Advertisment

ರಾಜ್ಯ ಯೂತ್​ ಕಾಂಗ್ರೆಸ್​​ಗೆ ಹೊಸ ಕ್ಯಾಪ್ಟನ್.. ಯಾರು ಈ HS ಮಂಜುನಾಥ್..?

author-image
Ganesh
Updated On
ರಾಜ್ಯ ಯೂತ್​ ಕಾಂಗ್ರೆಸ್​​ಗೆ ಹೊಸ ಕ್ಯಾಪ್ಟನ್.. ಯಾರು ಈ HS ಮಂಜುನಾಥ್..?
Advertisment
  • ಎಲೆಕ್ಷನ್​​ ಬಿಗ್​​ ಫೈಟ್​ನಲ್ಲಿ ಗೆದ್ದು ಬೀಗಿದ ಮಂಜುನಾಥ್​​
  • ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿಗೆ ಸೋಲುಣಿಸಿದ HS ಮಂಜುನಾಥ್
  • ರಾಷ್ಟ್ರ ರಾಜಕಾರಣಕ್ಕೆ ಪುತ್ರಿ, ರಾಜ್ಯಕ್ಕೆ ಸತೀಶ್ ಪುತ್ರ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುತೂಹಲಕ್ಕೆ ತೆರೆಬಿದ್ದಿದೆ. ಜಿದ್ದಾಜಿದ್ದಿನ ಕದನದಲ್ಲಿ ಮಂಜುನಾಥ್ ಗೆದ್ದು ಬೀಗಿದ್ದಾರೆ. ಪಕ್ಷದ ಸಂಘಟನೆ ಮೂಲಕ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಆಗಿದೆ. ಪಕ್ಷ ಸಂಘಟನೆಯ ಜೊತೆಗೆ ಯುವ ಮತದಾರರನ್ನ ಸೆಳೆಯುವ ಗುರುತರ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದೆ.

Advertisment

ರಾಜ್ಯ ಯುವ ಕಾಂಗ್ರೆಸ್​​, ಬದಲಾವಣೆಗೆ ತೆರೆದುಕೊಂಡಿದೆ. ಯೂತ್​​ ಕಾಂಗ್ರೆಸ್​​ ನಾಯಕತ್ವ ಶಿಫ್ಟ್​ ಆಗಿದೆ.. ಅಧ್ಯಕ್ಷ ಸ್ಥಾನದ ಕುತೂಹಲಕ್ಕೆ ತೆರೆ ಬಿದ್ದಿದ್ದು, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿ ಹೆಚ್.ಎಸ್. ಮಂಜುನಾಥ್ ಆಯ್ಕೆಯಾಗಿದ್ದಾರೆ. ಭಾರೀ ಪೈಪೋಟಿ ನಡುವೆ ಮಂಜುನಾಥ್​ಗೆ ಪಟ್ಟ ಒಲಿದಿದೆ.

ರಾಜ್ಯ ಯೂತ್​ ಕಾಂಗ್ರೆಸ್​​ಗೆ ಹೊಸ ಕ್ಯಾಪ್ಟನ್​ ಆಗಮನ!

ಯುವ ಕಾಂಗ್ರೆಸ್​ಗೆ ಮಂಜುನಾಥ್ ಸಾರಥ್ಯ ಸಿಕ್ಕಿದೆ.. 2,77,000 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.. ಒಟ್ಟು 5,67,000 ಮತಗಳನ್ನ ಪಡೆದು ಗೆದ್ದಿರುವ ಮಂಜುನಾಥ್, 2,90,000 ಮತಗಳು ಪಡೆದ ಪ್ರತಿಸ್ಪರ್ಧಿ ದೀಪಿಕಾ ರೆಡ್ಡಿ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.. ಅಧ್ಯಕ್ಷ ಸ್ಥಾನಕ್ಕಾಗಿ ಬರೋಬ್ಬರಿ 13 ಮಂದಿ ಕಾಂಪಿಟೇಷನ್​​ನಲ್ಲಿದ್ರು..

ಇದನ್ನೂ ಓದಿ: ಹೊಸ ಹವ್ಯಾಸ ಬೆಳೆಸಿಕೊಂಡ ಸ್ಟಾರ್ ನಟಿ.. ಅದೊಂದು ಪ್ರಶ್ನೆಗೆ ಸಾಯಿ ಪಲ್ಲವಿ ಹೇಳಿದ್ದೇನು?

Advertisment

publive-image

ಯೂತ್​ ಕಾಂಗ್ರೆಸ್​ ಕ್ಯಾಪ್ಟನ್​

NSUI ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಎಂಟ್ರಿಯಾದ ಮಂಜುನಾಥ್​​, ಕಾಂಗ್ರೆಸ್​ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ರು.. ಎರಡು ಬಾರಿ NSUY ರಾಜ್ಯಾಧ್ಯಕ್ಷರಾಗಿದ್ದ ಮಂಜುನಾಥ್​​, ಯೂತ್​​ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮತ್ತು ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.. ಪ್ರಬಲ ಒಕ್ಕಲಿಗ ಸಮುದಾಯ, ಮಂಜುನಾಥ್​​​ಗೆ ಡಿಸಿಎಂ ಡಿಕೆಶಿಯ ಕೃಪಕಟಾಕ್ಷ ಇದೆ..

publive-image

ರಾಷ್ಟ್ರ ರಾಜಕಾರಣಕ್ಕೆ ಪುತ್ರಿ, ರಾಜ್ಯಕ್ಕೆ ಸತೀಶ್ ಪುತ್ರ

ರಾಜ್ಯ ರಾಜಕಾರಣಕ್ಕೆ ಸತೀಶ್​​ ಪುತ್ರ ರಾಹುಲ್​​ ಜಾರಕಿಹೊಳಿ ಎಂಟ್ರಿ ಆಗಿದೆ.. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗೆಲುವು ದಾಖಲಿಸಿದ್ದಾರೆ.. 1.80 ಲಕ್ಷ ಮತ ಪಡೆದು ಗೆದ್ದು ಬೀಗಿದ್ದಾರೆ.. ಗೋಕಾಕ್​ನಲ್ಲಿ ಸಚಿವ ಸತೀಶ್​​​ ಜಾರಕಿಹೊಳಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ..

ಆಗಸ್ಟ್ 20ರಿಂದ ಸೆಪ್ಟೆಂಬರ್ 22ರ ವರೆಗೆ ನಡೆದಿದ್ದ ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯಾದ್ಯತ ಮತದಾನ ನಡೆದಿತ್ತು.. ಅದರ ಫಲಿತಾಂಶ ನಿನ್ನೆ ಪ್ರಕಟವಾಗಿದೆ.. ಯುವ ಕಾಂಗ್ರೆಸ್ ಸಾರಥ್ಯ ಪಡೆದಿರುವ ಮಂಜುನಾಥ್​ ತಂಡಕ್ಕೆ ಸಾಕಷ್ಟು ಸವಾಲುಗಳಿವೆ.. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವ ಮತದಾರರನ್ನ ಸೆಳೆಯುವ ಕೆಲಸ, ಗ್ಯಾರಂಟಿ ಯೋಜನೆಗಳ ಪ್ರಚಾರ, ಯುವ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ವಿಚಾರಗಳನ್ನ ಪ್ರಚಾರ ನಡೆಸಬೇಕಿದೆ. ಯುವ ಕಾಂಗ್ರೆಸ್​ಗೆ ಹೊಸ ಚೈತನ್ಯ ನೀಡುವಲ್ಲಿ, ಯುವ ಕಾಂಗ್ರೆಸ್ ಪದಾಧಿಕಾರಿಗಳ ಮಂಜುನಾಥ್ ತಂಡ ಯಾವ ರೀತಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಲಿದೆ ಅನ್ನೋದು ಕಾದು ನೋಡಬೇಕೀದೆ.

Advertisment

ಇದನ್ನೂ ಓದಿ: ಇಂದು ದೆಹಲಿ ವಿಧಾನಸಭೆ ಮತ ಎಣಿಕೆ; ವಿಜಯಲಕ್ಷ್ಮಿ ಒಲಿಯೋದು ಯಾರಿಗೆ.. ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಕೇಜ್ರಿವಾಲ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment