BBMP ಕಸದ ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು.. ಮೃತ ಶಿಲ್ಪಾ ಯಾರು..?

author-image
Ganesh
Updated On
BBMP ಕಸದ ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು.. ಮೃತ ಶಿಲ್ಪಾ ಯಾರು..?
Advertisment
  • ರಾತ್ರಿ ಊಟ ಮಾಡಿ ಮುಗಿಸಿ ಬರ್ತಿದ್ದಾಗ ದುರ್ಘಟನೆ
  • 10 ಮೀಟರ್ ದೂರ ಹೋಗಿ ಬಿದ್ದಿದ್ದ ದೇಹಗಳು
  • ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿನ್ನೆ ರಾತ್ರಿ ಬೆಂಗಳೂರಿನ ಕೆಆರ್​ ಸರ್ಕಲ್​​ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕ-ಯುವತಿ ಸಾವನ್ನಪ್ಪಿದ್ದಾರೆ. ಪ್ರಶಾಂತ್ (25), ಶಿಲ್ಪ (25) ಮೃತ ದುರ್ದೈವಿಗಳು.

ರಾತ್ರಿ 9 ಗಂಟೆ ಊಟ ಮುಗಿಸಿಕೊಂಡು ಬೈಕ್​​ನಲ್ಲಿ ಹೋಗ್ತಿದ್ದಾಗ ಬಿಬಿಎಂಪಿಯ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಿಬ್ಬರು ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐಟಿಪಿಎಲ್ ಟಿಸಿಎಸ್​ನಲ್ಲಿ ಕೆಲಸ ಮಾಡ್ತಿದ್ದರು. ಇನ್ನು, ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿ ನಿವಾಸಿ ಎಂದು ತಿಳಿದುಬಂದಿದೆ. ಈತನ ಸ್ನೇಹಿತೆ ಶಿಲ್ಪಾ ಆಂಧ್ರ ಪ್ರದೇಶದವಳು. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಶಿಲ್ಪಾ ಪಿಜಿ ಒಂದರಲ್ಲಿ ವಾಸವಿದ್ದಳು.

ಇದನ್ನೂ ಓದಿ:‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ

publive-image

ನಿನ್ನೆ ಭಾನುವಾರ ರಜೆ ಹಿನ್ನೆಲೆಯಲ್ಲಿ ಸಂಜೆ ಸ್ನೇಹಿತನ ಜೊತೆ ಊಟಕ್ಕೆ ಎಂದು ಹೋಗಿದ್ದಳು. ರಾತ್ರಿಯ ಊಟ ಮುಗಿಸಿ ಮೆಜೆಸ್ಟಿಕ್​​ನಿಂದ ಕೆ.ಆರ್.ಸರ್ಕಲ್ ಮಾರ್ಗವಾಗಿ ಬೈಕ್​ನಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್.ಸರ್ಕಲ್ ಕಡೆ ವೇಗವಾಗಿ ಬಂದ ಕಸದ ಲಾರಿ, ಬೈಕ್​ಗೆ ಗುದ್ದಿದೆ. ಅಪಘಾತದ ರಭಸಕ್ಕೆ 10 ಮೀಟರ್ ನಷ್ಟು ದೂರ ಮೃತರ ದೇಹಗಳು ಹೋಗಿ ಬಿದ್ದಿವೆ.

publive-image

ಪರಿಣಾಮ ರಸ್ತೆ ಮೇಲೆ ರಕ್ತ ಚೆಲ್ಲಿದೆ. ಕೂಡಲೇ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿತ್ತು, ಆದರೆ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment