/newsfirstlive-kannada/media/post_attachments/wp-content/uploads/2024/09/TEAM_INDIA.jpg)
ಸದ್ಯ ಬಿಸಿಸಿಐ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಬಿಸಿಸಿಐ ಬಿಗ್ಬಾಸ್ಗಳು, ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ್ರಂತೆ. ಈ ಸರಣಿ ನಂತರ ಯಾರು ತಂಡದಲ್ಲಿ ಇರೋಕೆ ಇಷ್ಟ ಪಡ್ತೀರೋ, ಅವ್ರು ಪರ್ಫಾಮ್ ಮಾಡಲೇಬೇಕು. ಇಲ್ದಿದ್ರೆ ನಾವು ಕಳುಹಿಸೋಕೂ ಮುಂಚೆ ಅವರೇ ತಂಡದಿಂದ ಜಾಗ ಕಾಲಿಮಾಡಬೇಕು ಅಂತ ನೇರವಾಗಿ ಹೇಳಿದ್ರಂತೆ.
ಅಶ್ವಿನ್ ಉತ್ತರಾಧಿಕಾರಿ ಯಾರು?
ಈ ಎಲ್ಲಾ ಬೆಳವಣಿಗಳ ಮಧ್ಯೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಶ್ವಿನ್, ಪರ್ತ್ ಟೆಸ್ಟ್ ತಂಡದಿಂದ ಡ್ರಾಪ್ ಆಗಿದ್ರು. ಅಡಿಲೇಡ್ ಟೆಸ್ಟ್ನಲ್ಲಿ ತಂಡದಲ್ಲಿ ಇದ್ರೂ, ಇಲ್ಲದಂತಾಗಿದ್ರು. ಸದ್ಯ ಟೀಮ್ ಮ್ಯಾನೇಜ್ಮೆಂಟ್, ಅಶ್ವಿನ್ ಬಿಟ್ಟು ಮುಂದೆ ಸಾಗಿದೆ. ಅಶ್ವಿನ್ ಉತ್ತರಾಧಿಕಾರಿಯಾಗಿ ವಾಶಿಂಗ್ಟನ್ ಸುಂದರ್ ಅವರನ್ನ ನೋಡ್ತಿದೆ. ಇದನ್ನೆಲ್ಲಾ ಗಮನಿಸಿರೋ ಅಶ್ವಿನ್, ಯಾರೋ ಹೇಳೋಕೆ ಮುಂಚೆ ನಾನೇ ತಂಡದಿಂದ ದೂರ ಹೋಗ್ತೀನಿ ಅಂತ, ಸೂಕ್ತ ಸಮಯದಲ್ಲಿ ಒಳ್ಳೆ ನಿರ್ಧಾರವನ್ನೇ ಕೈಗೊಂಡಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ ದಿಢೀರ್ ನಿವೃತ್ತಿಯ ಹಿಂದೆ, ಸಾಕಷ್ಟು ಅಂತೆ ಕಂತೆಗಳು ಕೇಳಿ ಬರ್ತಿವೆ. ಅಶ್ವಿನ್ ಅವರ ಇಷ್ಟದಂತೆ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ರಾ ಅಥವಾ ಬಲವಂತದಿಂದ ಕ್ರಿಕೆಟ್ಗೆ ವಿದಾಯ ಘೋಷಿಸಿದ್ರಾ? ಈ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಟೀಮ್ ಇಂಡಿಯಾ ಆಟಗಾರರು, ಸದ್ಯ ಸೋಲಿನಿಂದ ಬಚಾವ್ ಆದ್ವಿ ಅಂತ ಖುಷಿಯಲ್ಲಿರ್ತಾರೆ. ಆದ್ರೆ ಇದಕ್ಕಿದಂತೆ ಅಶ್ವಿನ್, ಸಹ ಆಟಗಾರರಿಗೆ ಸ್ಪೋಟಕ ಸುದ್ದಿಯೊಂದನ್ನ ಹೇಳ್ತಾರೆ. ಅದು ತಮ್ಮ ರಿಟೈರ್ಮೆಂಟ್ ಪ್ಲಾನ್! ಡ್ರೆಸಿಂಗ್ ರೂಮ್ನಲ್ಲಿದ್ದ ಆಟಗಾರರು, ಈ ಸುದ್ದಿಯನ್ನ ಕೇಳಿ ಶಾಕ್ ಆಗ್ತಾರೆ. ಏನ್ ಮಾಡಬೇಕು ಅಂತ ತೋಚದ ಆಟಗಾರರು, ಅಶ್ವಿನ್ ಅವರನ್ನ ತಬ್ಬಿಕೊಂಡು ಭಾವುಕರಾಗ್ತಾರೆ. ಆದ್ರೆ ಎಲ್ಲವೂ ಇಲ್ಲಿಗೆ ಮುಗಿಯೋದಿಲ್ಲ!
ಇದನ್ನೂ ಓದಿ: ನಟ ದರ್ಶನ್ಗೆ ಸರ್ಜರಿ ಏಕೆ ಮಾಡಲಿಲ್ಲ? ಆಸ್ಪತ್ರೆಯಿಂದ ನೇರ ಹೋಗಿದ್ದು ಎಲ್ಲಿಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ