/newsfirstlive-kannada/media/post_attachments/wp-content/uploads/2025/01/MHAKUMBHA-1.jpg)
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭ ನಡೆಯುತ್ತಿದೆ. ಅಲ್ಲಿನ ತ್ರಿವೇಣಿ ಸಂಗಮದಲ್ಲಿ ನಿತ್ಯ ಕೋಟಿ ಕೋಟಿ ಜನರು ಪವಿತ್ರ ಸ್ನಾನ ಮಾಡುವ ಮೂಲಕ ಪಾವನರಾಗುತ್ತಿದ್ದಾರೆ. ಸನಾತನ ಧರ್ಮದ ಈ ಪವಿತ್ರ ಕಾರ್ಯಕ್ರಮಕ್ಕೆ ವಿದೇಶಗಳಿಂದಲೂ ಪ್ರಸಿದ್ಧ ವ್ಯಕ್ತಿಗಳು ಬರುತ್ತಿದ್ದಾರೆ. ಅವರಲ್ಲಿ Apple ಎಂಬ ದೈತ್ಯ ಕಂಪನಿಯ ನಿರ್ಮಾತೃ ಸ್ಟೀವ್ ಜಾಬ್ಸ್ (Steve Jobs) ಪತ್ನಿ ಲಾರೆನ್ ಪೊವೆಲ್ (Laurene Powell Jobs) ಕೂಡ ಒಬ್ಬರು.
ಭಾನುವಾರ ಕಾಶಿ ವಿಶ್ವನಾಥನ ಸನ್ನಿಧಿಗೆ ಬಂದಿದ್ದ ಜಾಬ್ಸ್ ಪತ್ನಿ, ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿದ್ದರು. ನಂತರ ಸ್ವಾಮಿ ಮಹಾಮಂಡಲೇಶ್ವರ ಕೈಲಾಶಾನಂದ ಗಿರಿಯ ಸಾನಿಧ್ಯದಲ್ಲಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ. ಇದೇ ಅವಧಿಯಲ್ಲಿ ಅವರಿಗೆ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೋಟ್ಯಾಂತರ ಜನ ಸಮೂಹವನ್ನು ಮೊದಲ ಬಾರಿಗೆ ನೋಡಿ ದಿಗ್ಬ್ರಮೆಗೆ ಒಳಗಾಗಿದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಮಹಾಕುಂಭ ಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಅಸ್ವಸ್ಥ.. ಪುಣ್ಯ ಸ್ನಾನಕ್ಕೆ ಬಂದಾಗ ಏನಾಯ್ತು..?
ಜಾಬ್ಸ್ ಪತ್ನಿ ಮಹಾಕುಂಭಕ್ಕೆ ಬರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ವಾಮಿ ಕೈಲಾಶಾನಂದ ಗಿರಿ ಸ್ವಾಮೀಜಿ ಬಗ್ಗೆ ಚರ್ಚೆ ಜೋರಾಗಿತ್ತು. ಅದಕ್ಕೆ ಕಾರಣ ಲಾರೆನ್ ಪೊವೆಲ್. ಇವರು ಕೈಲಾಶಾನಂದ ಗಿರಿ ಸ್ವಾಮೀಜಿಯನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕಾರ ಮಾಡಿದ್ದಾರೆ. ಗುರೂಜಿ ಕೂಡ ಅವರಿಗೆ ಪ್ರೀತಿಯಿಂದ ದೀಕ್ಷೆ ನೀಡಿದ್ದಾರೆ.
ಯಾರು ಈ ಸ್ವಾಮಿ ಕೈಲಾಶಾನಂದ ಗಿರಿ?
ಸ್ವಾಮಿ ಕೈಲಾಶಾನಂದ ಗಿರಿ (Swami Kailashanand Giri) ಅವರು ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರದ ಪೀಠಾಧಿಪತಿ. ಯಾವುದೇ ದೇಶದಲ್ಲಿ ರಾಷ್ಟ್ರಪತಿಗಳು ಪ್ರಧಾನಿಗಿಂತ ಮೇಲಿದ್ದಾರೆ. ಅದೇ ರೀತಿ ಸಂತರಲ್ಲಿ ಶಂಕರಾಚಾರ್ಯರಿಗೆ ಅತ್ಯುನ್ನತ ಸ್ಥಾನವಿದೆ. ಅವರನ್ನು ಸಂತರ ಶ್ರೇಷ್ಠ ಮುಖವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ:ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..
ಶಂಕರಾಚಾರ್ಯರ ನಂತರ ಎಲ್ಲಾ 13 ಅಖಾರಗಳು ತಮ್ಮದೇ ಆದ ಆಚಾರ್ಯ ಮಹಾಮಂಡಲೇಶ್ವರರನ್ನು ಹೊಂದಿದ್ದಾರೆ. ಸ್ವಾಮಿ ಕೈಲಾಶಾನಂದರು 2021ರಲ್ಲಿ ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರರಾದರು. ಈ ಮೊದಲು ಅವರು ಅಗ್ನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರರಾಗಿದ್ದರು.
ಸ್ವಾಮಿ ಕೈಲಾಸಾನಂದ ಗಿರಿ ಜೀವನ ಚರಿತ್ರೆ
ಸ್ವಾಮಿ ಕೈಲಾಶಾನಂದ ಗಿರಿ 1976 ರಲ್ಲಿ ಬಿಹಾರದ ಜಮುಯಿಯಲ್ಲಿ (Jamui) ಜನಿಸಿದರು. ಮಧ್ಯಮ ವರ್ಗದಲ್ಲಿ ಜನಿಸಿದ ಅವರು, ಬಾಲ್ಯದಲ್ಲಿಯೇ ಮನೆ ತೊರೆದು ಧರ್ಮದ ಮಾರ್ಗವನ್ನು ಆರಿಸಿಕೊಂಡರು. ದೇವರ ಮೇಲಿನ ಭಕ್ತಿಯಲ್ಲಿ ಮುಳುಗಿದ ಅವರು, ಮತ್ತೆ ಕುಟುಂಬದತ್ತ ಹಿಂತಿರುಗಿ ನೋಡಲಿಲ್ಲ. ಮಹಾಮಂಡಲೇಶ್ವರ ಆಗಲು ಒಬ್ಬ ವ್ಯಕ್ತಿ ಎಲ್ಲಾ ಭ್ರಮೆಗಳನ್ನು ತ್ಯಜಿಸಬೇಕು. ಜೊತೆಗೆ ಕಠಿಣ ತಪಸ್ಸು ಮಾಡಬೇಕಾಗುತ್ತದೆ.
ಅನೇಕ ಪ್ರಸಿದ್ಧ ವ್ಯಕ್ತಿಗಳು ಸ್ವಾಮಿ ಕೈಲಾಶಾನಂದರ ಭಕ್ತರು..
ಸ್ವಾಮಿ ಕೈಲಾಶಾನಂದರು ಪ್ರಸ್ತುತ ಹರಿದ್ವಾರದಲ್ಲಿರುವ ಕಾಳಿ ದೇವಾಲಯದ ಮುಖ್ಯಸ್ಥರೂ ಕೂಡ ಹೌದು. ಅಖಿಲೇಶ್ ಯಾದವ್, ಮುಲಾಯಂ ಸಿಂಗ್, ಱಪರ್ ಹನಿ ಸಿಂಗ್, ಸುರೇಶ್ ರೈನಾ, ರಿಷಭ್ ಪಂತ್, ಕಂಗನಾ ರಣಾವತ್ ಸೇರಿದಂತೆ ಅನೇಕರು ಸ್ವಾಮಿ ಕೈಲಾಶಾನಂದ ಗಿರಿ ಆಧ್ಮಾತ್ಮಿಕ ಗುರು ಆಗಿದ್ದಾರೆ.
ಇದನ್ನೂ ಓದಿ: ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಇವರ ಲೈಫ್ ಜರ್ನಿಯೇ ರೋಚಕ!
ಅದೇ ರೀತಿ ಸ್ಟೀವ್ ಜಾಬ್ಸ್ ಪತ್ನಿ ಕೂಡ ಕೈಲಾಶಾನಂದರನ್ನು ತಮ್ಮ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಿದ್ದಾರೆ. ಸ್ವಾಮಿ ಕೈಲಾಶಾನಂದರು ಜಾಬ್ಸ್ ಪತ್ನಿಗೆ ಆಧ್ಯಾತ್ಮಿಕ ದೀಕ್ಷೆಯನ್ನು ನೀಡಿ ಆಶೀರ್ವಾದ ಮಾಡಿದ್ದಾರೆ. ಹೊಸ ದಿಕ್ಕಿಗೆ ದಾರಿ ತೋರಿಸಿರುವ ಸ್ವಾಮೀಜಿ, ಪೊವೆಲ್ಗೆ ‘ಕಮಲಾ’ ಎಂಬ ಆಧ್ಯಾತ್ಮಿಕ ಹೆಸರನ್ನು ಕೊಟ್ಟಿದ್ದಾರೆ.
ಮಹಾಕುಂಭದಲ್ಲಿ ಮೂರು ದಿನಗಳ ಕಾಲ ಇದ್ದ ಪೊವೆಲ್, ವಾಪಸ್ ನ್ಯೂಯಾರ್ಕ್ಗೆ ಹೋಗಿದ್ದಾರೆ. ಜನವರಿ 20 ರಂದು ಟ್ರಂಪ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದೀಕ್ಷೆ ನೀಡುವ ವೇಳೆ ಪವಿತ್ರವಾದ ಕಾಳಿಬೀಜ್ ಮಂತ್ರವನ್ನು ಹೇಳಿಕೊಟ್ಟಿದ್ದಾರೆ. ಗುರುದಕ್ಷಿಣೆಯಾಗಿ ಪೊವೆಲ್ ಏನು ನೀಡಿದ್ದಾರೆ ಅನ್ನೋದು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ:ISRO ಸ್ಪೇಡೆಕ್ಸ್ ಯೋಜನೆ ಯಶಸ್ವಿ; ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ