Advertisment

27 ಕೋಟಿ ಒಡೆಯನಿಗೆ ಇಲ್ವಾ ನಾಯಕತ್ವದ ಪಟ್ಟ: ಪೂರನ್​ಗೆ ಪಟ್ಟಾಭಿಷೇಕ ಮಾಡುತ್ತಾ ಲಕ್ನೋ?

author-image
Gopal Kulkarni
Updated On
27 ಕೋಟಿ ಒಡೆಯನಿಗೆ ಇಲ್ವಾ ನಾಯಕತ್ವದ ಪಟ್ಟ: ಪೂರನ್​ಗೆ ಪಟ್ಟಾಭಿಷೇಕ ಮಾಡುತ್ತಾ ಲಕ್ನೋ?
Advertisment
  • ಯಾರು ಆಗ್ತಾರೆ ಲಕ್ನೋ ಸೂಪರ್ ಜೈಂಟ್ಸ್​ ಕ್ಯಾಪ್ಟನ್?
  • ನಾಯಕತ್ವದ ರೇಸ್​​ನಲ್ಲಿ ಇದ್ದಾರೆ ನಾಲ್ವರು ಆಟಗಾರರು!
  • ಪೂರನ್​​ V/S ಪಂತ್ ಇಬ್ಬರ ನಡುವೆ ಭಾರೀ ಜಿದ್ದಾಜಿದ್ದಿ

ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ, ಲಕ್ ಬದಲಿಸುವಂತ ತಂಡ ಕಟ್ಟಿದೆ. ಸ್ಟ್ರಾಂಗ್ ಟೀಮ್​​​​​ ಕಟ್ಟಿರುವ ಲಕ್ನೋ ದಾಖಲೆಯ ಮೊತ್ತಕ್ಕೆ ರಿಷಭ್​ ಪಂತ್​ನ ಖರೀದಿಸಿದೆ. ಆದ್ರೆ, 27 ಕೋಟಿಯ ಒಡೆಯನಿಗೆ ಈಗ ನಾಯಕ ಪಟ್ಟ ಸಿಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.

Advertisment

ನಮ್ಮ ತಂಡದಲ್ಲಿ ನಾಲ್ವರು ಲೀಡರ್ಸ್ ಇದ್ದಾರೆ. ರಿಷಭ್, ಪೂರನ್, ಮಾರ್ಕಮ್​​ ಆ್ಯಂಡ್ ಮಿಚೆಲ್ ಮಾರ್ಶ್​. ಇವರು ಸ್ಟ್ರಾಂಗ್​ ನಾಯಕತ್ವದ ಗುಣ ಹೊಂದಿರುವವರಾಗಿದ್ದಾರೆ. ಈ ನಾಲ್ವರೂ ಆಟಗಾರರು ಗೆಲುವಿನ ಮೈಂಡ್​ಸೆಟ್​ನಲ್ಲಿ ಆಡುತ್ತಾರೆ. ರಿಷಭ್‌ ಪಂತ್‌ ಸಹ ಒಬ್ಬ ಫೈಟರ್‌. ಹೀಗಾಗಿಯೇ ನಾವು ಹರಾಜಿನಲ್ಲಿ ಉತ್ತಮ ತಂಡವನ್ನು ಕಟ್ಟಿದ್ದೇವೆ. ನಿರ್ಧರಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತೇವೆ. ಶೀಘ್ರವೇ ನಾನು, ಜಾಕ್, ಜಸ್ಟಿನ್ ಲ್ಯಾಂಗರ್​ ಮೀಟಿಂಗ್ ಮಾಡುತ್ತೇವೆ. ನಾಯಕ ಯಾರು ಆಗಬೇಕೆಂದು ನಿರ್ಧರಿಸುತ್ತೇವೆ ಎಂದು ಸಂಜೀವ್​ ಗೋಯೆಂಕಾ, ಲಕ್ನೋ ತಂಡದ ಮಾಲೀಕ ಹೇಳಿದ್ದಾರೆ.

ಇದನ್ನೂ ಓದಿ: ಮಹೇಂದ್ರ ಸಿಂಗ್​ ಧೋನಿ ನನ್ನ ಸ್ನೇಹಿತನಲ್ಲ; ಬಹಿರಂಗವಾಗಿ ಹೇಳಿಕೆ ನೀಡಿದ್ದೇಕೆ ಸ್ಪಿನ್ ಮಾಂತ್ರಿಕ ?

ಮೊನ್ನೆ ತನಕ ಲಕ್ನೋ ಸೂಪರ್ ಜೈಂಟ್ಸ್​ ತಂಡದಲ್ಲಿ ಇಬ್ಬರ ಹೆಸರು ರೇಸ್​ನಲ್ಲಿತ್ತು. ರಿಷಭ್ ಪಂತ್ ಅಥವಾ ನಿಕೋಲಸ್ ಪೂರನ್​ಗೆ ನಾಯಕತ್ವದ ಪಟ್ಟ ಸಿಗುತ್ತೆ ಅಂತಾನೇ ನಿರೀಕ್ಷೆ ಇತ್ತು. ಆದ್ರೆ, ಲಕ್ನೋ ಸೂಪರ್ ಜೈಂಟ್ಸ್​ ಮಾಲೀಕ ಸಂಜಯ್ ಗೋಯೆಂಕಾರ ಈ ಮಾತು ಕೇಳಿದ್ಮೇಲೆ, ಯಾರ್​ ಆಗ್ತಾರೆ ಕ್ಯಾಪ್ಟನ್​ ಅನ್ನೋ ಸಸ್ಪೆನ್ಸ್​​​​​​​​​​​​​, ಥ್ರಿಲ್ಲರ್ ಡ್ರಾಮಾಗೆ ಇನ್ನಿಬ್ಬರು ಸೇರಿಕೊಂಡಿದ್ದಾರೆ.

Advertisment

publive-image

ಲಕ್ನೋ ತಂಡದ ನಾಯಕತ್ವದ ಪಟ್ಟ ಯಾರಿಗೆ?
ಐಪಿಎಲ್​ ಮೆಗಾ ಹರಾಜಲ್ಲಿ ಲಕ್ನೋ ಸಾಲಿಡ್ ಟೀಮ್ ಕಟ್ಟಿದೆ. ನಾಯಕನ ನೇಮಕದ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದೆ. ಆದ್ರೆ, ನಾಯಕತ್ವ ವಹಿಸಿಕೊಳ್ಳುವ ರೇಸ್​ನಲ್ಲಿರುವ ಈ ನಾಲ್ವರ ಪೈಕಿ ಟಫ್ ಫೈಟ್​ ನಡೀತಿರುವುದು ಮಾತ್ರ ​​​​​​​​​​ಡೇಂಜರಸ್ ನಿಕೋಲಸ್ ಪೂರನ್ ಆ್ಯಂಡ್ ರಿಷಭ್ ಪಂತ್ ನಡುವೆ..
ಟಿ20 ಫಾರ್ಮೆಟ್​ಗೆ ಹೇಳಿ ಮಾಡಿಸಿರುವ ಈ ಇಬ್ಬರು, ಗೇಮ್ ಚೇಂಜರ್​ಗಳು ಮಾತ್ರವೇ ಅಲ್ಲ.. ನಾಯಕತ್ವಕ್ಕೆ ಬೆಸ್ಟ್​ ಚಾಯ್ಸ್​ ಆಗಿದ್ದಾರೆ. ಆದ್ರೆ, ಈ ಇಬ್ಬರಲ್ಲಿ ಯಾರಿಗೆ ಲಕ್ನೋ ನಾಯಕನ ಪಟ್ಟ ಕಟ್ಟಬೇಕು ಅನ್ನೋದೇ ಲಕ್ನೋ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪೂರನ್​ಗೆ ಪಟ್ಟಾಭಿಷೇಕ ಮಾಡುತ್ತಾ ಲಕ್ನೋ ತಂಡ?
ಕಳೆದ 2 ವರ್ಷಗಳಿಂದ ತಂಡದಲ್ಲಿರುವ ಪೂರನ್​ಗೆ, 21 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿರುವ ಲಕ್ನೋ, ಇತ್ತ ಮೆಗಾ ಹರಾಜಿನಲ್ಲಿ ರಿಷಭ್​ ಪಂತ್​ ಮೇಲೆ ಬರೋಬ್ಬರಿ 27 ಕೋಟಿ ಸುರಿದಿದೆ. ಇದು ಸಹಜವಾಗೇ ಪಂತ್, ಲಕ್ನೋ ನಾಯಕನಾಗ್ತಾರಾ ಎಂಬ ಪ್ರಶ್ನೆ ಹುದ್ಬವಿಸುವಂತೆ ಮಾಡಿತ್ತು. ಆದ್ರೆ, ಕಳೆದ ಸೀಸನ್​ನಲ್ಲಿ ಉಪ ನಾಯಕನಾಗಿದ್ದ ನಿಲೋಲಸ್ ಪೂರನ್​, ತಂಡದಲ್ಲೇ ಇದ್ದಾರೆ. ಹೀಗಾಗಿ ವೈಸ್ ಕ್ಯಾಪ್ಟನ್ ಪೂರನ್, ಈಗ ನಾಯಕನಾಗೋ ಸಾಧ್ಯತೆಯೂ ಇದ್ದೇ ಇದೆ. ಇನ್​ಫ್ಯಾಕ್ಟ್​_ ಇದಕ್ಕೆ ಕಾರಣವೂ ಇದೆ. ಅದೇ ಟಿ20 ಲೀಗ್​ನ ಸಕ್ಸಸ್​.

publive-image

ಲೀಗ್​​ಗಳಲ್ಲಿ ಚಾಂಪಿಯನ್ ಕ್ಯಾಪ್ಟನ್ ಪೂರನ್..!
ನಿಕೋಲಸ್ ಪೂರನ್​, ಐಪಿಎಲ್​ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿಲ್ಲ.. ಆದ್ರೆ, ಶಾರ್ಟ್ ಫಾರ್ಮೆಟ್​ ಲೀಗ್​ಗಳಲ್ಲಿ ನಿಕೋಲಸ್ ಪೂರನ್ ನಾಯಕನಾಗಿ ಸಕ್ಸಸ್​ ಕಂಡಿದ್ದಾರೆ. ಮೇಜರ್ ಕ್ರಿಕೆಟ್​ ಲೀಗ್​ನಲ್ಲಿ ಎಮ್​ಐ ನ್ಯೂ ಯಾರ್ಕ್​ ತಂಡದ ನಾಯಕನಾಗಿದ್ದ ನಿಕೋಲಸ್ ಪೂರನ್, 2023ರ ಸೀಸನ್​ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದಷ್ಟೇ ಅಲ್ಲ. ಇತ್ತಿಚೆಗಷ್ಟೇ ಮುಗಿದ ಅಬುಧಾಬಿ ಟಿ10 ಲೀಗ್​ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವನ್ನು ಮುನ್ನಡೆಸಿ ಸಕ್ಸಸ್​ ಕಂಡಿರುವ ಪೂರನ್, ಇಂಟರ್​ನ್ಯಾಷನಲ್​ ಲೀಗ್ ಟಿ20ಯಲ್ಲೂ ಎಮ್​ಐ ಎಮಿರೇಟ್ಸ್​ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕರಾಗಿದ್ದಾರೆ. ಹೀಗಾಗಿ ಪೂರನ್​​​​ಗೆ ಲಕ್ನೋ ನಾಯಕತ್ವದ ಪಟ್ಟ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

Advertisment

ಇದನ್ನೂ ಓದಿ:ಅಡಿಲೇಡ್ ಅಖಾಡದಲ್ಲಿ ಕಿಂಗ್ ಆಗ್ತಾರಾ ಕೊಹ್ಲಿ; ಸಚಿನ್​ರ​ ಆ ದಾಖಲೆ ಮುರಿಯಲು ಇನ್ನೆಷ್ಟು ಶತಕಗಳು ಬೇಕು?

ನಾಯಕತ್ವದ ವಿಚಾರದಲ್ಲಿ ನಿಕೋಲಸ್ ಪೂರನ್ ಫ್ರಂಟ್ ರನ್ನರ್​​​​​​​​​​ ಅನ್ನೋದ್ರಲ್ಲಿ ನೋ ಡೌಟ್. ಆದ್ರೆ, ಡೆಲ್ಲಿ ನಾಯಕನಾಗಿದ್ದ ಪಂತ್ ಕೂಡ, ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್​ಫ್ಯಾಕ್ಟ್_ ಪಂತ್ ಮೇಲೆ ಮಾಲೀಕ ಸಂಜೀವ್​ ಗೋಯೆಂಕಾಗೆ ವಿಶೇಷ ಒಲವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಇಂಡಿಯನ್ ಕಂಡೀಷನ್ಸ್​ ಬಗ್ಗೆ ಚೆನ್ನಾಗಿಯೇ ಅರಿತಿರುವ ಪಂತ್, ಸ್ನೇಹಮಹಿಯೂ ಆಗಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗಿ ಬಿಂಬಿತರಾಗಿದ್ದಾರೆ. ಹೀಗಾಗಿ ಪಂತ್​​ಗೆ ಲಕ್ನೋ ನಾಯಕರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment