ರನ್ಯಾ ರಾವ್ ಕೇಸ್‌ಗೆ ಕಿಂಗ್‌ಪಿನ್‌.. ಯಾರು ಈ ತರುಣ್ ರಾಜು? ಇವನ ಆ್ಯಕ್ಟಿಂಗ್‌ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

author-image
admin
Updated On
ಜೈಲಿನಿಂದಲೇ ರನ್ಯಾ ರಾವ್‌ ಹೊಸ ಬಾಂಬ್‌.. ಡಿಜಿಪಿ ರಾಮಚಂದ್ರರಾವ್‌ಗೆ ಬಿಗ್‌ ಶಾಕ್; ಏನಿದು ಹೊಸ ಟ್ವಿಸ್ಟ್!
Advertisment
  • ತನಿಖೆ ವೇಳೆ ತರುಣ್​ ರಾಜುನ ಕಂಪ್ಲೀಟ್‌ ಸಿನಿಮಾ ರಹಸ್ಯಗಳು ರಿವೀಲ್
  • ಸಿನಿಮಾಗಾಗಿಯೇ ತನ್ನ ಹೆಸರು ಬದಲಿಸಿಕೊಂಡಿರುವ ಹೀರೋ ಇವರು!
  • ಪರಿಚಯಂ ಅನ್ನೋ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಾಟದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಕೇಸ್‌ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ರನ್ಯಾ ರಾವ್ ಜೊತೆಗಿದ್ದ ತರುಣ್ ರಾಜ್ ಅವರೇ ಕಿಂಗ್‌ಪಿನ್ ಎನ್ನಲಾಗಿದೆ. ಅಸಲಿಗೆ ಯಾರು ಈ ತರುಣ್ ರಾಜ್ ಅಲಿಯಾಸ್‌ ವಿರಾಟ್ ಕೊಂಡೂರು ಅನ್ನೋದು ಇಂಟ್ರೆಸ್ಟಿಂಗ್ ವಿಷಯವಾಗಿದೆ.

ಆರೋಪಿ ತರುಣ್ ರಾಜ್ ಕರ್ನಾಟಕದಲ್ಲಿ ಖಳನಾಯಕನಾದ್ರೆ ತೆಲುಗು ಚಿತ್ರರಂಗದಲ್ಲಿ​ ಹೀರೋ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖೆ ವೇಳೆ ತರುಣ್​ ರಾಜುನ ಸಿನಿಮಾ ರಹಸ್ಯಗಳು ರಿವೀಲ್ ಆಗಿದೆ. ಇಲ್ಲಿ ತರುಣ್ ರಾಜ್ ಆದ್ರೆ ತೆಲುಗು ಚಿತ್ರರಂಗದಲ್ಲಿ ಇವರ ಹೆಸರು ವಿರಾಟ್ ಕೊಂಡೂರು. ತೆಲುಗು ಚಿತ್ರರಂಗದಲ್ಲಿ​ ಫುಲ್​ ಆ್ಯಕ್ಟೀವ್​ ಆಗಿದ್ದ ತರುಣ್​ ರಾಜು, ಸಿನಿಮಾಗಾಗಿಯೇ ತನ್ನ ಹೆಸರನ್ನು ಬದಲಿಸಿಕೊಂಡಿದ್ದರು.

publive-image

ತರುಣ್​ ‘ಪರಿಚಯಂ’ ರೋಚಕ! 
ರನ್ಯಾ ಆಪ್ತ ಸ್ನೇಹಿತ ತರುಣ್ ರಾಜು ತೆಲುಗು ಚಿತ್ರರಂಗದಲ್ಲಿ ಸಕ್ರಿಯನಾಗಿದ್ದ. ತರುಣ್‌ ಪರಿಚಯಂ ಸೇರಿದಂತೆ ಮೂರಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ತರುಣ್ ರಾಜು ಟಾಲಿವುಡ್‌ನಲ್ಲಿ ಎಲ್ಲರ ಜೊತೆಗೂ ವಿರಾಟ್ ಅಂತಲೇ ಗುರುತಿಸಿಕೊಂಡಿದ್ದರು. 2018ರಲ್ಲಿ ಪರಿಚಯಂ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಅದಾದ ಬಳಿಕ ಸಿನಿಮಾ ಮೂಲಕವೇ ತರುಣ್ ಅವರು ನಟಿ ರನ್ಯಾ ಜೊತೆ ಸ್ನೇಹ ಬೆಳೆಸಿದ್ದರು.

publive-image

DRI ಬಂಧನದ ಬಳಿಕ ಆರೋಪಿ ತರುಣ್ ರಾಜ್ ವಿಚಾರಣೆ ಕೂಡ ಚುರುಕಾಗಿದೆ. ಆದರೆ ತರುಣ್ ತನಿಖೆಯಲ್ಲಿ ಮಾತ್ರ ಯಾವುದೇ ಮಾಹಿತಿ ಬಾಯ್ಬಿಡುತ್ತಿಲ್ಲ. ಹೀಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತರುಣ್ ರಾಜ್‌ ಅವರ​ ಬ್ಯಾಂಕ್‌ ಅಕೌಂಟ್​ ಡಿಟೇಲ್ಸ್‌ಗಳ​ ಬೆನ್ನು ಬಿದ್ದಿದೆ.

ಇದನ್ನೂ ಓದಿ: ರನ್ಯಾ ರಾವ್​​ಗೆ ಮತ್ತೊಂದು ಬಿಗ್ ಶಾಕ್.. ಕಾನೂನು ಕುಣಿಕೆ ಮತ್ತಷ್ಟು ಬಿಗಿ..! 

ತರುಣ್ ರಾಜ್ ಅಕೌಂಟ್‌ನಿಂದ ಯಾರಿಗೆ ಹಣ ಹೋಗಿದೆ? ಯಾಱರಿಂದ ಹಣ ಬಂದಿದೆ? ತರುಣ್ ರಾಜ್ ಜೊತೆಯಲ್ಲಿ ಯಾಱರಿಗೆ ವ್ಯವಹಾರ ಇತ್ತು? ತರುಣ್​ಗೆ ಯಾವುದಾದ್ರೂ ಜ್ಯೂವೆಲ್ಲರಿ ಶಾಪ್​ಗಳ ನಂಟಿದ್ಯಾ? ಈ ಎಲ್ಲದರ ಮಾಹಿತಿಯನ್ನು DRI ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment