/newsfirstlive-kannada/media/post_attachments/wp-content/uploads/2024/12/TANUSH-KOTIAN.jpg)
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಅಶ್ವಿನ್ ಜಾಗಕ್ಕೆ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಅದರಲ್ಲೂ ಬಾರ್ಡರ್ ಗವಾಸ್ಕರ್​ ಟ್ರೋಫಿಯ ಮೂರನೇ ಟೆಸ್ಟ್​ ಮುಕ್ತಾಯಗೊಳ್ತಿದಂತೆಯೇ ಅಶ್ವಿನ್ ಗುಡ್​​ಬೈ ಹೇಳಿದ್ದರು. ಹೀಗಾಗಿ ಇನ್ನುಳಿದ ಎರಡು ಟೆಸ್ಟ್​ಗೆ ಅವರ ಬದಲಿಗೆ ಟೀಂ ಇಂಡಿಯಾ ಯಾರನ್ನು ಆಯ್ಕೆ ಮಾಡಲಿದೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಇದನ್ನೂ ಓದಿ:ಬೆಂಗಳೂರು-ಮೈಸೂರು ಹೈವೇಯಲ್ಲಿ ಕಾರಿಗೆ ಮೊಟ್ಟೆ ಒಡೆದು, ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ
ಮುಂಬೈ ಆಲ್​ರೌಂಡರ್ ತನುಷ್ ಕೊಟ್ಯಾನ್ ಅವರನ್ನು ಅಶ್ವಿನ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಕೊಟ್ಯಾನ್ ಅವರು ಆಫ್ ಸ್ಪಿನ್ನರ್ ಆಗಿದ್ದು, ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ವರದಿಯಾಗಿದೆ. ಕೋಟ್ಯಾನ್ ಟೀಂ ಇಂಡಿಯಾ ಏ ತಂಡದ ಭಾಗವಾಗಿದ್ದಾರೆ. ಬಾರ್ಡರ್ ಗವಾಸ್ಕರ್​ ಟ್ರೋಫಿ ಹಿನ್ನೆಲೆಯಲ್ಲಿ ಭಾರತದ ಎ ತಂಡ ಕೂಡ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಒಂದು ಪಂದ್ಯದಲ್ಲಿ ಕೋಟ್ಯಾನ್ ಆಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಡಕೌಟ್​ ಆಗಿದ್ದರೆ, ಎರಡನೇ ಇನ್ನಿಂಗ್ಸ್​ನಲ್ಲಿ 44 ರನ್​ಗಳಿಸಿದ್ದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಎರಡನೇ ಇನ್ನಿಂಗ್ಸ್​ನಲ್ಲಿ ಒಂದು ವಿಕೆಟ್ ಕಿತ್ತಿದ್ದಾರೆ.
ತನುಷ್ ಕೊಟ್ಯಾನ್ ಯಾರು?
ತನುಷ್ ಕೊಟ್ಯಾನ್ ಮುಂಬೈ ತಂಡದ ಆಟಗಾರ. 2024ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡಿದ್ದಾರೆ. ಮೊದಲ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಬೌಲಿಂಗ್ ಮಾಡಿದ್ದ ಕೊಟ್ಯಾನ್ 9 ಓವರ್​ನಲ್ಲಿ 73 ರನ್​​ ಬಿಟ್ಟುಕೊಟ್ಟಿದ್ದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅವರಿಕೆ ಸ್ಥಾನ ಸಿಗಲಿಲ್ಲ. ಆದರೆ, ಕೊಟ್ಯಾನ್, ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಭವಿಷ್ಯದಲ್ಲಿ ಸ್ಟಾರ್ ಕ್ರಿಕೆಟರ್ ಆಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
33 ಫಸ್ಟ್​ಕ್ಲಾಸ್​ ಕ್ರಿಕೆಟ್ ಆಡಿರುವ ಕೊಟ್ಯಾನ್, 1525 ರನ್​ಗಳನ್ನು ಕಲೆ ಹಾಕಿ 101 ವಿಕೆಟ್ ಕಬಳಿಸಿದ್ದಾರೆ. 2023-24 ರಣಜಿ ಟ್ರೋಫಿಯಲ್ಲಿ ಪ್ರೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದರು. 29 ವಿಕೆಟ್ ಕಬಳಿಸಿ 502 ರನ್​ಗಳಿಸಿದ್ದರು. ವಿಶೇಷ ಅಂದರೆ ರಣಜಿ ಟ್ರೋಫಿಯಲ್ಲಿ ಇವರು ಬ್ಯಾಟಿಂಗ್ ಆರ್ಡರ್ ನಂಬರ್ 10 ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us