/newsfirstlive-kannada/media/post_attachments/wp-content/uploads/2025/06/mouna7.jpg)
ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ರಾಮಾಚಾರಿ ಸೀರಿಯಲ್ ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ. ಇದೇ ಸೀರಿಯಲ್​ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ. ಒಂದೇ ಸೀರಿಯಲ್​ ಮೂಲಕ ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು ಈ ಚಲುವೆ.
ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?
/newsfirstlive-kannada/media/post_attachments/wp-content/uploads/2025/06/mouna8.jpg)
ಇದೀಗ ಇಷ್ಟು ಜನಪ್ರಿಯತೆ ಪಡೆದುಕೊಂಡಿರೋ ಮೌನ ಗುಡ್ಡೆಮನೆ ನನ್ನ ಯಶಸ್ಸಿನ ಹಿಂದಿರುವ ಶಕ್ತಿ ಯಾರು ಎಂದು ಹೇಳಿದ್ದಾರೆ. ಹೌದು, ತಾಯಿಯೇ ಮೊದಲು ಗುರು, ತಾಯಿ ಮನಸ್ಸು ಮಾಡಿದ್ರೆ ಮಕ್ಕಳು ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಟಿ ಮೌನ ಗುಡ್ಡೆಮನೆ ಅವರ ಹಿಂದಿನ ಶಕ್ತಿ ಏನೆಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/06/mouna9.jpg)
View this post on Instagram
ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ತಾಯಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ತಾಯಿಯ ಜೊತೆಗೆ ನಿಂತಿರುವ ಫೋಟೋ ಶೇರ್ ಮಾಡಿಕೊಂಡ ನಟಿ.. ನನ್ನ ಯಶಸ್ಸಿನ ಹಿಂದಿರುವ ಶಕ್ತಿ, ನನ್ನ ಜೀವನದ ಪ್ರೇರಣಾ ದೀಪ್ತಿ, ನನ್ನ ತಾಯಿ, ನನ್ನ ದೇವತೆ,
ನೀನು ನನ್ನ ಎಲ್ಲಾ ಜಯಗಳ ಹಿಂದಿರುವ ಕಾರಣೆ, ಹುಟ್ಟುಹಬ್ಬದ ಶುಭಾಶಯಗಳು, ಅಮ್ಮಾ ಅಂತ ಬರೆದುಕೊಂಡಿದ್ದಾರೆ. ನಟಿಯ ಎಲ್ಲಾ ಹಾದಿಗೂ ತಾಯಿ ದಾರಿ ದೀಪವಾಗಿ ಹಿಂದೆ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us