/newsfirstlive-kannada/media/post_attachments/wp-content/uploads/2024/07/MUKESH-AMBANI.jpg)
ರಿಲಯನ್ಸ್ ಇಂಡಸ್ಟ್ರೀಸ್‌ನ (reliance industries) ಅಧ್ಯಕ್ಷ ಮತ್ತು ಎಂಡಿ ಮುಖೇಶ್ ಅಂಬಾನಿ ದೇಶದ ಶ್ರೀಮಂತ ವ್ಯಕ್ತಿ. ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೂ ಒಬ್ಬರು.
ತಂದೆ ಧೀರೂಭಾಯಿ ಅಂಬಾನಿ ಪ್ರಾರಂಭಿಸಿದ ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರವು ಇಂದು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಾಗಿದೆ. ತೈಲ ಮತ್ತು ಅನಿಲ, ಪೆಟ್ರೋಕೆಮಿಕಲ್ಸ್, ಟೆಲಿಕಾಂ, ರಿಲಯನ್ಸ್ ರಿಟೈಲ್ಸ್ ಮತ್ತು ಮಿಡಿಯಾ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಂಬಾನಿ ಸಾಮ್ರಾಜ್ಯ ಹರಡಿದೆ. ಅಚ್ಚರಿಯ ವಿಷಯ ಏನೆಂದರೆ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಮುಖೇಶ್ ಅಂಬಾನಿ ಗರಿಷ್ಠ ಪಾಲನ್ನು ಹೊಂದಿಲ್ಲ. ಅಂದ್ಹಾಗೆ ಅವರ ಇಡೀ ಕುಟುಂಬ ತಮ್ಮ ಕಂಪನಿಯಲ್ಲಿ ಷೇರು ಹೊಂದಿದೆ.
ಯಾರದ್ದು ಹೆಚ್ಚು ಪಾಲು..?
ಕಂಪನಿಯ ನಿಜವಾದ ಬಾಸ್ ಅವರ ತಾಯಿ ಕೋಕಿಲಾ ಬೆನ್ ಅಂಬಾನಿ (Kokilaben Ambani). ಅವರು ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಅತಿದೊಡ್ಡ ಪಾಲನ್ನು ಹೊಂದಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ.. ಮುಖೇಶ್ ಅಂಬಾನಿ ಅವರ ಒಟ್ಟು ಸಂಪತ್ತು ಪ್ರಸ್ತುತ 123.7 ಬಿಲಿಯನ್ ಅಮೆರಿಕನ್ ಡಾಲರ್ (10 ಲಕ್ಷ ಕೋಟಿ ರೂ.ಗಿಂತ ಹೆಚ್ಚು) ಆಗಿದೆ.
ಇದನ್ನೂ ಓದಿ:ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಅಂಬಾನಿ ಕುಟುಂಬವು ಸರಿಸುಮಾರು 50.39 ರಷ್ಟು ಪಾಲನ್ನು ಹೊಂದಿದೆ. ಉಳಿದ 49.61 ಪ್ರತಿಶತ ಷೇರುಗಳನ್ನು ಎಫ್‌ಐಐಗಳು (foreign institutional investor) ಮತ್ತು ಕಾರ್ಪೊರೇಟ್ ಸಂಸ್ಥೆಗಳು ಹೊಂದಿವೆ. ದೇಶದ ಅತಿ ದೊಡ್ಡ ವಿಮಾ ಕಂಪನಿ LIC, ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಶೇಕಡಾ 6.49 ಪಾಲನ್ನು ಹೊಂದಿದೆ.
ಕೋಕಿಲಾ ಬೆನ್ ಅಂಬಾನಿ ಶೇ.0.24ರಷ್ಟು ಪಾಲು
ಮುಖೇಶ್ ಅಂಬಾನಿಯವರ ತಾಯಿ ಕೋಕಿಲಾ ಬೆನ್ ಅಂಬಾನಿ ‘ರಿಲಯನ್ಸ್ ಇಂಡಸ್ಟ್ರೀಸ್’ನಲ್ಲಿ 1,57,41,322 ಷೇರುಗಳನ್ನು ಹೊಂದಿದ್ದಾರೆ. ಇದು ಕಂಪನಿಯ 0.24 ರಷ್ಟು ಪಾಲಾಗಿದೆ. ಕೋಕಿಲಾ ಬೆನ್ ಅಂಬಾನಿಯವರ ಒಟ್ಟು ಸಂಪತ್ತು 18,000 ಕೋಟಿ ರೂಪಾಯಿ ಎನ್ನಲಾಗಿದೆ. ಮುಕೇಶ್ ಅಂಬಾನಿ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ತಲಾ 80,52,021 ಷೇರುಗಳನ್ನು ಹೊಂದಿದ್ದಾರೆ. ಅಂದರೆ ಇವರು ಕಂಪನಿಯಲ್ಲಿ ಸುಮಾರು 0.12 ರಷ್ಟು ಪಾಲುದಾರಿಕೆ ಹೊಂದಿದಂತಾಗಿದೆ.
ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಸುಮಾರು 5000 ಕೋಟಿ ವೆಚ್ಚದಲ್ಲಿ ಮದುವೆ ಕಾರ್ಯವನ್ನು ನೆರವೇರಿಸಿರುವ ಮದುವೆಗೆ ದೇಶ-ವಿದೇಶಗಳಿಂದ ಗಣ್ಯರು ಆಗಮಿಸಿದ್ದರು. ಜುಲೈ 12 ರಂದು ಮದುವೆ ನಡೆದಿದೆ.
ಇದನ್ನೂ ಓದಿ:ಹೆಚ್ಚಿದ ಗೌರವ.. ಸ್ಥಳೀಯ ಆರ್ಥಿಕತೆಗೆ ಬಲ.. ಮುಖೇಶ್ ಅಂಬಾನಿ ಪುತ್ರನ ಮದ್ವೆಯಿಂದ ಯಾರಿಗೆ, ಹೇಗೆ ಲಾಭ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ