/newsfirstlive-kannada/media/post_attachments/wp-content/uploads/2025/02/Karnataka-bundh-SSLC-Exam-2025.jpg)
ಬಂದ್.. ಬಂದ್.. ಬಂದ್.. ಶನಿವಾರ ಅಖಂಡ ಕರ್ನಾಟಕವೇ ಬಂದ್ ಆಗುತ್ತಾ ಇಲ್ವಾ ಎಂಬ ಗೊಂದಲ ಜನರಿಗೆ ಶುರುವಾಗ್ಬಿಟ್ಟಿದೆ. ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಮಾರ್ಚ್ 22ರಂದು ವಾಟಾಳ್ ಕೊಟ್ಟಿರೋ ಬಂದ್ ಕರೆಗೆ ಅಪಸ್ವರ ಕೇಳಿ ಬರ್ತಿದೆ. ಹಿರಿಯ ಕನ್ನಡ ಹೋರಾಟಗಾರರು ಕೊಟ್ಟ ಬಂದ್‌ಗೆ ಬೆಂಬಲ ಕೊಡ್ಬೇಕಾ ಬೇಡ್ವಾ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ.
ಮಾ.22ರ ಕರ್ನಾಟಕ ಬಂದ್ ಬಗ್ಗೆ ಮುಂದುವರಿದ ಗೊಂದಲ
ಇನ್ನೂ ಹಲವು ಸಂಘಟನೆಗಳಿಂದ ಬಂದ್‌ಗೆ ಸಿಕ್ಕಿಲ್ಲ ಬೆಂಬಲ
ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ.. ಕನ್ನಡಿಗರ ಮೇಲಿನ ದಬ್ಬಾಳಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ಮಾರ್ಚ್ 22 ಬಂದ್ ಬಂದ್ ಅಂತಾ ಘೋಷಣೆ ಮಾಡಿದ್ದಾರೆ. ಆದ್ರೆ, ನಿಜವಾಗ್ಲೂ ಶನಿವಾರ್ ಕರ್ನಾಟಕ ಬಂದ್ ಆಗುತ್ತಾ ಎಂಬ ಗೊಂದಲ ಮುಂದುವರೆದಿದೆ. ಯಾಕಂದ್ರೆ ಕರುನಾಡು ಬಂದ್ ಮಾಡ್ತೀವಿ ಅಂತಾ ವಾಟಾಳ್ ನಾಗರಾಜ್ ಅಂಡ್ ಟೀಂ ಹೇಳಿದ್ರೂ ಹಲವು ಸಂಘಟನೆಗಳು ಬಂದ್‌ಗೆ ಇನ್ನೂ ಬೆಂಬಲ ಕೊಟ್ಟಿಲ್ಲ. ಹೀಗಾಗಿ ಬಂದ್ ಬಗ್ಗೆ ಜನರಿಗೆ ಹಾಗೂ ಸಂಘಟನೆಗಳಿಗೆ ಗೊಂದಲ ಮುಂದುವರೆದಿದೆ.
ಬಂದ್ ಬಗ್ಗೆ ಗೊಂದಲ..!
ನಾಡು-ನುಡಿ, ಗಡಿ ವಿಚಾರದಲ್ಲಿ ಅವಮಾನವಾದ್ರೆ ಬಂದ್ ಮಾಡ್ಲೇಬೇಕು. ಆದ್ರೆ ಫೆಬ್ರವರಿಯಲ್ಲಿ ಆಗಿರುವ ಹಲ್ಲೆಗೆ ಮಾರ್ಚ್ 22ರಂದು ಬಂದ್‌ಗೆ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಕಂಡಕ್ಟರ್ ಮೇಲಿನ ಹಲ್ಲೆಯ ಆಕ್ರೋಶದ ಪ್ರತಿಫಲನಕ್ಕೆ ಬರೋಬ್ಬರಿ ಒಂದು ತಿಂಗಳು ಬೇಕಾಯ್ತಾ ಎಂಬ ಪ್ರಶ್ನೆ ಉದ್ಭವಿಸಿಗೆ. ಬೆಳಗಾವಿಯಲ್ಲಿ ನಡೆದ ಘಟನೆಗೆ ಬೆಳಗಾವಿ ಬಂದ್ ಮಾಡೋದು ಸೂಕ್ತ. ಅದು ಬಿಟ್ಟು ಬೆಂಗಳೂರು ಮತ್ತು ಅಖಂಡ ಕರ್ನಾಟಕ ಬಂದ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಲಾಗ್ತಿದೆ. ಜನರು ಹಾಗೂ ಹಲವು ಸಂಘಟನೆಗಳಿಂದಲೂ ಬಂದ್ ಬೇಡವೆಂಬ ಕೂಗು ಕೇಳಿಬರ್ತಿದೆ. ಸದ್ಯ ಬೆಂಬಲಿಸುತ್ತಿರೋ ಹಲವು ಸಂಘಟನೆಗಳದ್ದು ಕೇವಲ ನೈತಿಕ ಬೆಂಬಲ ಮಾತ್ರ ನೀಡಿರೋದು.
ಇದನ್ನೂ ಓದಿ: ಹನಿಟ್ರ್ಯಾಪ್ ಮಧ್ಯೆ ಡಿ.ಕೆ ಶಿವಕುಮಾರ್ ಮೇಲೆ ಶಾಸಕ ಮುನಿರತ್ನ ಹೊಸ ಬಾಂಬ್; ಹೇಳಿದ್ದೇನು?
ಈಗಾಗ್ಲೆ ಹೋಟೆಲ್‌ಗಳು, ಬೀದಿ ಬದಿ ವ್ಯಾಪಾರಿಗಳು, ಕರವೇ ನಾರಾಯಣಗೌಡ, ಕರವೇ ಪ್ರವೀಣ್ ಶೆಟ್ಟಿ ಬಣ ಸೇರಿದಂತೆ ಹಲವರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ದೇ ನಾಳೆಯಿಂದ SSLC ಪರೀಕ್ಷೆ ಆರಂಭವಾಗ್ತಿರೋದ್ರಿಂದ ಖಾಸಗಿ ಶಾಲೆಗಳು ಬಂದ್‌ನ ಬೆಂಬಲಿಸಿಲ್ಲ.
ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್!
ಬಂದ್ ದಿನ ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಬಂದ್‌ಗೆ ಮದ್ಯ ಮಾರಾಟಗಾರರ ಸಂಘ ನೈತಿಕ ಬೆಂಬಲ ಕೊಟ್ಟಿರೋದ್ರಿಂದ, ಬಂದ್ ದಿನವೂ ಬಾರ್‌ಗಳು ಓಪನ್ ಇರಲಿವೆ. ಅಷ್ಟೇ ಅಲ್ಲದೇ ಬಹುತೇಕ ಮಾಲ್‌ಗಳು ಕೂಡ ತೆರೆದಿರ್ತಾವೆ. ಬಂದ್‌ಗೆ ವಿರೋಧ ವ್ಯಕ್ತವಾಗ್ತಿದ್ರೂ ಕೂಡ, ವಾಟಾಳ್ ಜಿದ್ದಿಗೆ ಬಿದ್ದು ಅಖಂಡ ಕರ್ನಾಟಕ ಬಂದ್ ಮಾಡ್ತಿದ್ದಾರಾ ಎಂದು ಪ್ರಶ್ನೆ ಸೃಷ್ಟಿಯಾಗಿದೆ. ಒಟ್ನಲ್ಲಿ.. ಮಾರ್ಚ್ 22 ಕರ್ನಾಟಕ ಬಂದ್ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅಂತಾ ಕಾದುನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ