2023ರ ಜನವರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ತೊರೆದ ಜೋಸೆಫ್
ತಂಡದ ನೆಟ್ ಬೌಲರ್ ಆಗಿ ಸೇರಿಕೊಂಡ ಜೋಸೆಫ್ ಜೀವನಕ್ಕೆ ಟ್ವಿಸ್ಟ್
ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲೇ ಡೆಬ್ಯೂ ಮಾಡಿ ಸೆನ್ಸೇಷನ್
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋತು ಸುಣ್ಣಾವಾಗಿದೆ. ಆದ್ರೆ, ವೆಸ್ಟ್ ಇಂಡೀಸ್ ತಂಡದ ಓರ್ವ ಆಟಗಾರ ಮಾತ್ರ, ವಿಶ್ವ ಕ್ರಿಕೆಟ್‌ನ ಹಾಟ್ ಟಾಪಿಕ್ ಆಗಿದ್ದಾರೆ. ಅದ್ಯಾರು, ಅದಕ್ಕೆ ಕಾರಣ ಏನು?.
ವೆಸ್ಟ್ ಇಂಡೀಸ್.. ವಿಶ್ವ ಕ್ರಿಕೆಟ್ ದೈತ್ಯ ತಂಡ.. ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ ಲೋಕವನ್ನಾಳಿದ ವೆಸ್ಟ್ ಇಂಡೀಸ್ ಭಯಾನಕ ಬ್ಯಾಟಿಂಗ್ನಿಂದ ಮಾತ್ರವೇ ಅಲ್ಲ. ಕರ್ಟ್ನಿ ವಾಲ್ಷ್, ಕರ್ಟ್ಲಿ ಆಂಬ್ರೋಸ್, ಮೈಕೆಲ್ ಹೋಲ್ಡಿಂಗ್ರಂಥ ಭಯಾನಕ ವೇಗಿಗಳನ್ನ ವಿಶ್ವ ಕ್ರಿಕೆಟ್ಗೆ ಪರಿಚಯಿಸಿದ ತಂಡ. ಆದ್ರೆ, ಕಾಲ ಬದಲಾದಂತೆ ಪತನದತ್ತ ಸಾಗಿದ ವೆಸ್ಟ್ ಇಂಡೀಸ್, ಶ್ರೇಷ್ಠ ಬೌಲರ್ಗಳನ್ನ ನೋಡಿ ವರ್ಷಗಳೇ ಕಳೆದಿವೆ. ಇಂಥಹ ಅಧಃಪತನದಲ್ಲಿದ್ದ ವಿಂಡೀಸ್ ತಂಡದಲ್ಲೀಗ ನಯಾ ಪೇಸ್ ಸೆನ್ಸೇಷನ್ ಹುಟ್ಟಿಕೊಂಡಿದ್ದಾರೆ. ಆತನೇ 24 ವರ್ಷದ ಶಮಾರ್ ಜೋಸೆಫ್.
ವೆಸ್ಟ್ ಇಂಡೀಸ್ ಟೀಮ್ನ ಬೌಲಿಂಗ್ ಸೆನ್ಸೇಷನ್ ಶಮಾರ್
ಶಮಾರ್ ಜೋಸೆಫ್ ವೆಸ್ಟ್ ಇಂಡೀಸ್ ತಂಡದ ಹೊಸ ಬೌಲಿಂಗ್ ಸೆನ್ಸೇಷನ್. ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಡೆಬ್ಯೂ ಮಾಡಿದ ಈತ, ಡೆಬ್ಯೂ ಮ್ಯಾಚ್ನಲ್ಲೇ ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ರಂಥ ಬ್ಯಾಟ್ಸ್ಮನ್ಗಳ ವಿಕೆಟ್ ಪಡೆದು ವಿಶ್ವದ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, 11ನೇ ಕ್ರಮಾಂಕದಲ್ಲಿ ಸ್ಫೋಟಕ 36 ರನ್ ಸಿಡಿಸಿ ಸಂಚಲನವನ್ನೇ ಹುಟ್ಟಿಹಾಕಿದ್ದಾರೆ. ಆದ್ರೆ, ಈ ಭರವಸೆ ತಾರೆ ಸಕ್ಸಸ್ ಹಿಂದೆ, ರಣರೋಚಕ ಕಥೆ ಇದೆ. ಅಚ್ಚರಿ ಮೂಡಿಸುವ ಸಂಗತಿಗಳು ಇವೆ.
ಕುಗ್ರಾಮದ ಈತ ಕ್ರಿಕೆಟರ್ ಆಗಿದ್ದೆ ರೋಚಕ!
ಶಾಮರ್ ಜೋಸೆಫ್ ಮೂಲತಃ ಗಯಾನಾದ ಬರಕಾರ ಎಂಬ ಕುಗ್ರಾಮದ ನಿವಾಸಿ. ಸರಿಯಾದ ರಸ್ತೆ, ನೀರು, ಮೂಲ ಸೌಕರ್ಯವೂ ಹೊಂದಿರದ ಈ ಗ್ರಾಮದಿಂದ ದೋಣಿಯಲ್ಲಿ ಪಟ್ಟಣಕ್ಕೆ ಬರಲು ಬರೋಬ್ಬರಿ 2 ದಿನಗಳಾಗುತ್ತೆ. 2018ರ ತನಕ ಇಂಟರ್ನೆಂಟ್ ಸೌಲಭ್ಯವೂ ಹೊಂದಿರದ ಕುಗ್ರಾಮದಲ್ಲಿ ಜನಿಸಿದ್ದ ಜೋಸೆಫ್ಗೆ ಕ್ರಿಕೆಟರ್ ಆಡಬೇಕೆಂಬ ಬಯಕೆ ಹೊಂದಿದ್ದ ಈತ, ಬಾಲ್ಯದಲ್ಲಿ ಕ್ರಿಕೆಟ್ ಆಡುತ್ತಿದ್ದಿದ್ದ ಟೇಪ್ ಬಾಲ್, ನಿಂಬೆ ಹಣ್ಣಿನಿಂದ ಅನ್ನೋದು ನಿಜಕ್ಕೂ ಅಚ್ಚರಿಯ ಸಂಗತಿ
ಜೀವನ ಸಾಗಿಸಲು ಸೆಕ್ಯುರಿಟಿ ಗಾರ್ಡ್ ಕೆಲಸ..!
ಬಡತನದಲ್ಲಿ ಹುಟ್ಟಿದ್ದ ಶಾಮರ್ ಜೋಸೆಫ್, ಕುಟುಂಬದ ಜೀವನ ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡಿದ್ದ ಕೆಲಸ ಸೆಕ್ಯೂರಿಟಿ ಗಾರ್ಡ್.. ಕೆಲಸದ ಜೊತೆ ಜೊತೆಗೆ ಸ್ಥಳೀಯ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ಈತ, ಅಲ್ಲೇ ಅಭ್ಯಾಸ ನಡೆಸುತ್ತಿದ್ದರು. ಆದ್ರೆ, ಇಂಥಹ ಕಡುಕಷ್ಟದಲ್ಲಿದ್ದ ಶಾಮರ್ ಜೀವನ ಬದಲಿಸಿದ್ದು ಮಾತ್ರ ಒಂದೇ ಒಂದು ನಿರ್ಧಾರ. ಅದೇ ಕಳೆದ ವರ್ಷ ಸೆಕ್ಯುರಿಟಿ ಗಾರ್ಡ್ ಕೆಲಸ ತೊರೆಯವುದು.
ಕೆಲಸ ಬಿಟ್ಟು ಕ್ರಿಕೆಟ್ನಲ್ಲಿ ಮಘ್ನನಾದ ಜೋಸೆಫ್
2023ರ ಜನವರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ತೊರೆಯುವ ಜೋಸೆಫ್. ಅಂದಿನಿಂದ ಸಂಪೂರ್ಣ ಕ್ರಿಕೆಟ್ನಲ್ಲಿ ಮಗ್ನರಾಗ್ತಾರೆ. ಇದಕ್ಕೆ ತಕ್ಕ ಪ್ರತಿಫಲದಂತೆ ಕಳೆದ ಫೆಬ್ರವರಿಯಲ್ಲಿ ಗಯಾನ ಪರ ಮೊದಲ ಪ್ರಥಮ ದರ್ಜೆ ಪಂದ್ಯವನ್ನಾಡಿದ ಜೋಸೆಫ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಗಯಾನ ಅಮೆಜಾನ್ ವಾರಿಯರ್ಸ್ ತಂಡದ ನೆಟ್ ಬೌಲರ್ ಆಗಿ ಸೇರಿಕೊಳ್ಳುತ್ತಾರೆ. ಇದೇ ಜೋಸೆಫ್ ಜೀವನಕ್ಕೆ ಟ್ವಿಸ್ಟ್ ನೀಡುತ್ತೆ.
Shamar Joseph dismissed Steven Smith on the first ball of his Test career.
– What a start by Shamar…!!! pic.twitter.com/ScCKm3lVXs
— Mufaddal Vohra (@mufaddal_vohra) January 17, 2024
ಪೊವೆಲ್ ಇಂಜುರಿಯಿಂದ ತಂಡದಲ್ಲಿ ಸ್ಥಾನ ಪಡೆದ ಜೋಸೆಫ್ಗೆ ಸೌತ್ ಆಫ್ರಿಕಾ ಎ ಪ್ರವಾಸ ವೃತ್ತಿ ಜೀವನಕ್ಕೆ ತಿರುವು ನೀಡುತ್ತೆ. ವಿಂಡೀಸ್ ಎ ತಂಡದ ಪರ ಗರಿಷ್ಠ ವಿಕೆಟ್ ಬೇಟೆಯಾಡುವ ಜೋಸೆಫ್ಗೆ, ರಾಷ್ಟ್ರೀಯ ತಂಡದ ಬಾಗಿಲು ತೆರೆಯುತ್ತೆ. ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲೇ ಡೆಬ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಡೇರಿಂಗ್ ಡಿಸಿಷನ್ ಮೂಲಕ ಕೆಲಸ ತೊರೆದ ಶಮಾರ್ ಜೋಸೆಫ್ಗೆ, ಈಗ ತಕ್ಕ ಫಲತಾಂಶ ಸಿಕ್ಕಿದೆ. ಹಲವು ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯ ಕಥೆಯೂ ಆಗಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ