/newsfirstlive-kannada/media/post_attachments/wp-content/uploads/2025/06/shubhanshu-shukla-4.jpg)
ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ಮತ್ತಷ್ಟು ಎತ್ತರಕ್ಕೆ ಹೋಗ್ತಿದೆ. ಇಂದು ಮಧ್ಯಾಹ್ನ 12 ಗಂಟೆ ಒಂದು ನಿಮಿಷಕ್ಕೆ ಸರಿಯಾಗಿ ಭಾರತದ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಌಕ್ಸಿಯೋಂ ನೌಕೆ (Axiom Mission 4)ಯನ್ನು ಹೊತ್ತು Falcon-9 rocket ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ನೌಕೆಯಲ್ಲಿ ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಇದ್ದಾರೆ. ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪು ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: ಈ ಸರ್ಕಾರಿ ಶಾಲೆಯಲ್ಲಿ ದಾಖಲೆ.. ಎಸ್ಸಿ, ಎಸ್ಟಿಗೆ ಸೇರಿದ 12 ವಿದ್ಯಾರ್ಥಿನಿಯರು NEET ಪರೀಕ್ಷೆ ಪಾಸ್..!
ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.
ಯಾರು ಶುಭಾಂಶು ಶುಕ್ಲಾ..?
- ಲಖನೌನ ಸಾಮಾನ್ಯ ಕುಟುಂಬದಿಂದ ಬಂದ ಶುಭಾಂಶು ಶುಕ್ಲಾ
- ಲಖನೌನ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶಿಕ್ಷಣ ಪಡೆದ ಶುಕ್ಲಾ
- ಕಾರ್ಗಿಲ್ ಯುದ್ಧದ ನಂತರ. ಕುಟುಂಬಕ್ಕೆ ತಿಳಿಸದೆ NDA ಪರೀಕ್ಷೆ
- 2005ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc ಪದವಿ ಪಡೆದ ಶುಕ್ಲಾ
- ಬೆಂಗಳೂರಿನ IIScನಿಂದ ಶುಭಾಂಶು ಶುಕ್ಲಾ M.Tech ಪದವಿ
- ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ M.Tech ಪದವಿ
- 2006ರಲ್ಲಿ IAFನಲ್ಲಿ ಕಮಿಷನ್ ಪಡೆದು ಫೈಟರ್ ಪೈಲಟ್ ತರಬೇತಿ
- Su-30 MKI, MiG-21, ಜಾಗ್ವಾರ್ ಹಲವು ವಿಮಾನಗಳಲ್ಲಿ ಹಾರಾಟ
- ಸುಮಾರು 2000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದ್ದಾರೆ
- 2024 ರಲ್ಲಿ ಬಡ್ತಿ ನೀಡಿ ಗ್ರೂಪ್ ಕ್ಯಾಪ್ಟನ್ ಆಗಿ ನೇಮಿಸಲಾಯಿತು
- ರಷ್ಯಾ ಮತ್ತು ಭಾರತದಲ್ಲಿ ಬಾಹ್ಯಾಕಾಶ ತರಬೇತಿ ಪೂರ್ಣ
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಭಾರತ.. ಶುಭಾಂಶು ಶುಕ್ಲಾರಿದ್ದ ನೌಕೆ ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ