ತರಾಖಂಡ್ ಕ್ರಿಕೆಟ್​ ಆಟಗಾರ್ತಿ. ಕ್ವಾಲಿಟಿ ಆಲ್​ರೌಂಡರ್ ಆಗಿರುವ ಇವರು, ತಂಡ ಎಷ್ಟೇ ಒತ್ತಡದಲ್ಲಿದ್ದರೂ ಧೈರ್ಯವಾಗಿ ಬೌಲಿಂಗ್ ಮಾಡಿ ಪರಿಸ್ಥಿತಿಯನ್ನು ನಿಭಾಯಿಸುವ ಚಾಕಚಕ್ಯತೆ ಅವರಿಗಿದೆ. ಬಲಗೈ ಲೆಗ್​​​ಸ್ಪಿನ್ನರ್ ಆಗಿರುವ ಪ್ರೇಮ, ಬ್ಯಾಟಿಂಗ್​ನಲ್ಲೂ ನಿಪುಣತೆ ಹೊಂದಿದ್ದಾರೆ. ಅದರಲ್ಲೂ ಟಿ-20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಪ್ರತಿಭೆ.

ಈ ಆಲ್​ರೌಂಡರ್ ಉತ್ತರಾಖಂಡ್ ಪ್ರಿಮೀಯರ್ ಲೀಗ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಡಬ್ಲ್ಯೂಪಿಎಲ್​​ಗೆ ಪದಾರ್ಪಣೆ ಮಾಡಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ Mussoorie Thunders Women ತಂಡ ಫೈನಲ್​​ಗೆ ತಲುಪಿಸುವಲ್ಲಿ ಇವರ ಪಾತ್ರ ತುಂಬಾನೇ ದೊಡ್ಡದಿದೆ. ಫೈನಲ್​​ ಗೆದ್ದು ಟ್ರೋಫಿ ಗೆಲ್ಲಿಸಿಕೊಟ್ಟ ಹುಡುಗಿ ಇವರು! ಮೊದಲ ಬಾಲ್​​ನಲ್ಲೇ ಮೊದಲ ವಿಕೆಟ್ ಕಿತ್ತ ಇವರು, ತಂಡಕ್ಕಾಗಿ 32 ರನ್​ಗಳ ಅಜೆಯ ಆಟವಾಡಿದರು. ಫೈನಲ್ ಪಂದ್ಯದಲ್ಲಿ ಬ್ಯಾಕ್​ ಟು ಬ್ಯಾಕ್ ಮೂರು ಸಿಕ್ಸರ್ ಬಾರಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದರು.

ಇದನ್ನೂ ಓದಿ:ಬಲಿಷ್ಠ ತಂಡ ಕಟ್ಟಿದ ಆರ್​​ಸಿಬಿ; ಹರಾಜಿನಲ್ಲಿ ಮತ್ತೆ ನಾಲ್ವರು ಸ್ಟಾರ್​​​ಗಳ ಖರೀದಿ..!

ದೇಸಿಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್​​ ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂಪಾಯಿ ಆಗಿತ್ತು. ಡಿಸಿ ಪ್ರೇಮ ಅವರಿಗಾಗಿ ತೀವ್ರ ಪೈಪೋಟಿ ನಡೆಸಿತ್ತು. ಕೊನೆಗೂ ಆರ್​ಸಿಬಿ 23 ವರ್ಷದ ಪ್ರತಿಭೆಯನ್ನು 1.20 ಕೋಟಿ ಹಣ ನೀಡಿ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment