UPSC ಟಾಪರ್​ ಶಕ್ತಿ ದುಬೆ ಯಾರು.. ಇವರ ವಿದ್ಯಾಭ್ಯಾಸ ಹೇಗಿತ್ತು? ಸಾಧನೆಯ ಗುಟ್ಟೇನು?

author-image
Bheemappa
Updated On
UPSC ಟಾಪರ್​ ಶಕ್ತಿ ದುಬೆ ಯಾರು.. ಇವರ ವಿದ್ಯಾಭ್ಯಾಸ ಹೇಗಿತ್ತು? ಸಾಧನೆಯ ಗುಟ್ಟೇನು?
Advertisment
  • ಇಡೀ ದೇಶದಲ್ಲೇ ನಂಬರ್- 1 ಸ್ಥಾನ ಪಡೆದಿರುವ ದುಬೆ ಎಲ್ಲಿಯವರು?
  • 2024ನೇ ಸಾಲಿನ ನಾಗರೀಕ ಸೇವೆಗಳ ಪರೀಕ್ಷೆಯ ಫಲಿತಾಂಶ ರಿಲೀಸ್
  • ಶಕ್ತಿ ದುಬೆ ತಮ್ಮ ಉನ್ನತ ವಿದ್ಯಾಭ್ಯಾಸವನ್ನ ಎಲ್ಲಿ ಪೂರ್ಣಗೊಳಿಸಿದ್ದಾರೆ?

ನವದೆಹಲಿ: ಬಹುನಿರೀಕ್ಷಿತ 2024ನೇ ಸಾಲಿನ ನಾಗರೀಕ ಸೇವೆಗಳ ಪರೀಕ್ಷೆ (ಸಿಎಸ್​​ಇ) ಅಂತಿಮ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಇಂದು ಬಿಡುಗಡೆ ಮಾಡಿದೆ. ಇಡೀ ದೇಶದಲ್ಲೇ ಶಕ್ತಿ ದುಬೆ ಅವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಯುಪಿಎಸ್​ಸಿಯಲ್ಲಿ ಶಕ್ತಿ ದುಬೆ ಅವರು ಇಡೀ ದೇಶಕ್ಕೆ ನಂಬರ್-1 ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಂತಸ, ಸಂಭ್ರಮ ಏರ್ಪಟ್ಟಿದೆ. ಇದರ ಜೊತೆ ಶಕ್ತಿ ದುಬೆ ಯಾರು ಎಂದು ತಿಳಿಯುವುದಾದರೆ..

ಶಕ್ತಿ ದುಬೆ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯವರು ಆಗಿದ್ದಾರೆ. ಇವರು ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಗಿದ್ದಾರೆ ಎನ್ನುವುದು ವಿಶೇಷ. ಬಾಲ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಎಲ್ಲಾ ಪ್ರಯಾಗ್‌ರಾಜ್​ನಲ್ಲಿ ಓದಿದ್ದಾರೆ. ಬಳಿಕ ಉನ್ನತ ವ್ಯಾಸಂಗವನ್ನು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಬನರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

2018ರಲ್ಲಿ ದುಬೆ ಅವರ ಸ್ನಾತಕೋತ್ತರ ಪದವಿ ಮುಗಿದ ಮೇಲೆ ಯುಪಿಎಸ್​​ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸಿದರು. ಇತರೆ ಪರೀಕ್ಷೆಗಳಿಗೆ ತಲೆಕೆಡಿಸಿಕೊಳ್ಳದೇ, ದೇಶದ ಉನ್ನತ ಪರೀಕ್ಷೆ ಆಗಿರುವ ನಾಗರೀಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಹತ್ತರ ಸ್ಥಾನ ಪಡೆಯಬೇಕು ಎನ್ನುವುದು ಶಕ್ತಿ ದುಬೆ ಅವರ ಮಹಾದಾಸೆ ಆಗಿತ್ತು. ಅದರಂತೆ ಕೆಲ ವರ್ಷಗಳ ಸತತ ಪರಿಶ್ರಮದಿಂದ ಇಂದು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಈ ಏರಿಯಾ ಇನ್ವೆಸ್ಟ್​​ಮೆಂಟ್​ಗೆ ಬೆಸ್ಟ್​.. ಮನೆ, ಅಪಾರ್ಟ್​ಮೆಂಟ್ ನಿರ್ಮಾಣಕ್ಕೆ ಒಳ್ಳೆ ಜಾಗ!

publive-image

ಶಕ್ತಿ ದುಬೆ ಅವರು 2018 ರಿಂದ 2024ರ ವರೆಗೆ ಅಂದರೆ ಸತತ ಆರು ವರ್ಷಗಳ ಕಾಲ ಯುಪಿಎಸ್​​ಸಿ ಪರೀಕ್ಷೆಗಾಗಿ ಓದಿದ್ದಾರೆ. ಪರೀಕ್ಷೆಗಳು ಹತ್ತಿರ ಬಂದಂತೆ ತಮ್ಮ ವಿದ್ಯಾಭ್ಯಾಸವನ್ನು ಇನ್ನಷ್ಟು ಹೆಚ್ಚು ಹೆಚ್ಚು ಮಾಡಿದ್ದಾರೆ. ಇದರಿಂದಾಗಿ ಇಂದು ಇಡೀ ದೇಶದಲ್ಲೇ ನಂಬರ್- 1 ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್​ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಹಾಗೂ ಇತರ ಕೇಂದ್ರ ಸೇವೆಗಳಾದ ಗ್ರೂಪ್ ಎ ಹಾಗೂ B ಸೇರಿದಂತೆ ಈ ಮಹತ್ತದ ಹುದ್ದೆಗಳಿಗೆ ಒಟ್ಟು 1,009 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಐಎಎಸ್​ಗಾಗಿ ಲಾಲ್ ಬಹುದ್ದೂರು ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್, ಐಪಿಎಸ್​ಗಾಗಿ ಸರ್ದಾರ್ ವಲ್ಲಭಾಯ್ ಪಟೇಲ್ ನ್ಯಾಷನಲ್​ ಪೊಲೀಸ್ ಅಕಾಡೆಮಿ ಸೇರಿದಂತೆ ಇನ್ನುಳಿದ ಸೇವೆಗಳಿಗೆ ತಕ್ಕಂತೆ ಆಯಾ ಸಂಬಂಧಪಟ್ಟ ಅಕಾಡೆಮಿಯಲ್ಲಿ ಭಾರತ ಸರ್ಕಾರದಿಂದ ತರಬೇತಿ ಪಡೆಯಲಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment