/newsfirstlive-kannada/media/post_attachments/wp-content/uploads/2025/05/Purnam-Kumar-Shaw-1.jpg)
ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಗಡಿಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಕದನ ವಿರಾಮಕ್ಕೆ ಶರಣಾದ ಪಾಕಿಸ್ತಾನ, BSF ಯೋಧ ಪಿ.ಕೆ ಶಾ (Purnam Kumar Shaw) ಅವರನ್ನು ಇಂದು ಬೆಳಗ್ಗೆ ಬಿಡುಗಡೆ ಮಾಡಿದೆ.
10 ದಿನಗಳ ಹಿಂದೆ ಪಂಜಾಬ್ನ ಫಿರೋಜ್ಪುರ ಗಡಿಯಲ್ಲಿ ಪಾಕಿಸ್ತಾನ, ಭಾರತೀಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ವಶಕ್ಕೆ ಪಡೆದಿತ್ತು. ಕಳೆದ ಏಪ್ರಿಲ್ 23ರಂದು ಭೂ ಸೇನೆಯ 182ನೇ ಬೆಟಾಲಿಯನ್ ಯೋಧ ಪಿ.ಕೆ ಶಾ ಅವರು ಆಕಸ್ಮಿಕವಾಗಿ ಭಾರತದ ಗಡಿಯನ್ನು ದಾಟಿ, ಪಾಕಿಸ್ತಾನದ ಗಡಿ ರೇಖೆಯನ್ನು ಪ್ರವೇಶ ಮಾಡಿದ್ದರು. ಗಡಿ ದಾಟಿದ್ದ ತಪ್ಪಿಗೆ BSF ಯೋಧ ಪಿ.ಕೆ ಶಾ ಅವರನ್ನು ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದರು.
ಇದನ್ನೂ ಓದಿ: ಮದುವೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ಜೀವ ಬಿಟ್ಟ ವರ.. ಕಣ್ಣೀರಲ್ಲೇ ಕುಳಿತ ವಧು..!
ಬಿಎಸ್‌ಎಫ್ ಯೋಧ ಪಿ.ಕೆ ಶಾ ಅವರು ಒಟ್ಟು 1030 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು. ಭಾರತ, ಪಾಕ್ ಗಡಿ ಸಂಘರ್ಷ ನಡೆದು ಕದನ ವಿರಾಮದ ಬಳಿಕ ಪಾಕಿಸ್ತಾನ ಭಾರತದ ಷರತ್ತುಗಳಿಗೆ ಒಪ್ಪಿಕೊಂಡಿದೆ. ಹೀಗಾಗಿ ಅಟ್ಟಾರಿ ವಾಘಾ ಗಡಿ ಮೂಲಕ ಯೋಧ ಪಿ.ಕೆ. ಶಾ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದೆ.
ಯಾರು ಪೂರ್ಣಮ್ ಕುಮಾರ್ ಶಾ..?
ಪೂರ್ಣಮ್ ಕುಮಾರ್ ಶಾ 182ನೇ ಬೆಟಾಲಿಯನ್ ಯೋಧ. ಇವರು ಮೂಲತಃ ಪಶ್ಚಿಮ ಬಂಗಾಳದ ಹೂಘ್ಲಿ ಜಿಲ್ಲೆಯ ರಿಶ್ರಾದವರು. ರಜನಿ ಎಂಬ ಯುವತಿಯನ್ನು ಮದುವೆ ಆಗಿದ್ದಾರೆ. ಈ ಜೋಡಿಗೆ ಈಗಾಗಲೇ ಒಂದು ಮಗು ಇದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವರದಿಗಳ ಪ್ರಕಾರ, ರಜನಿ ತುಂಬು ಗರ್ಭಿಣಿ ಆಗಿದ್ದಾರೆ.
ಇದನ್ನೂ ಓದಿ: ಟರ್ಕಿ ಆ್ಯಪಲ್, ಮಾರ್ಬಲ್ ಬ್ಯಾನ್.. ಭಾರತದ ಬಾಯ್ಕಾಟ್‌ನಿಂದ ಪಾಕ್ ಪ್ರೇಮಿಗೆ ಎಷ್ಟು ಸಾವಿರ ಕೋಟಿ ನಷ್ಟ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ