/newsfirstlive-kannada/media/post_attachments/wp-content/uploads/2024/07/RADHIK-MARCHANT.jpg)
ಶ್ರೀಮಂತ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮವು ಮುಂಬೈನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ದೊಡ್ಡ ದೊಡ್ಡ ಗಣ್ಯರು ಆಗಮಿಸಿದ್ದು, ಮದುವೆಯ ವೈಭವವನ್ನು ಕಣ್ತುಂಬಿಕೊಳ್ತಿದ್ದಾರೆ.
ಅನಂತ್ ಅಂಬಾನಿ ಕೈ ಹಿಡಿಯುತ್ತಿರುವ ಚೆಲುವೆ ಯಾರು..?
ಅನಂತ್ ಅಂಬಾನಿ ಮದುವೆ ಆಗುತ್ತಿರುವ ಯುವತಿಯ ಹೆಸರು ರಾಧಿಕಾ ಮರ್ಚಂಟ್ ಅಂತಾ ಎಲ್ಲರಿಗೂ ಗೊತ್ತು. ಅವರ ಹಿನ್ನೆಲೆ ಏನು ಅಂತಾ ನೋಡೋದಾದ್ರೆ, ಎನ್‌ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ (Encore Healthcare Pvt. Ltd) ಸಿಇಓ ವೀರೆನ್ ಮರ್ಚೆಂಟ್ ಅವರ ಕಿರಿಯ ಪುತ್ರಿ ರಾಧಿಕಾ. ಇವರ ತಾಯಿಯ ಹೆಸರು ಶೈಲಾ ಮರ್ಚಂಟ್. ರಾಧಿಕಾ, ನ್ಯೂಯಾರ್ಕ್​ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥ ಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರು Encore Healthcare Pvt. Ltdನ ನಿರ್ದೇಶಕಿಯೂ ಹೌದು!
/newsfirstlive-kannada/media/post_attachments/wp-content/uploads/2024/07/RADHIKA_WIFE_ANANTH_AMBANI.jpg)
1994, ಡಿಸೆಂಬರ್ 18 ರಂದು ಜನಿಸಿರುವ ಇವರು, ಮೂಲತಃ ಗುಜರಾತ್​​ನವರು. ಬಾಲ್ಯದ ವಿದ್ಯಾಭ್ಯಾಸವನ್ನು ಮುಂಬೈನಲ್ಲೇ ಪೂರ್ಣಗೊಳಿಸಿದರು. ಮುಂಬೈನ ಬಿಡಿ ಸೊಮನಿ ಇಂಟರ್​ನ್ಯಾಷನಲ್ ಸ್ಕೋಲ್​​ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 2017ರಲ್ಲಿ ಅಮೆರಿಕಾಗೆ ತೆರಳಿ ಅಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡರು.
ನಂತರದ ದಿನಗಳಲ್ಲಿ ಮತ್ತೆ ಮುಂಬೈಗೆ ವಾಪಸ್ ಆದ ಅವರು, Isprava ಎಂಬ ರಿಯಲ್​ ಎಸ್ಟೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಸೇಲ್ಸ್​ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ ಫ್ಯಾಮಿಲಿ ಬ್ಯುಸಿನೆಸ್​ ನೋಡಿಕೊಳ್ಳುತ್ತಿದ್ದರು. ರಾಧಿಕಾಗೆ ಬ್ಯುಸಿನೆಸ್ ಒಂದೇ ಗೊತ್ತಿರೋದಲ್ಲ.
/newsfirstlive-kannada/media/post_attachments/wp-content/uploads/2024/05/Ananth-Ambani-Family.jpg)
ಇವರು ಪ್ರಾಣಿಗಳ ರಕ್ಷಣೆಯ ಕೆಲಸವನ್ನೂ ಮಾಡ್ತಿದ್ದಾರೆ. ಚಾರಣ, ಸ್ವಿಮ್ಮಿಂಗ್ ಹಾಗೂ ಓದುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಮುಂಬೈನ ನಿಭಾ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಭರತನಾಟ್ಯ ಕೂಡ ಕಲಿತಿದ್ದಾರೆ. ಅವರು ನೃತ್ಯವನ್ನು ಚೆನ್ನಾಗಿ ಮಾಡ್ತಾರೆ. 2022ರಲ್ಲಿ ಅಂಬಾನಿ ಮತ್ತು ಮರ್ಚೆಂಟ್ ಕುಟುಂಬ ಸಂಬಂಧ ಬೆಸೆಯುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂತೆಯೇ ಅಂಬಾನಿ ಕುಟುಂಬವನ್ನು ರಾಧಿಕಾ ಸೇರುತ್ತಿದ್ದಾರೆ.
ವಿಶೇಷ ಅಂದರೆ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡ ಭರತನಾಟ್ಯ ಪ್ರವೀಣೆ. ಈ ಮೂಲಕ ರಾಧಿಕಾ, ಅಂಬಾನಿ ಕುಟುಂಬದಲ್ಲಿ ಎರಡನೇ ಭರತನಾಟ್ಯ ಪ್ರತಿಪಾದಕರಾಗಲಿದ್ದಾರೆ. ಅನಂತ್ ಮತ್ತು ರಾಧಿಕಾ ಜನವರಿ 2023ರಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us