ನಿಜಕ್ಕೂ ಚಹಾಲ್ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ರಾ? ಅಷ್ಟಕ್ಕೂ ಈ ಚೆಲುವೆ ಯಾರು?

author-image
Ganesh
Updated On
ನಿಜಕ್ಕೂ ಚಹಾಲ್ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ರಾ? ಅಷ್ಟಕ್ಕೂ ಈ ಚೆಲುವೆ ಯಾರು?
Advertisment
  • ಮಿಸ್ಟ್ರಿ ಬೆಡಗಿ ಜೊತೆಗೆ ಕಾಣಿಸಿಕೊಂಡ ಸ್ಪಿನ್ನರ್​ ಚಹಲ್
  • ಚಹಲ್‌ ಜೊತೆ ಕಾಣಿಸ್ಕೊಂಡ ನಿಗೂಢ ಹುಡುಗಿ ಯಾರು?
  • ಯಾರಿವಳು.? ಯಾರಿವಳು.? ಫ್ಯಾನ್ಸ್​ ಹುಡುಕಾಟ ಜೋರು

ದುಬೈನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಪಿಯ ಫೈನಲ್‌ ಪಂದ್ಯವನ್ನ ಕ್ರಿಕೆಟ್​​​ ಪ್ರೇಮಿಗಳು ಉಸಿರು ಬಿಗಿ ಹಿಡಿದು ನೋಡಿದರು. ಟೀಮ್​ ಇಂಡಿಯಾ ಕಪ್​ ಗೆಲ್ತಿದ್ದಂತೆ ಸಂಭ್ರಮಿಸಿದರು. ಆ ಸಂಭ್ರಮಾಚರಣೆ ಇನ್ನೂ ನಿಂತಿಲ್ಲ. ಈ ಗೆಲುವು, ಈ ಸಂಭ್ರಮ ಎಲ್ಲದರ ನಡುವೆ ಕ್ರಿಕೆಟ್​ ಪ್ರೇಮಿಗಳ ಗಮನ ಸೆಳೆದಿದ್ದಾರೆ ಸ್ಪಿನ್ನರ್​ ಯುಜುವೇಂದ್ರ ಚಹಲ್​!

ಸೂಪರ್​ ಸಂಡೇ ನಡೆದ ಬ್ಲಾಕ್​​ ಬಸ್ಟರ್​​ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯವನ್ನ ಇಡೀ ಕ್ರಿಕೆಟ್​ ಜಗತ್ತು ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತು. ಕುತೂಹಲದಿಂದ ಪಂದ್ಯ ನೋಡ್ತಿದ್ದ ಫ್ಯಾನ್ಸ್​ ಕಣ್ಣಿಗೆ ಯುಜುವೇಂದ್ರ ಚಹಲ್​ ಬಿದ್ರು. ಸ್ಪಿನ್ನರ್​ ಚಹಲ್​ ಒಬ್ರೆ ಕಂಡಿದ್ರೆ ಅದೇನು ವಿಷ್ಯ ಆಗ್ತಿರಲಿಲ್ಲ. ಚಹಲ್​ ಪಕ್ಕ ಒಬ್ರು ಮಾದಕ ಸುಂದರಿ ಇದ್ಲು. ಆಕೆ, ಆ ನಗು, ಆ ಆತ್ಮೀಯತೆ, ಆ ವಿಡಿಯೋ ಸದ್ಯ ಹಾಟ್​ ಟಾಪಿಕ್.

ಇದನ್ನೂ ಓದಿ: ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಧನಶ್ರೀ ವರ್ಮಾ; ಚಹಾಲ್ ಜೊತೆಗಿನ ಕ್ಷಣಗಳು ರಿಸ್ಟೋರ್​..!

publive-image

ಮಿಸ್ಟ್ರಿ ಬೆಡಗಿ ಜೊತೆ ಚಹಲ್

ಚಾಂಪಿಯನ್ಸ್​ ಟ್ರೋಫಿ ಟೀಮ್​ನಲ್ಲಿ ಚಹಲ್​ ಇರಲಿಲ್ಲ. ಟೀಮ್​ ಇಂಡಿಯಾಗೆ ಸಪೋರ್ಟ್​ ಮಾಡೋಕೆ ಚಹಲ್​ ಬಂದಿದ್ರು. ಗ್ಯಾಲರಿಯಲ್ಲಿ ಕುಳಿತಿದ್ದ ಚಹಲ್​ ತಮ್ಮ ಸ್ಮೇಹಿತರ ಜೊತೆ ಅಥವಾ ಮಾಜಿ ಕ್ರಿಕೆಟರ್ಸ್​ ಜೊತೆ ಕಾಣಿಸ್ಕೊಂಡಿದ್ರೆ ವಿಶೇಷ​ ಇರಲಿಲ್ಲ. ಚಹಲ್​ ಪಕ್ಕದಲ್ಲಿದ್ದಿದ್ದು ನಿಗೂಢ ಚೆಲುವೆ. ನೋಡೋದಕ್ಕೆ ಅಂದವಾಗಿ ಚೆಂದವಾಗಿ ಹುಡ್ಗಿ ಜೊತೆ ಚಹಲ್‌ ಮ್ಯಾಚ್‌ ನೋಡಿದ್ದಾರೆ. ಇದ್ರ ನಡುವೆ ಇಬ್ಬರೂ ತಮಾಷೆ ಮಾಡುತ್ತ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ.

ಬೆನ್ನಲ್ಲೇ ಈ ಜೋಡಿ ವೈರಲ್ ಆಗಿದೆ. ಯಾರಿವಳು ಅಂತಾ ಹುಡುಕಾಟ ಕೂಡ ನಡೀತು. ಸರ್ಚ್​ ಮಾಡಿದಾಗ ಸಿಕ್ಕ ಉತ್ತರ ಆರ್.ಜೆ ಮಹ್ವಾಶ್. ಆರ್​.ಜೆ ಮಹ್ವಾಶ್​. ಫುಲ್​ ನೇಮ್​ ಮಹ್ವಾಶ್ ಅಮು ಅಂತಾ. 28 ​​ವರ್ಷದ ಈಕೆ ಉತ್ತರ ಪ್ರದೇಶದ ಅಲಿಗಢ ಮೂಲದವರು. ದೆಹಲಿಯಲ್ಲಿ ರೇಡಿಯೋ ಜಾಕಿಯಾಗಿದ್ದಾರೆ.

ಇದನ್ನೂ ಓದಿನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!

publive-image

ಲೇಖಕಿ, ನಿರೂಪಕಿ ಅಂತೆಲ್ಲಾ ಗುರುತಿಸಿಕೊಂಡಿದ್ದಾರೆ. ಇಸ್ಲಾಂ ಧರ್ಮಕ್ಕೆ ಸೇರಿದ ಇವರು ದೆಹಲಿಯ ಮಹಿಳಾ ಕಾಲೇಜು, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ತಮ್ಮ ಬೋಲ್ಡ್​ ಮತ್ತು ಬೋಲ್ಡ್​ ಅನ್ನೋ ಕಾರ್ಯಕ್ರಮದ ಮೂಲಕ ಫೇಮಸ್​​ ಆದ ಇವ್ರಿಗೆ ಸೋಷಿಯಲ್​ ಮೀಡಿಯಾದಲ್ಲಿ ಮಿಲಿಯನ್​ಗಟ್ಟಲೇ ಫಾಲೋವರ್ಸ್​ ಇದ್ದಾರೆ.

publive-image

ಅಂದ್ಹಾಗೆ ಇದೇನು ಹೊಸ ಪರಿಚಯ ಅಲ್ಲ. ಚಹಲ್​ಗಿದು ಹಳೇ ಪರಿಚಯ. ಚಹಲ್‌ಗೂ, ಧನ್ಯಶ್ರೀ ಒಟ್ಟಿಗೆ ಇದ್ದಾಗಲೇ ಫ್ರೆಂಡ್‌ ಆಗಿ ಆರ್‌.ಜೆ.ಮಹ್ವಾಶ್‌ ಸಿಕ್ಕಿದ್ದಳು. ಅದಕ್ಕೆ ಸಾಕ್ಷಿ ಹಳೆಯ ಫೋಟೋ. 2024 ಡಿಸೆಂಬರ್‌ನಲ್ಲಿ ನಡೆದ ಕ್ರಿಸ್‌ಮಸ್‌ ಅನ್ನ ಚಹಲ್‌ ಮತ್ತು ಮಹ್ವಾಶ್‌ ಸೆಲೆಬ್ರೆಷನ್‌ ಮಾಡಿದ್ರು. ಈ ಫೋಟೋಗಳನ್ನ ಆಕೆ ತನ್ನ ಇನ್‌ಸ್ಟಾ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದಳು. ಹೀಗಾಗಿಯೇ ಚಹಲ್‌ ಬಾಳಲ್ಲಿ ಈ ಹೊಸ ಹುಡುಗಿ ಡಿವೋರ್ಸ್‌ಗೂ ಮುನ್ನವೇ ಬಂದಿದ್ದಳು ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಒಂಟಿಯಾಗಿದ್ದ ಚಹಲ್​ ಮತ್ತೆ ಜಂಟಿಯಾಗ್ತಿದ್ದಾರೆ ಅನ್ನೋ ಸುದ್ದಿ ಕ್ರಿಕೆಟ್​ ಲೋಕದಲ್ಲಿ ಬಿರುಗಾಳಿಯಂತೆ ಹಬ್ಬಿದೆ.

ಇದನ್ನೂ ಓದಿ: ಅಭಿಮಾನಿಗಳ ಆತಂಕ ದೂರ ಮಾಡಿದ ಜೋಡೆತ್ತು; ಟಾರ್ಗೆಟ್​ ಫಿಕ್ಸ್.. ಕೊಹ್ಲಿ, ರೋಹಿತ್ ಗುಡ್​ನ್ಯೂಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment