ಸುಂದರ್​ಗೆ ಆಘಾತ; ಅಶ್ವಿನ್ ಸ್ಥಾನಕ್ಕೆ ಕೋಟ್ಯಾನ್ ಆಯ್ಕೆ.. ಯಂಗ್ ಸ್ಪಿನ್ನರ್​​ಗೆ ಕರ್ನಾಟಕದ ನಂಟು..!

author-image
Ganesh
Updated On
ಸುಂದರ್​ಗೆ ಆಘಾತ; ಅಶ್ವಿನ್ ಸ್ಥಾನಕ್ಕೆ ಕೋಟ್ಯಾನ್ ಆಯ್ಕೆ.. ಯಂಗ್ ಸ್ಪಿನ್ನರ್​​ಗೆ ಕರ್ನಾಟಕದ ನಂಟು..!
Advertisment
  • 26 ವರ್ಷದ ತನುಷ್ ಕೋಟ್ಯಾನ್ ಯಾರು..?
  • ಅಶ್ವಿನ್ ಸ್ಥಾನ ತುಂಬಬಲ್ಲ ಪ್ರತಿಭಾವಂತನಾ..?
  • ಅಶ್ವಿನ್​ರಂತೆ ಆಲ್​ರೌಂಡರ್ ಈ ಕೋಟ್ಯಾನ್..!

ಬಾಕ್ಸಿಂಗ್ ಡೇ ಟೆಸ್ಟ್​ನ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಗೆಲುವೊಂದೇ ಗುರಿಯಾಗಿಸಿಕೊಂಡಿರುವ ಉಭಯ ತಂಡಗಳು ಮೆಲ್ಬರ್ನ್​ ಮಹಾಸಮರಕ್ಕೆ ಸಜ್ಜಾಗ್ತಿದ್ದಾರೆ. ಈ ನಡುವೆಯೇ ಯಂಗ್ ಸ್ಪಿನ್ ಸೆನ್ಸೇಷನ್ ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಿದ್ದಾನೆ. ಅದು ಕೂಡ ಆರ್​.ಅಶ್ವಿನ್ ಬದಲಿ ಸ್ಥಾನದಲ್ಲಿ.

ಕೊನೆ 2 ಟೆಸ್ಟ್​ ಪಂದ್ಯಗಳಿಗಾಗಿ 26 ವರ್ಷದ ತನುಷ್ ಕೋಟ್ಯಾನ್​​​​​​​​​​​​​​​​​​​​​​​​​ಗೆ ಸ್ಥಾನ ನೀಡಿ ಅಚ್ಚರಿ ಮೂಡಿಸಿದೆ. ತನುಷ್ ಕೋಟ್ಯಾನ್. ಆಫ್​ ಸ್ಪಿನ್ನರ್.. ರೈಟ್​ ಹ್ಯಾಂಡ್​​ ಬ್ಯಾಟರ್. ಕಳೆದ ಕೆಲ ವರ್ಷಗಳಿಂದ ಮುಂಬೈ ತಂಡದ ಖಾಯಂ ಆಟಗಾರ. ಆರ್​.ಅಶ್ವಿನ್​​ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ವರ್ತೂರ್ ಪ್ರಕಾಶ್ ಹೆಸರು ಹೇಳಿ ವಂಚಿಸಿದ್ದ ಶ್ವೇತಾಗೌಡ..? ಕಿಲಾಡಿ ಹೆಣ್ಣಿನ ದಾರಿ ತಪ್ಪಿಸಿದ್ದು ಯಾರು?
publive-image

ತನುಷ್ ಕೋಟ್ಯಾನ್, ಕುಟುಂಬಸ್ಥರು ಕರ್ನಾಟಕ ಉಡುಪಿ ಮೂಲದ ಕರುಣಾಕರ್‌ ಕೋಟ್ಯಾನ್‌, ಮಲ್ಲಿಕಾ ಕೋಟ್ಯಾನ್‌ ದಂಪತಿ ಪುತ್ರ. ಕರ್ನಾಟಕದವರೇ ಆಗಿದ್ದರೂ, ಬೆಳೆದಿದ್ದು ಕ್ರಿಕೆಟ್ ಕೆರಿಯರ್ ಶುರುಮಾಡಿದ್ದು ಮಾತ್ರ ಮುಂಬೈನಲ್ಲೇ ಅನ್ನೋದು ವಿಶೇಷ.

ಅಶ್ವಿನ್​ರಂತೆ ಆಲ್​ರೌಂಡರ್..!

ತನುಷ್ ಕೋಟ್ಯಾನ್, ರವಿಚಂದ್ರನ್ ಅಶ್ವಿನ್​ರಂತೆ ಸ್ಪಿನ್​​ ಆಲ್​​​ರೌಂಡರ್. ಬಲಗೈ ಆಫ್ ಸ್ಪಿನ್ ಬೌಲಿಂಗ್ ಮಾಡೋ ಕೋಟ್ಯಾನ್, ಬ್ಯಾಟಿಂಗ್​ನಲ್ಲೂ ಕಮಾಲ್ ಮಾಡ್ತಾರೆ. ಸೇಮ್ ಟು ಸೇಮ್ ಅಶ್ವಿನ್​ರನ್ನೇ ನೆನಪಿಸುತ್ತೆ ಈತನ ಫಸ್ಟ್​ ಕ್ಲಾಸ್ ಕ್ರಿಕೆಟ್ ಕರಿಯರ್​..

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕೋಟ್ಯಾನ್

ಮುಂಬೈ ಪರ 33 ಫಸ್ಟ್​ ಕ್ಲಾಸ್ ಪಂದ್ಯಗಳನ್ನಾಡಿರುವ ತನುಷ್ ಕೋಟ್ಯಾನ್, 101 ವಿಕೆಟ್ ಪಡೆದಿದ್ದಾರೆ. ಕೆಳ ಕ್ರಮಾಂಕದಲ್ಲಿ 41.21ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೋಟ್ಯಾನ್, 1525 ರನ್ ಗಳಿಸಿದ್ದಾರೆ. 2 ಭರ್ಜರಿ ಸೆಂಚುರಿ 13 ಹಾಫ್ ಸೆಂಚುರಿ ಕೋಟ್ಯಾನ್ ಬ್ಯಾಟ್​ನಲ್ಲಿ ಬಂದಿದೆ.

ರಣಜಿ, ಇರಾನಿ ಕಪ್​ ಗೆಲುವಿನಲ್ಲಿ ಮಹತ್ವದ ಪಾತ್ರ

2023-2024ರ ರಣಜಿ ಫೈನಲ್‌ನಲ್ಲಿ ವಿದರ್ಭವನ್ನು ಮಣಿಸಿದ್ದ ಮುಂಬೈ, 42ನೇ ಬಾರಿಗೆ ಚಾಂಪಿಯನ್ ಆಗಿ ಮೆರೆದಾಡಿತ್ತು. ಕ್ರೆಡಿಟ್​ ನಿಜಕ್ಕೂ ಕೋಟ್ಯಾನ್​ಗೆ ಸಲ್ಲುತ್ತೆ. ಫೈನಲ್ಸ್​ನಲ್ಲಿ ಒಟ್ಟು 7 ವಿಕೆಟ್ ಕಬಳಿಸಿ ಮಹತ್ವದ ಕೊಡುಗೆ ನೀಡಿದರು. ಬರೋಡಾ ಎದುರಿನ ಕ್ವಾರ್ಟರ್‌ಫೈನಲ್​ನಲ್ಲಿ ಕೋಟ್ಯಾನ್​ ದಿಟ್ಟ ಹೋರಾಟ ನಡೆಸಿದ್ರು. ಈ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ತುಷಾನ್ ಕೋಟ್ಯಾನ್, ಅಜೇಯ 120 ರನ್ ಗಳಿಸಿದ್ರು. ಟೂರ್ನಿ ಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ತುಷಾನ್, 1 ಶತಕ, 5 ಅರ್ಧಶತಕ ಒಳಗೊಂಡ 502 ರನ್ ಗಳಿಸಿದ್ರು. ಬೌಲಿಂಗ್​ನಲ್ಲಿ 29 ವಿಕೆಟ್ ಕಬಳಿಸಿ ಮಿಂಚಿಂದ್ರು.

ಇದನ್ನೂ ಓದಿ: ಅಪ್ಪನಾದ ಖುಷಿಯಲ್ಲಿ ಟೀಂ ಇಂಡಿಯಾ ಸ್ಟಾರ್.. ಮುದ್ದಾದ ಮಗುವಿನ ಹೆಸರು ರಿವೀಲ್

ಮುಂಬೈ ಇರಾನಿ ಕಪ್‌ ಗೆಲುವಿನಲ್ಲಿ ತನುಷ್‌ ಕೋಟ್ಯಾನ್‌, ಪಾತ್ರ ಮಹತ್ವದ್ದಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಮುಂಬೈ ಮುನ್ನಡೆ ಪಡೆದರೂ, 2ನೇ ಇನ್ನಿಂಗ್ಸ್​ನಲ್ಲಿ ಮುಂಬೈ 171 ರನ್​ಗೆ 8 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಆಸರೆಯಾಗಿದ್ದ ಕೋಟ್ಯಾನ್, 150 ಎಸೆತಗಳಲ್ಲಿ ಅಜೇಯ 114 ರನ್ ಬಾರಿಸಿದರು. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಯ್ತು. ಮುಂಬೈ 27 ವರ್ಷಗಳ ಬಳಿಕ ಇರಾನಿ ಕಪ್ ಗೆದ್ದು ಬೀಗ್ತು.

ಸುಂದರ್ ಇದ್ದರೂ ಕೋಟ್ಯಾನ್ ಯಾಕೆ..?

ಅಶ್ವಿನ್ ಸ್ಥಾನದಲ್ಲಿ ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್ ಅಥವಾ ಕುಲ್​ದೀಪ್ ಯಾದವ್​ ಆಡಬಹುದೆಂಬ ಎಂದು ನಿರೀಕ್ಷಿಸಲಾಗಿತ್ತು. ಇವರನ್ನೆಲ್ಲಾ ಹೊರತು ಪಡೆಸಿ ತನುಷ್ ಕೋಟ್ಯಾನ್​ಗೆ ಬುಲಾವ್ ನೀಡಿದ್ದು ಫ್ಯಾನ್ಸ್​ಗೆ ಅಚ್ಚರಿ ಮೂಡಿಸಿರಬಹುದು. ಇದರ ಹಿಂದೆ ಮಹತ್ವದ ಕಾರಣ ಇದೆ.

ಇತ್ತಿಚೆಗಷ್ಟೇ ಸರ್ಜರಿಗೆ ಒಳಗಾಗಿರುವ ಕುಲ್​ದೀಪ್ ಯಾದವ್, 100 ಪರ್ಸೆಟ್ ಫಿಟ್ ಇಲ್ಲ. ಮತ್ತೊಂದೆಡೆ ಅಪ್ಪನಾಗಿರುವ ಅಕ್ಷರ್ ಪಟೇಲ್ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಎ ಟೂರ್​ನಲ್ಲಿ ಆಡಿದ್ದ ಕೋಟ್ಯಾನ್​​​​​ಗೆ ಮೊದಲ ಆದ್ಯತೆ ನೀಡಲಾಗಿದೆ. ಇಂಗ್ಲೆಂಡ್​ನ ಕೌಂಟಿ ಹಾಗೂ ಡೊಮೆಸ್ಟಿಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯಜುವೇಂದ್ರ ಚಾಹಲ್​ನ ಪರಿಗಣನೆಗೂ ತೆಗೆದುಕೊಂಡಿದಲ್ಲ. ಬದಲಾಗಿ ಸೆಲೆಕ್ಷನ್ ಕಮಿಟಿ, ಯಂಗ್​ ಸ್ಟರ್ಸ್​ಗೆ ಫಸ್ಟ್ ಪ್ರಿಪರೆನ್ಸ್​ ಅನ್ನೋ ಸಂದೇಶ ರವಾನಿಸಿದೆ.

ಇದನ್ನೂ ಓದಿ:ಕ್ಯಾಪ್ಟನ್ ರೋಹಿತ್ ಕ್ರಿಕೆಟ್​ ಯುಗಾಂತ್ಯಕ್ಕೆ ಮತ್ತೊಂದು ಸೂಚನೆ..

ಸೆಲೆಕ್ಷನ್ ಕಮಿಟಿ ಉತ್ತಮ ಆಲ್​ರೌಂಡರ್​ನನ್ನೇ ಹುಡುಕಿ ತಂದಿದೆ. ಮ್ಯಾನೇಜ್​​ಮೆಂಟ್​ ಈತನಿಗೆ 2 ಪಂದ್ಯಗಳಲ್ಲಿ ಬೆಂಚ್ ಕಾಯಿಸಿ ನಿನ್ನ ದಾರಿ ನಿನಗೆ ಎಂದು ಬಿಡುತ್ತಾ? ಅಥವಾ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡುತ್ತಾ? ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment