/newsfirstlive-kannada/media/post_attachments/wp-content/uploads/2024/12/ASHWIN-3.jpg)
ಇತ್ತೀಚೆಗೆ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ ನಡೆದ 3ನೇ ಟೆಸ್ಟ್​ ಪಂದ್ಯ ಡ್ರಾ ಆಗಿದೆ. 3ನೇ ಪಂದ್ಯ ಮುಗಿಯುತ್ತಿದ್ದಂತೆ ಟೀಮ್​ ಇಂಡಿಯಾದ ಸ್ಟಾರ್​ ಆರ್​​. ಅಶ್ವಿನ್​ ಅವರು ಏಕಾಏಕಿ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ರು. ಈ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಭಾರತ ತಂಡದ ಪರ ಆಡಿ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿದ ಆಟಗಾರ ಅಶ್ವಿನ್​. ಇತ್ತೀಚೆಗೆ ತವರಿನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅಶ್ವಿನ್ ಅಮೋಘ ಪ್ರದರ್ಶನ ನೀಡಿದ್ರು. ನಂತರ ಶುರುವಾದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಮಂಕಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಶ್ವಿನ್​ ಅವರನ್ನು ಬೆಂಚ್​​ ಕಾಯಿಸಲಾಗಿತ್ತು. ಸದ್ಯ ಇವರ ವೃತ್ತಿಜೀವನಕ್ಕೆ ವಿಲನ್​ ಆಗಿದ್ಯಾರು? ಅನ್ನೋ ಚರ್ಚೆ ಜೋರಾಗಿದೆ.
ಅಶ್ವಿನ್​ ಪಾಲಿನ ವಿಲನ್​ ಯಾರು?
ಇನ್ನು, ಅಶ್ವಿನ್ ನಿವೃತ್ತಿ ನಿರ್ಧಾರದ ಹಿಂದೆ ಹೆಡ್ ಕೋಚ್ ಗೌತಮ್ ಗಂಭೀರ್ ಪಾತ್ರ ವಹಿಸಿರುವುದು ತಿಳಿದು ಬಂದಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಅಶ್ವಿನ್​ಗೆ ಹೋಗಲು ಇಷ್ಟವೇ ಇರಲಿಲ್ಲ. ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಅವಕಾಶ ಸಿಗುವ ಭರವಸೆ ಇರಲಿಲ್ಲ. ಬಿಸಿಸಿಐ ಆಶ್ವಾಸನೆ ನೀಡಿದ ಮೇಲೆ ಅಶ್ವಿನ್​ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದರು.
ಬೆಂಚ್​ ಕಾಯಿಸಿದ ಗಂಭೀರ್​​
ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆಡುವ ನಿರೀಕ್ಷೆಯಿತ್ತು. ಆದರೆ, ಇವರ ಬದಲಿಗೆ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಯ್ತು. ಇದರಿಂದ ಬೇಸತ್ತ ಅಶ್ವಿನ್​​​ ನಿವೃತ್ತಿ ಘೋಷಿಸಿದ್ರು. ಈ ಹಿಂದೆಯೇ ಟೀಮ್ ಇಂಡಿಯಾದಲ್ಲಿ ಆಗಲಿರೋ ಬದಲಾವಣೆಗಳ ಬಗ್ಗೆ ಗೌತಮ್ ಗಂಭೀರ್ ಸ್ಪಷ್ಟಪಡಿಸಿದರು. ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡ ಅಶ್ವಿನ್ 3ನೇ ಟೆಸ್ಟ್ ಮುಗಿಯುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us